ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ಮಧ್ಯಪ್ರದೇಶದ ಬುಡಕಟ್ಟು ಬಾಲಕಿಯರ ವಸತಿ ನಿಲಯದಲ್ಲಿ ತಪಾಸಣೆ ನಡೆಸುವ ವೇಳೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಯನ್ನೇ ಅಮಾನತು ಮಾಡಿ, ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಭಿಲ್ ಬುಡಕಟ್ಟು ಪ್ರಾಬಲ್ಯವಿರುವ ಝಭೌ ಜಿಲ್ಲೆಯಲ್ಲಿ ಸುನಿಲ್ ಕುಮಾರ್ ಝಾ ಎನ್ನುವವರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಝಾ ಅವರು ಭಾನುವಾರ ಬುಡಕಟ್ಟು ಬಾಲಕಿಯರ ಸರ್ಕಾರಿ ಹಾಸ್ಟೆಲ್ ತಪಾಸಣೆ ನಡೆಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಡಿಸಿ ವಿರುದ್ಧ ಎಫ್’ಐಆರ್ ದಾಖಲಿಸಿದ ಪೊಲೀಸರು ಅವರನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಅಮಾನತುಗೊಂಡು ಡಿಸಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಸುನಿಲ್ ಕುಮಾರ್ ಝಾ ವಿರುದ್ಧ ಪೋಕ್ಸೊ ಕಾಯಿದೆ ಮತ್ತು ಎಸ್’ಸಿ/ಎಸ್’ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post