ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಸದಸ್ಯರು ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಹಕಾರ ಸಂಘಗಳ ನೌಕರರು ಅನೇಕ ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿವೆ, ನೌಕರರಿಗೆ ವೇತನ, ಪಿಂಚಣಿ ಮತ್ತಿತರೆ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲದೆ ಪರಿತಪಿಸುವಂತಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸರಕಾರ ಮತ್ತು ರೈತರ ಕೊಂಡಿಯಾಗಿ ಸಾಲವಿತರಣೆ, ವಸೂಲಾತಿ, ಪಡಿತರ ವಿತರಣೆ, ಬಿತ್ತನೆ ಬೀಜ, ರಸಗೊಬ್ಬರ, ಔಷಧಿಗಳು ಹಾಗೂ ಕೃಷಿ ಪರಿಕರ ವಿತರಣಾ ವ್ಯವಸ್ಥೆ ಮಾಡುತ್ತಿದ್ದರೂ ನೌಕರರಿಗೆ ಸೇವಾ ಭದ್ರತೆ ಇಲ್ಲದೆ ಕುಟುಂಬಗಳು ಪರಿತಪಿಸುವಂತಾಗಿದೆ.
ಆದ್ದರಿಂದ ಸರಕಾರ ನೌಕರರಿಗೆ ಸೇವಾಭದ್ರತೆ, ಪಿಂಚಣಿ ಮುಂತಾದ ಸವಲತ್ತುಗಳನ್ನು ಹಾಗೂ ಸರಕಾರ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿ ನೌಕರರಿಗೆ ವೇತನ ನೀಡಬೇಕೆಂದು ಸಂಘದ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಉಪ ತಹಶೀಲ್ದಾರ್ ರಾಧಾಕೃಷ್ಣಭಟ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ಒಕ್ಕೂಟದ ಮುಖಂಡರಾದ ನಾಗರಾಜ್, ಜಯರಾಂ, ಗಜೇಂದ್ರ, ಜಿ.ಎಂ. ಸೋಮಶೇಖರ್, ಮಹೇಶ್ವರಪ್ಪ, ಕೂಡ್ಲು ಯಜ್ಞಯ್ಯ, ನಾಗರತ್ನ ಮುಂತಾದವರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post