ಭದ್ರಾವತಿ: ಇಂದಿನ ಯುವ ಜನಾಂಗ ಶಿವಶರಣರ ಮೌಲ್ಯ ಅರಿಯುವ ಉದ್ದೇಶ ಹೊತ್ತು ಶರಣ ಸಾಹಿತ್ಯ ಪರಿಷತ್ ಕಾಲೇಜುಗಳಲ್ಲಿ ದತ್ತಿ ಕಾರ್ಯಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು 8 ನೇ ಕನ್ನಡ ಸಾತ್ಯ ಪರಿಷತ್ ಸರ್ವಾಧ್ಯಕ್ಷ ಹಾಗು ಶರಣ ಸಾತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎನ್. ಮಹಾರುದ್ರ ಹೇಳಿದರು.
ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ 602 ನೆಯ ವಚನ ಮಂಟಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು 12 ನೇ ಶತಮಾನದಲ್ಲಿ ಶಿವಶರಣರು ಬದುಕಿದ ಮತ್ತು ಬದುಕಿನ ಹಾದಿಯಲ್ಲಿ ನಡೆದು ಸಮಾನ ದೃಷ್ಠಿಯಿಂದ ಸಮ ಸಮಾಜದ ಗೌರವಯುತ ಸಮಾಜ ಕಟ್ಟಿದ್ದರು. ಪ್ರಪಂಚದಲ್ಲಿ ಮೇಲು ಕೀಳು, ವರ್ಣಬೇಧ ತುಂಬಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಹೊಸ ಸಮಾಜ ಬೆಳೆಸುವ ಉದ್ದೇಶದಿಂದ ಶರಣ ಸಾಹಿತ್ಯ ಪ್ರಯತ್ನಿಸುತ್ತಿದೆ. ಶರಣ ಸಾಹಿತ್ಯ ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಕೀರ್ತಿ ಇದೆ ಎಂದರು.
ಉದ್ಯಮಿ ಜಗನ್ನಾಥ್ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಗಳಲ್ಲಿ ಮಾತ್ರ ಆಸಕ್ತಿ ತೋರದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಶರಣರು ಹಾಕಿದ ಮಾರ್ಗದಲ್ಲಿ ನಡೆದಲ್ಲಿ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ. ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುವ ಸಾಹಿತ್ಯ ಮತ್ತಿತರೆ ಚಟುವಟಿಕೆಗಳ ಕುರಿತು ಅರಿತು ಬಾಳುವಂತಾಗಬೇಕೆಂದರು.
ಬೊಮ್ಮನಕಟ್ಟೆ ಸರ್.ಎಂ. ವಿಶ್ವೇಶ್ವರಯ್ಯ ಸರಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವ ಉಪನ್ಯಾಸ ನೀಡಿ, ಸಾಹಿತ್ಯವನ್ನು ಬಗೆದು ನೂಡುವ ದಿನಗಳು ಮಾಯವಾಗಿ ಸಮಸ್ಯೆಗಳನ್ನು ಎದುರಿಸುವ ದಿನಗಳು ಬರುತ್ತಿವೆ. ಬದುಕುಗಳನ್ನು ರೂಪಿಸಿಕೊಳ್ಳುವ ದಿನಗಳಲ್ಲಿ ನಾವುಗಳು ವಾಸಿಸುತ್ತಿದ್ದೇವೆ. ಗೊಂದಲಗಳನ್ನು ಸೃಷ್ಠಿಸಿಕೊಂಡ ನಿವಾರಣೆಗೆ ಕಾದು ನೋಡುವಂತಾಗಿದೆ. 10 ನೇ ಶತಮಾನದಲ್ಲಿ ಅಕ್ಕ ಮಹಾದೇವಿ ಕಾಳಜಿ ಹೊತ್ತ ಪರಿಸರದ ಪ್ರೇಮಿಗಳಾಗಿದ್ದರು.
ಉನ್ನತಿ ಪೌಂಡೇಷನ್ ಸಂಸ್ಥೆಯ ಕೌಶಲ್ಯ ಅಭಿವೃದ್ದಿ ಅಧಿಕಾರಿ ವಿನೋದ್ ಕುಮಾರ್ ಮಾತನಾಡಿ, ಶರಣರ ಸಾಹಿತ್ಯದ ವೈಶಿಷ್ಠ್ಯತೆ ಕುರಿತು ಮಾತನಾಡಿ, ವಚನ ಹಾಗೂ ಶರಣ ಸಾಹಿತ್ಯಗಳು ಇಂದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಶಿವ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಹೆಚ್ಚು ಪ್ರಸಿದ್ದವಾಗಿ ನೆಲೆವೂರಿವೆ. ಹಿಂದಿನ ಶಿವ ಶರಣರ ಮಾರ್ಗದಲ್ಲಿ ಇಂದಿನ ವಿದ್ಯಾರ್ಥಿಗಳು ನಡೆಯುವಂತಾಗಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದರು. ಪ್ರಾಧ್ಯಾಪಕ ಬಿ.ಜಿ. ಅಮೃತೇಶ್ ಪ್ರಾಸ್ತಾಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಉನ್ನತಿ ಫೌಂಡೇಷನ್ ಸಂಸ್ಥೆಯ ಏರ್ಪಡಿಸಿದ್ದ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post