ಕಲ್ಪ ಮೀಡಿಯಾ ಹೌಸ್ | ಬೀದರ್ |
ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲಿದ್ದು ಹೀಗಾಗಿ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ನೀಡಲಾಗುತ್ತಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ MLA Shylendra Beldale ಅವರು ತಿಳಿಸಿದರು.
ಈತ್ತೀಚೆಗೆ ಬೀದರ್ ದಕ್ಷಿಣ ಕ್ಷೇತ್ರದ ಕರಕನಳ್ಳಿ ಗ್ರಾಮದಿಂದ ಸುಮಾರು ಎಸ್‌ಎಚ್ 15ರವರೆಗೆ ಲೋಕೋಪಯೋಗಿ ಇಲಾಖೆಯ ೨ ಕೋಟಿ 50 ಲಕ್ಷ ರೂ. ವೆಚ್ಚದ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಶ್ರೀ ಗುರು ಗಂಗಾಧರ ಬಕ್ಕಪ್ರಭುಗಳ ಆಶೀರ್ವಾದ ಪಡೆದು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕರ ಬಹು ದಿನಗಳ ಬೇಡಿಕೆಯ ಕರಕನಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕೆಲ ದಿನಗಳಲ್ಲಿ ನೂತನ ಕಾಂಕ್ರೀಟ್ ರಸ್ತೆಯು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ ಈ ಗ್ರಾಮದಲ್ಲಿರುವ ಸುಪ್ರಸಿದ್ಧ ಶ್ರೀ ಗುರು ಗಂಗಾಧರ ಬಕ್ಕಪ್ರಭುಗಳ ದೇವಸ್ಥಾನಕ್ಕೆ ರಾಜ್ಯ, ಹೊರ ರಾಜ್ಯದ ಸಾವಿರಾರು ಜನರು ಆಗಮಿಸುತ್ತಾರೆ ಇದೀಗ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
Also read: ಇಂದಿರಾ ಫುಡ್ಸ್ ರಸಂ ಪೇಸ್ಟ್ ಎಫ್‍ಎಂಸಿಜಿ ಮಾರುಕಟ್ಟೆಗೆ ಬಿಡುಗಡೆ
ಬೀದರ್ ದಕ್ಷಿಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ ಆಗಿದೆ. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಬೇಕು. ಕಾಮಗಾರಿ ನಡೆಯುವಾಗ ಸ್ಥಳೀಯರು ನಿಂತು ಕಾಮಗಾರಿ ಮಾಡಿಸಿಕೊಳ್ಳಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ನಮ್ಮ ಕಚೇರಿಗೆ ಅಥವಾ ತಮ್ಮನ್ನು ಸಂಪರ್ಕಿಸಿ ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ವೀರಶೆಟ್ಟಿ, ಉಪಾಧ್ಯಕ್ಷೆ ಗುಂಡಮ್ಮ ವಿಠಲ್, ಪಿಡಿಓ ವಿಜಯಕುಮಾರ, ಗುತ್ತಿಗೆದಾರರಾದ ಬಸವರಾಜ್ ಕೋರಿ. ಗ್ರಾಪಂ ಸದಸ್ಯರಾದ ಲಕ್ಷ್ಮೀಕಾಂತ ರೆಡ್ಡಿ, ರಾಜಕುಮಾರ ನೆಲವಾಡ, ಭೀಮಶಾ ಜಾಣಿ, ವೈಜಿನಾಥ ಕಡಿಮನಿ, ಪ್ರಭಾವತಿ ಮಾಲಿಪಾಟೀಲ್, ಮುಖಂಡರಾದ sಸುರೇಶ ಮಾಶೆಟ್ಟಿ, ಬಸವರಾಜ ಪವಾರ, ಅಶೋಕ ರೆಡ್ಡಿ ಪಾಟೀಲ, ರಾಜಪ್ಪ ಮುತ್ಯಾ, ಭೀಮಶಾ, ಪ್ರಭು ನೆಲವಾಡ, ಗೋಪಾಲರೆಡ್ಡಿ ನಿರ್ಣಾ, ಶಿವಪುತ್ರ ಪಾಟೀಲ್, ಸಿದ್ದು ವಕ್ಕಂಮಪೇಟ, ಗಂಗಾರೆಡ್ಡಿ ಮಟ್ಟಾಟಿ, ರಾಜು ಪಲ್ಲೆನೋರ,ವಿಜಯಕುಮಾರ್ ರಾಜಗೀರಾ, ಅಶೋಕ ರೆಡ್ಡಿ, ವೀರಶೆಟ್ಟಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















