ಭದ್ರಾವತಿ: ಯೋಗ ಎಂದರೆ ವಿವಿಧ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ, ಎಲ್ಲಾ ಭಿನ್ನತೆಗಳನ್ನು ಮೀರಿ ಉಳಿದುದರಲ್ಲಿ ಐಕ್ಯವಾಗುವುದು ಯೋಗ ಎಂದು ಜನ್ನಾಪುರ ಹ್ಯಾಪಿ ಲೀವಿಂಗ್ ಲೈಫ್’ನ ಯೋಗ ಗುರು ಮಹೇಶ್ ತಿಳಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹ್ಯಾಪಿ ಲೀವಿಂಗ್ ಲೈಫ್ ಹಾಗೂ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 5 ನೇ ವರ್ಷದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗದಲ್ಲಿ ಐಕ್ಯವಾಗುವುದು ಎಂದರೆ ಶಾಂತಿ, ನೆಮ್ಮದಿ, ಸುಖ, ಸಂತೋಷ ಸಿಗುವುದು ಎಂದರ್ಥವಾಗಿದೆ. ಅದು ಯೋಗದ ಒಂದು ಭಾಗ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ್ಮನ್ ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕಿ ದಾಕ್ಷಾಯಿಣಿ, ಪ್ರಮುಖರಾದ ಕಲ್ಪನಾ ಲೋಕೇಶ್, ರಮಾ ವೆಂಕಟೇಶ್, ಶೈಲಜಾರಾಮಕೃಷ್ಣ, ಜೆವಿಆರ್, ಭವಾನಿ ಶಂಕರ್, ಜಯದೇವ, ತಿಲಕ್, ನಾಗವೇಣಿ, ಗಗನ, ಚಂದ್ರಕಲಾ, ರಾಮು ಮತ್ತಿತರರಿದ್ದರು. ಲೋಕೇಶ್ ಸ್ವಾಗತಿಸಿ. ಆರ್. ಮುಕುಂದಯ್ಯ ವಂದಿಸಿದರು.
ಇದೇ ಸಂದರ್ಭದಲ್ಲಿ ಡಾ.ರಾಜಕುಮಾರ್ ಸ್ಮರಣೀಯ ಪ್ರಶಸ್ತಿ ವಿಜೇತರಾದ ಋತ್ವಿಕ್ ಹಾಗು ಎಂ.ನಿಶ್ಚಿತಾ ಇವರುಗಳನ್ನು ಸನ್ಮಾನಿಸಲಾಯಿತು. ನಂತರ ಯೋಗ ಪಟುಗಳಿಂದ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post