ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಠ್ರಸೇನಾ ಗಣಪತಿ ವಿಸರ್ಜನಾ ಕಾರ್ಯಕ್ಕೆ ಪೋಲೀಸ್ ಇಲಾಖೆಯು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅರೆ ಮಿಲ್ಟ್ರಿ ಪಡೆ ಕ್ಷಿಪ್ರ ಕಾರ್ಯಾಚರಣೆ ಸೇರಿದಂತೆ ಸುಮಾರು 2 ಸಾವಿರ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಸರ್ಕಲ್ ಇನ್ಸ್‍ಪೆಕ್ಟರ್ ಚಂದ್ರಶೇಖರ್ ತಿಳಿಸಿದರು.
ಸೆ: 21 ರಂದು ಶುಕ್ರವಾರ ಗಣಪತಿ ವಿಸರ್ಜನೆ ನಡೆಯಲಿರುವ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು ಮೆರವಣಿಗೆಯ ಸಂದರ್ಭದಲ್ಲಿ ಕಾಣದ ಕೈಗಳು ಅಥವಾ ಸಮಾಜಘಾತಕ ಶಕ್ತಿಗಳ ಕುರಿತು ಎಚ್ಚರ ವಹಿಸಬೇಕು. ಶಾಂತಿ ಕದಡಲು ಯತ್ನಿಸಿದರೆ ಅಂತಹವರ ಮಾಹಿತಿ ಇಲಾಖೆಗೆ ತಿಳಿಸಿದರೆ ಅದೇ ನಿಜವಾದ ಸಮಾಜ ಸೇವೆಯಾಗಲಿದೆ. ಮೆರವಣಿಗೆಯ ಸಂದರ್ಭದಲ್ಲಿ ಸಮಾರು 127 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿರಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಿಂದ ಆರ್‍ಎಎಫ್ ತುಕಡಿಯನ್ನು ಕರೆಸಲಾಗಿದೆ. ಓರ್ವ ಜಿಲ್ಲಾ ರಕ್ಷಣಾಧಿಕಾರಿ, 3 ಹೆಚ್ಚುವರಿ ರಕ್ಷಣಾಧಿಕಾರಿ, 6 ಡಿವೈಎಸ್‍ಪಿ, 13 ಸಿಪಿಐ, 22 ಪಿಎಸ್‍ಐ, 65 ಎಎಸ್‍ಐ, ತರಬೇತಿ ಪಡೆಯುತ್ತಿರುವ 200 ಪಿಎಸ್‍ಐಗಳು, 800 ಮಂದಿ ಪೊಲೀಸರು, 250 ಗೃಹ ರಕ್ಷಕದಳ, 7 ಕೆಎಸ್‍ಆರ್‍ಪಿ, 8 ಡಿಎಆರ್ ತುಕಡಿಗಳು, ನಕ್ಸಲ್ ನಿಗ್ರಹ ಪಡೆಯ 2 ತುಕಡಿಗಳು, ಆರ್‍ಎಎಫ್ 1, ಕ್ಷಿಪ್ರ ಕಾರ್ಯಾಚರಣೆ ಪಡೆ 1, ನಗರದೆಲ್ಲೆಡೆ 120 ಕ್ಯಾಮರ ಅಳವಡಿಕೆ, 33 ಸ್ಕೈ ಕೇಂದ್ರಗಳು, 75 ಮಂದಿ ವಿಡಿಯೋ ಗ್ರಾಫರ್‍ಗಳು, 20 ಚಿತಾ ವಾಹನಗಳು, ಮಫ್ತಿಯಲ್ಲಿ 50 ಮಂದಿ ಪೇದೆಗಳು ಕಾರ್ಯ ನಿರ್ವಹಿಸಿದರೆ, 8 ಗಸ್ತು ವಾಹನಗಳಲ್ಲಿ 2 ಸಿಪಿಐ ಮತ್ತು 1 ಡಿವೈಎಸ್‍ಪಿ ಹಗಲಿರುಳು ಕಾರ್ಯನಿರ್ವಹಿಸಲಿದ್ದಾರೆ.
ಮುನ್ನಚ್ಚರಿಕೆ ಕ್ರಮವಾಗಿ ಶಾಂತಿಗೆ ಭಂಗ ತರುವವರನ್ನು ಬಂಧಿಸಿ 107 ಕಲಂ ಅನ್ವಯ ಈಗಾಗಲೆ ನಗರ ಪ್ರದೇಶದಲ್ಲಿ 350 ಸೇರಿದಂತೆ ವಿವಿಧ ಠಾಣೆಗಳಿಂದ ಒಟ್ಟು 600 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಬೈನಾಕುಲರ್‍ಗಳಿಂದ ವೀಕ್ಷಿಸಿ ಪತ್ತೆ ಹಚ್ಚುವ ಹದ್ದಿನ ಕಣ್ಣುಗಳು ಕಾರ್ಯನಿರ್ವಹಿಸಿದೆ ಸ್ಕೈ ಕೇಂದ್ರಗಳ ಸಿಬ್ಬಂದಿಗಳಿಗೆ ಮುನ್ನಚ್ಚರಿಕೆ ಕ್ರಮವಾಗಿ ಪಿಸ್ತೂಲ್‍ಗಳನ್ನು ನೀಡಲಾಗಿದ್ದು, ಶಾಂತಿಯಿಂದ ಸಹಕರಿಸುವಂತೆ ಮನವಿ ಮಾಡಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post