ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ರಾಜಕೀಯ ಜೀವನದ ಗುರಿಯಾಗಿದೆ ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳು ಒಂದೊಂದಾಗಿ ಈಡೇರಿಸಲಾಗುತ್ತಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ #MLA Shailendra Beldale ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಔರಾದ್ (ಎಸ್) ಗ್ರಾಮದಲ್ಲಿ ಸುಮಾರು 34 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ನಾನಾ ಕಡೆ ರಸ್ತೆ, ಚರಂಡಿ, ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನುಳಿದ ಕಾಮಗಾರಿಗಳನ್ನು ಮುಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುತ್ತಿದೆ. ನಮ್ಮ ಕಚೇರಿಗೆ ಬಂದ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯ ಸಮಸ್ಯೆ ಎದುರಾದರೆ ಗ್ರಾಮಸ್ಥರು ನಮ್ಮ ಕಚೇರಿಗೆ ಅಥವ ನನಗೆ ಸಂಪರ್ಕಿಸಿ, ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರೆತೆಯಾಗದಂತೆ ಅಧಿಕಾರಿಗಳು ಸಹ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಜರೆಡ್ಡಿ ಶಾಬಾದ, ಸುರೇಶ ಮಾಶೆಟ್ಟಿ, ಜಗನ್ನಾಥ ಪಾಟೀಲ, ಶ್ರೀನಿವಾಸ ಪೋದ್ದಾರ, ಘಾಳೆಪ್ಪಾ ಚಟ್ಟನಳ್ಳಿ, ಬಸವರಾಜ ಪವಾರ, ವಿಜಯಕುಮಾರ ಗಣಪುರ, ಅನೀಲಕುಮಾರ ಗುನ್ನಳ್ಳಿ, ಓಂಕಾರ ಮಜಗೆ, ಕುಪೇಂದ್ರ, ಧನರಾಜ ಪೋಶೆಟ್ಟಿ, ವೀರೇಶ ಶಂಭು, ಪ್ರವೀಣ ತರಿ, ಗ್ರಾಮದ ಮುಖಂಡರಾದ ನರಸಿಂಹ ರೆಡ್ಡಿ, ನಾಗಶೆಟ್ಟಿ ಚಟ್ಟನಳ್ಳಿ, ಬಾಲ ರೆಡ್ಡಿ ಚಿನ್ನಾರೆಡ್ಡಿ, ಸಂಗ್ರಾಮ ಶೆಟಕಾರ, ವೆಂಕಟರೆಡ್ಡಿ, ಜಗನ್ನಾಥ ರಾಮಪುರೆ, ನರಸಿಂಹ ರಾಮರೆಡ್ಡಿ, ಸುರೇಶ ಹುಗಾರ, ಅರುಣಕುಮಾರ ಪಾಟೀಲ್, ಪ್ರವೀಣ ಲಾಲಪ್ಪಾ, ಸಂತೋಶ, ವೀರಶೆಟ್ಟಿ, ಶಿವರಾಜ ಕೋಳಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post