ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸೂಕ್ತ ತರಬೇತಿ, ನಿಷ್ಠೆ ಮತ್ತು ವಿಶೇಷ ನಿರಂತರ ಪರಿಶ್ರಮದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯುವ ಜನರು ಉತ್ತೀರ್ಣರಾಗಿ ನಿರೀಕ್ಷಿತ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ಬೊಮ್ಮನಕಟ್ಟೆಯ ಸರ್.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಐಕ್ಯೂಎಸಿ, ಉದ್ಯೋಗ, ಮಾಹಿತಿ ಮತ್ತು ಮಾರ್ಗದರ್ಶನ ವಿಭಾಗವು ಶಿವಮೊಗ್ಗದ ಅಚೀವರ್ ಕೋಚಿಂಗ್ ಸೆಂಟರ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಚೀವರ್ ಕೋಚಿಂಗ್ ಸೆಂಟರ್’ನ ತಜ್ಞ ಮಾರ್ಗದರ್ಶನಕಾರ ವರುಣ್, ಮಹೇಶ್ ಮತ್ತು ಅಕ್ಷಯ್ ಅವರುಗಳು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post