ಬೆಂಗಳೂರು: ಕಳೆದ 6 ದಶಕಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ, ದೇಶ ವಿದೇಶಗಳಲ್ಲಿ ಧರ್ಮ ಪ್ರಸಾರ ಮಾಡುತ್ತ ಅರ್ಥಪೂರ್ಣ ಬದುಕನ್ನು ಸಾಗಿಸಿ ಭಾರತೀಯ ಸನಾತನ ಸಂಸ್ಕøತಿಯ ವೇದವಿದ್ಯಾ ಪ್ರಸರಣ ಮತ್ತು ಭಜನಾ ಪರಂಪರೆಯನ್ನು ಪುನರುತ್ಥಾನಗೊಳಿಸಲು ಕಂಕಣ ಬದ್ಧರಾಗಿ ಸೇವೆ ಸಲ್ಲಿಸುತ್ತಿರುವ ಬ್ರಹ್ಮತೇಜ ವೆಂಕಟರಾಮಯ್ಯ ರವರ ಕೊಡುಗೆ ಅವಿಸ್ಮರಣಿಯ ಮತ್ತು ಮಾದರಿ ಎಂದು ಹಿರಿಯ ದಾಸ ಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ರವರು ತಿಳಿಸಿದರು.
ನಗರದ ಬ್ರಹ್ಮ ಚೈತನ್ಯ ಮಂದಿರದಲ್ಲಿ ಡಾ. ವೆಂಕಟರಾಮಯ್ಯ ರವರ ಸಹಸ್ರ ಚಂದ್ರ ದರ್ಶನ ಶಾಂತಿಯ ಗುರು ವಂದನಾ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸುತ್ತಾ ಭಕ್ತಿಯ ಪ್ರತಿಷ್ಠಾಪನೆಗೆ, ಪೋಷಣೆಗೆ, ಪ್ರಸರಣಕ್ಕೆ ಭಾರತದಲ್ಲಿ ಕಾಲದಿಂದ ಕಾಲಕ್ಕೆ ಅನೇಕರು ಹೃತ್ಪೂರ್ವಕವಾಗಿ ಶ್ರಮಿಸಿದರು. ತಮ್ಮದೇ ಆದ ರೀತಿಯಲ್ಲಿ ಉತ್ತಮ ಕೊಡುಗೆ ನೀಡಿದರು. ಆಧುನಿಕ ಭಾರತದ ಕಳೆದ ಐವತ್ತು ವರ್ಷಗಳಲ್ಲಿ ಭಕ್ತಿ ಸಂಸ್ಕøತಿಯನ್ನು ಕರ್ನಾಟಕದ, ಭಾರತದ ನಾನಾ ಭಾಗಗಳಲ್ಲಿ ಹಾಗೂ ದೇಶವಿದೇಶದಲ್ಲಿ ಅತ್ಯಂತ ವ್ಯಾಪಕವಾಗಿ ಪ್ರಸರಿಸಿ, ಅದನ್ನು ಜನಪ್ರಿಯಮಾಡಿ, ಭಕ್ತಿಯ ಪ್ರಚಂಡ ಉನ್ಮಾದ ಮಾಡಿದವರು ಬ್ರಹ್ಮತೇಜರವರು ಎಂದು ಪ್ರಶಂಸಿದರು.
ಗುರು ವಂದನಾ ಕಾರ್ಯಕ್ರಮದಲ್ಲಿ ಓಂಕಾರಾಶ್ರಮದ ಶ್ರೀ ಮಧುಸೂದನನಂದಪುರಿ ಸ್ವಾಮಿಜಿ, ಕೂಡ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಬೇಲಿ ಮಠದ ಶಿವರುದ್ರ ಸ್ವಾಮಿಗಳು, ನಿವೃತ್ತ ನ್ಯಾ. ಎಂ.ಎನ್. ವೆಂಕಟಾಚಲಯ್ಯ , ಶಾಸಕ ರವಿಸುಬ್ರಹ್ಮಣ್ಯಂ, ಅದಮ್ಯ ಚೇತನದ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಸಂಸ್ಕøತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಡಾ.ಕೆ.ಎನ್.ಎನ್.ಶರ್ಮ ಮೊದಲಾದವರು ಉಪಸ್ಥಿತರಿದ್ದರು.
Discussion about this post