Wednesday, July 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Editorial

ಸಂಪಾದಕೀಯ: ರಾಜ್ಯ ಜೆಡಿಎಸ್’ಗೆ ದತ್ತ ಸಾರಥಿಯಾಗಲಿ

June 26, 2019
in Editorial
0 0
0
file image

file image

Share on facebookShare on TwitterWhatsapp
Read - 2 minutes

ಯಾವುದೇ ಪಕ್ಷವನ್ನು ಮುನ್ನಡೆಸಲು ಉತ್ತಮ ನಡವಳಿಕೆ, ಸಂಘಟನಾಶಕ್ತಿ, ಮಾತುಗಾರಿಕೆ, ತಾರ್ಕಿಕ ಕೌಶಲ ಇತ್ಯಾದಿ ಮುಖ್ಯ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸದ್ಯ ಪ್ರಸ್ತಾಪಿತವಾಗಿರುವ ಹೆಸರುಗಳೆಂದರೆ ಮಧು ಬಂಗಾರಪ್ಪ ಮತ್ತು ದತ್ತ

ಎರಡನ್ನೂ ಪಕ್ಷದ ಆಯಾಮದಿಂದಲೇ ಪರಿಶೀಲನೆ ಮಾಡುವುದು ಒಳಿತು. ಮಧು ಬಂಗಾರಪ್ಪ, ಒಮ್ಮೆ ಶಾಸಕರಾಗಿ ಅನುಭವವಿದೆ. ಪಕ್ಷ ಸಂಘಟನೆಯ ಬಗ್ಗೆ ತೀವ್ರತರ ಮನೋಧರ್ಮ ಕಂಡುಬರುವುದಿಲ್ಲ. ಏಕೆಂದರೆ ಅವರು ಶಾಸಕರಾಗುವ ಹೊತ್ತಿನಲ್ಲಿ ತಂದೆಯವರ ನೆರಳು ಅಧಿಕವಾಗಿತ್ತು. ಕೌಟುಂಬಿಕ ಅನುಕಂಪ ಅಗಾಧವಾಗಿತ್ತು.

ಶಾಸಕರಾಗಿದ್ದ ಅವಧಿಯಲ್ಲಿ ಜನಾನುರಾಗಿಯಾಗಿ ಶ್ರಮಿಸಿದ್ದಾರೆ. ಅದು ಸೊರಬದ ಜನತೆಗೆ ಮಾತ್ರ ಸೀಮಿತ. ಜನರ ಪ್ರೀತಿ ಗಳಿಸುವಲ್ಲಿ ಅವರಿಗೆ ಫುಲ್ ಮಾರ್ಕ್ಸ್‌ ಸಿಗುತ್ತದೆ. ಆದರೆ ಅದು ಸೊರಬದ ವ್ಯಾಪ್ತಿ ದಾಟಲು ಅಸಮರ್ಥವಾಯಿತೆನ್ನಬಹುದು.

ಬಂಗಾರಪ್ಪನವರ ಜನಪ್ರಿಯತೆ ಸಾರ್ಥಕವಾಗಿ ಒಂದು ಸಲ ಈರ್ವರು ಪುತ್ರರಿಗೂ ಫಲ ನೀಡಿದೆ. ಆದರೆ ನಂತರದ ಅವಧಿಗೆ ಸ್ವಸಾಮರ್ಥ್ಯವನ್ನು ತೋರಿ ಚುನಾವಣೆ ಎದುರಿಸುವ ಸಂಪ್ರದಾಯಕ್ಕೆ ಬದ್ಧರಾಗಿರಬೇಕು. ಅಂತಹ ಸಾಮರ್ಥ್ಯ ಮಧು ಅವರಿಗೆ ಇತ್ತು. ಆದರೆ ಮೋದಿ ಹವಾದಲ್ಲಿ ತೇಲಿ ಹೋಯಿತು.
ಹೀಗಾಗಿ ಅವರ ಜಾರಿದ ಭವಿಷ್ಯವನ್ನು ಹಿಡಿತಕ್ಕೆ ತರುವ ನಿಟ್ಟಿನಲ್ಲಿ ಮೈತ್ರಿ ರಾಜಕೀಯ ಸನ್ನಿವೇಶ ಬಳಸಿಕೊಳ್ಳಲು ಹವಣಿಸಿದ್ದುದು ಉಚಿತವೇ. ಆದರೆ ಮತ್ತೆ ಮೋದಿ ಹವಾ ಎದುರು ಲೋಕಸಭೆಯ ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಮಧು ಅವರನ್ನು ಅಗ್ನಿ ಪರೀಕ್ಷೆಗೊಳಪಡಿಸಲಾಯಿತು.

ಮತದಾರರು ಬಹಳ ಜಾಣರು. ಸ್ಥಳೀಯ ಸಂಸ್ಥೆಗಳಿಗೆ, ವಿಧಾನಸಭೆಗೆ ಹಾಗೂ ಲೋಕಸಭೆಗೆ ಯಾವ ಯಾವ ಪಕ್ಷಗಳನ್ನು ಬೆಂಬಲಿಸಬೇಕು ಎಂಬ ಪ್ರಜ್ಞಾಧಾರಕರು.

ಕಾಂಗ್ರೆಸ್’ಗೆ ಸ್ವಯಂಕೃತಾಪರಾಧದಿಂದ ಅಭ್ಯರ್ಥಿಗಳ ಕೊರತೆ, ಜೆಡಿಎಸ್’ಗೆ ಹೊಳೆಯಲ್ಲಿ ಸಿಕ್ಕ ಹುಲ್ಲುಕಡ್ಡಿಯಂತೆ ಸಿಕ್ಕರು ಮಧು. ಆದರೆ ಮತದಾರ ಬೇರೆಯ ವರಸೆ ತೋರಿಸಿದ. ಇದಕ್ಕೆ ರಾಜಕೀಯ ಪಕ್ಷಗಳು ಮುತ್ಸದ್ದಿಗಳು(?) ಹಣ, ಹೆಂಡ ಆಕರ್ಷಣೆ ಅಂತ ಮಾಮೂಲಿ ಹಣೆಪಟ್ಟಿ ಕೊಡುವುದು ರೂಢಿಯಾಗಿ ಬಿಟ್ಟಿದೆ.

ಏನೇ ಇರಲಿ ಜೆಡಿಎಸ್’ಗೆ ಅಧ್ಯಕ್ಷ ಪಟ್ಟ ನೀಡುವ ಮಾನದಂಡದಲ್ಲಿ ಮಧು ಕೊಂಚ ಮತ್ತೆ ನಿರಾಸೆ ಹುಟ್ಟಿಸುತ್ತಾರೆ ಎನ್ನಬಹುದು. ಅವರು ರಾಜ್ಯಮಟ್ಟದಲ್ಲಿ ಇನ್ನೂ ಹೆಸರು ಗಳಿಸಬೇಕಿದೆ. ನೋಡೌಟ್, ಅವರು ಮಾನವೀಯ ಸಂಬಂಧಗಳನ್ನು ಚೆನ್ನಾಗಿ ಸ್ಥಾಪಿಸುವ ಕೌಶಲಿಗ. ಆದರೆ ಸದ್ಯ ಜೆಡಿಎಸ್’ಗೆ ಹಿಂದುಳಿದ ವರ್ಗಗಳ ಅಭ್ಯರ್ಥಿ ಹೆಡ್ ಆಗಬೇಕೆಂಬ ವಾಂಛೆ ಹಿಂದೆ ಎಂದೂ ವ್ಯಕ್ತಪಟ್ಟಿರಲಿಲ್ಲ. ಸಾಮರ್ಥ್ಯವಿರುವ ವಿಶ್ವನಾಥ್ ಅವರನ್ನೇ ಮೂಲೆಗುಂಪು ಮಾಡಿದ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಅಭ್ಯರ್ಥಿಗೂ ಅದೇ ಗತಿ ಎಂಬುದು ನಿಸ್ಸಂಶಯ.

ಮಧು ಅವರಿಗೆ ರಾಜಕೀಯ ಪುನರ್ಜನ್ಮ ಕೊಡುವುದೇ ಆದರೆ ಅವರನ್ನು ತಕ್ಷಣ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಅಥವಾ ಆಯ್ಕೆ ಮಾಡುವ ಬುದ್ಧಿವಂತಿಕೆ ತೋರಿಸಿದರೆ ದೇವೇಗೌಡರ ಹಿರಿತನಕ್ಕೆ ಹೊಳಪು ಬರುತ್ತದೆ. ಆದ್ದರಿಂದ ಮಧು ಅವರು ಮುಂದೊಂದು ದಿನ ಪಟ್ಟಕ್ಕೆ ಕೂರಬಹುದು. ಈಗ ಪಕ್ವರಾಗಿಲ್ಲ.

ಮುಂದಿನ ಆಯ್ಕೆ ಯಾರು?
ಇದಕ್ಕೆ ಉತ್ತರ ಹುಡುಕುವಲ್ಲಿ ತುಸು ಬೌದ್ಧಿಕ ಕಸರತ್ತೇ ಬೇಕಿದೆ. ದತ್ತರವರು ದೀರ್ಘಕಾಲ ರಾಜಕೀಯದಲ್ಲಿ ಹಿರಿಯ ಗೌಡರ ಆಪ್ತವಲಯದಲ್ಲಿ ಬೆರೆತವರು. ಮೊದಲಿಗೇ ಯಾವುದೇ ಸ್ಥಾನಮಾನಕ್ಕೆ ಆಸೆ ಪಡದೇ ನಿಷ್ಠರಾಗಿ ತಮ್ಮ ರಾಜಕೀಯದ ಮಹತ್ವದ ವರ್ಷಗಳನ್ನು ತೇಯ್ದವರಾಗಿದ್ದಾರೆ.
ತಾನಾಗೇ ಹಿರಿಯ ಗೌಡರ ಆತ್ಮೀಯತೆಯ ಧ್ಯೋತಕವಾಗಿ ವಿಧಾನ ಪರಿಷತ್ತು ಪ್ರವೇಶಿಸಿದರು. ಸದನದಲ್ಲಿ ವಾಗ್ಮಿಗಳಾಗಿ ಜನರ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ವಕ್ತಾರರಾಗಿ ಪಕ್ಷದ ಇಮೇಜನ್ನು ಕುಂದು ಗೆಡಿಸದೇ ಕಾಯ್ದವರು. ಮೇಲಾಗಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಜ್ಞಾನವುಳ್ಳ ಮೇಧಾವಿ. ಅವರು ಎಂಎಲ್ ಸಿ ಆಗಿ ಸಿಕ್ಕ ಅವಕಾಶವನ್ನು ದುಂದುಗೆಡಿಸದೇ ಪಕ್ಷದ ಬೆಳೆವಣಿಗೆ ಮತ್ತು ವ್ಯಾಪಕ ಜನಾಭಿಪ್ರಾಯ ಒಲಿದು ಬರುವಂತೆ ಪ್ರಯತ್ನಿಸಿದವರು.

ಸರಳ ಹಾಗೂ ನೇರ ಬದುಕಿನಿಂದಾಗಿ ಪಾರದರ್ಶಕವಾದ ನಡೆಗಳ ಫಲಿತಾಂಶವೇ ಅವರನ್ನು ಕಡೂರು ಕ್ಷೇತ್ರದ ಶಾಸಕರನ್ನಾಗಿಸಿತು, ಇದೆಲ್ಲ ಇತಿಹಾಸ.
ಆದರೆ ಇತಿಹಾಸ ಮರೆತವ ಭವಿಷ್ಯ ರೂಪಿಸಿಕೊಳ್ಳಲಾರ. ಈಗ ದತ್ತ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಜಾತೀಯ ಮಸೆತಕ್ಕೆ ಸಿಕ್ಕು ವಿಫಲರಾದರು. ಆ ಸೋಲು ಅವರ ಸೇವೆಗಲ್ಲ, ಜನರ ತಪ್ಪು ಆಲೋಚನೆಗಷ್ಟೆ.

ಪ್ರತಿಯೊಬ್ಬರ ಮನೆ ಮನಕ್ಕೆ ತಲುಪುತ್ತಿದ್ದ ದತ್ತಣ್ಣ ಸೋತರು ಎಂಬ ಸಂಗತಿ ಇಡೀ ಜೆಡಿಎಸ್’ಗೆ ಅಚ್ಚರಿ. ಹೊಳಪು ಕಳೆದುಕೊಂಡ ಈಗಿನ ಅಲ್ಪಮತದ ಸಂಕೇತವಾಗಿರಬಹುದು. ಈಗ ಮತ್ತೆ ದತ್ತಣ್ಣನವರಿಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷಗಿರಿಯಿದೆ.

ಅವರ ಬುದ್ಧಿಮತ್ತೆಗೆ ಸವಾಲಾದ ಈ ಸ್ಥಾನವನ್ನು ಅವರು ಬಳಸಲಿಲ್ಲವೆ? ಲೋಕಸಭೆಗೆ ಕೇವಲ ಒಂದೇ ಅಭ್ಯರ್ಥಿ ಆಯ್ಕೆ. ಇದು ಪಕ್ಷದ ಒಟ್ಟು ನೀತಿಯ ಬಗ್ಗೆ ಆದ ವಿಫಲತೆ ಹೊರತು ಪ್ರಚಾರ ಸಮಿತಿಯ ಕ್ಷಮತೆಯನ್ನು ಸಂದೇಹಿಸುವಂತಿಲ್ಲ. ಏಕೆಂದರೆ ಅಭ್ಯರ್ಥಿ ಮತ್ತು ಕ್ಷೇತ್ರ ಈ ಎರಡೂ ಹೊಂದಾಣಿಕೆಯಾಗದಿರುವ ಬಗ್ಗೆ ಚುನಾವಣೋತ್ತರ ಮೈತ್ರಿ ಪಕ್ಷಗಳ ನಾಯಕರ ಕಚ್ಚಾಟಗಳನ್ನು ದೊಡ್ಡ ಕಾರಣವನ್ನಾಗಿ ನೋಡಬೇಕಾಗುತ್ತದೆ.

ಈಗ ಅನುಭವದ ಹಿನ್ನೆಲೆಯಲ್ಲಿ ದತ್ತಣ್ಣ ಪಕ್ಷ ಸಂಘಟನೆಯಲ್ಲಿ ನವೀನ ಚಟುವಟಿಕೆಯನ್ನೇ ಪಾದಯಾತ್ರೆ ಸ್ವರೂಪದಲ್ಲಿ ಕೈಗೊಂಡಿದ್ದಾರೆ. ಇದೊಂದು ಅವರ ಅವಿರತ ಸೃಜನಶೀಲ ಮನಸ್ಸಿಗೆ ಹಿಡಿದ ಕನ್ನಡಿ. ರಾಜ್ಯವ್ಯಾಪೀ ತಲಸ್ಪರ್ಶಿ, ಭಾವಸ್ಪರ್ಶಿ ಮತ್ತು ಬಹುಸ್ಪರ್ಶಿ ಆಲೋಚನೆ ಯಾವುದೇ ಪಕ್ಷದ ಸಂಘಟನಕಾರನಿಗೆ ಮಾದರಿಯಾಗುವಂತಿದೆ. ಈ ನಿಟ್ಟಿನಲ್ಲಿ ವೈಎಸ್’ವಿ ದತ್ತ ಅವರು ಪ್ರಸ್ತುತ ರಾಜ್ಯ ಜೆಡಿಎಸ್ ಸಾರಥ್ಯ ವಹಿಸಲು ಸೂಕ್ತರಾಗಿದ್ದಾರೆ. ಮಧು ಅವರು ಬಹು ಆಯಾಮದಲ್ಲಿ ತಮ್ಮನ್ನೇ ತಾವು ಬೆಳೆಸಿಕೊಳ್ಳಬೇಕಿದೆ. ದತ್ತ ಅವರು ಅಂತಹ ಆಯಾಮಗಳಲ್ಲಿ, ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.

ದತ್ತಣ್ಣ ಅವರು ಕಡೂರು ಶಾಸಕರಾಗಿದ್ದಾಗ ಹರಿಜನ ಕೇರಿಯಲ್ಲಿ ಸ್ಚಚ್ಛತಾ ಆಂದೋಲನದ ಸಂಕೇತವಾಗಿ ಶೌಚಾಲಯ ಸ್ವಚ್ಛತೆಯನ್ನ ಕೈಗೊಂಡಿದ್ದಿದು ಸುದ್ದಿಯಾಗಿತ್ತು. ಅಂದರೆ ಶಾಸಕ ಸಾರ್ವಜನಿಕ ಸ್ವತ್ತಾಗಿ ಕಾರ್ಯತತ್ಪರನಾಗಬೇಕು ಎಂಬುದನ್ನ ತಮ್ಮ ನಡವಳಿಕೆಯಲ್ಲೇ ತೋರಿಸಿದ್ದರು.ಅವರ ಬಗ್ಗೆ ಜನಜನಿತವಾದ ಸಂಗತಿಯೆಂದರೆ. ಕ್ಷೇತ್ರದ ಯಾರೇ ಆಗಲಿ ಮೊಬೈಲ್ ಮೂಲಕ ಸಂಪರ್ಕಿಸಿದರೆ ಅದು ಮಿಸ್ಡ್ ಕಾಲ್ ಆದಮೇಲೆ ತಾವೇ ಪ್ರತಿಯಾಗಿ ಉತ್ತರಿಸುತ್ತಿದ್ದರು. ಯಾವ ಶಾಸಕರು ಈ ರೀತಿ ಸ್ಪಂದಿಸುತ್ತಿದ್ದಾರೆ ನಾವು ಭೂತಗನ್ನಡಿ ಹಿಡಿದು ನೋಡಬೇಕು.

ಹೀಗಾಗಿ ದತ್ತ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂಬುದನ್ನು ಜೆಡಿಎಸ್ ಪಕ್ಷ ಮನಗಾಣುವಂತಾಗಲಿ ಎಂದು ಹಾರೈಸೋಣ.

ಸಂಪಾದಕೀಯ: ಡಾ.ಸುಧೀಂದ್ರ

Tags: EditorialH D DevegowdaJDSKannada ArticleKarnataka politicsMadhu BangarappaState PresidentY S V Dattaಜಾತ್ಯತೀತ ಜನತಾದಳಜೆಡಿಎಸ್ಮಧು ಬಂಗಾರಪ್ಪರಾಜಕೀಯವೈಎಸ್’ವಿ ದತ್ತಸಂಪಾದಕೀಯ
Previous Post

ಬೆಂಗಳೂರಿಗೆ ಶರಾವತಿ ನೀರು: ಚಳವಳಿಯ ಸ್ವರೂಪದ ಬಗ್ಗೆ ಚರ್ಚೆ

Next Post

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!