ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪತಿ ಆತ್ಮಹತ್ಯೆ ಮಾಡಿಕೊಂಡ ಒಂದೇ ವಾರದಲ್ಲಿ ಪತ್ನಿಯೂ ಸಹ ಆತ್ಮಹತ್ಯೆ #Suicide ಮಾಡಿಕೊಂಡಿರುವ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯಲ್ಲಿ ಸ್ವಾತಿ(26) ಎಂದು ಗುರುತಿಸಲಾಗಿದೆ.
ಕೆಎಸ್’ಐಎಫ್’ಎಸ್`ನಲ್ಲಿ ಡಿ ದರ್ಜೆ ನೌಕರರಾಗಿದ್ದ ಜಗದೀಶ್ ಎನ್ನುವವರು ಶಿವರಾತ್ರಿ ದಿನದಂದು ಮನೆಯಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಭದ್ರಾವತಿಯ #Bhadravathi ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವು ಎಂದು ದೂರು ದಾಖಲಾಗಿತ್ತು.
ಇದಾದ ಒಂದು ವಾರದಲ್ಲೇ ಜಗದೀಶ್ ಪತ್ನಿ ಸ್ವಾತಿ ಅವರೂ ಸಹ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಾತಿ ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್ ನಲ್ಪಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಇವರ ಆತ್ಮಹತ್ತೆಯ ವೇಳೆ ಸ್ವಾತಿ ಮೈಮೇಲೆ ತಾಳಿ, ಮತ್ತು ಇತರೆ ಚಿನ್ನಾಭರಣವನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.
ಶಿವಮೊಗ್ಗದ ಮಾಳೂರು ಪೊಲೀಸ್ ಠಾಣೆಯೊಂದರಲ್ಲಿ ದಫೇದಾರ್ ಆಗಿದ್ದವರೊಬ್ಬರು ಸ್ವಾತಿಗೆ `ನಿನ್ನ ಪತಿ’ ಸಾವಿಗೆ ನೀನೆ ಕಾರಣ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿ ತನ್ನ ತಾಯಿಗೆ ಮೆಸೇಜ್ ಮಾಡಿರುವುದು ಈಗ ಸಂಚಲನ ಉಂಟು ಮಾಡಿದೆ.
ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















