ಕಲ್ಪ ಮೀಡಿಯಾ ಹೌಸ್ | ಬೀದರ್ |
ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ್ Bandeppa Khashempur ಅವರು ತಮ್ಮ ಭರ್ಜರಿ ಪ್ರಚಾರವನ್ನು ಮುಂದುವರೆಸಿದ್ದು, ಹೋದೆಡೆಯೆಲ್ಲಾ ಅಪಾರ ಜನಬೆಂಬಲ ವ್ಯಕ್ತವಾಗಿದೆ.
ಇಂದು ಮುಂಜಾನೆ ಕಮಠಾಣಾ ಗ್ರಾಮದಲ್ಲಿ ಸಂಚಾರ ನಡೆಸಿ ಮತಯಾಚಿಸಿದ ಬಂಡೆಪ್ಪ ಅವರನ್ನು ಗ್ರಾಮದ ಮಹಿಳೆಯರು ಆರತಿ ಮಾಡಿ, ಶಾಲು ಹೊದಿಸಿ, ಪುಷ್ಪವೃಷ್ಠಿ ಮಾಡಿ ಬರಮಾಡಿಕೊಂಡರು. ಮತಯಾಚನಾ ಯಾತ್ರೆ ಸಾಗಿದ ಮಾರ್ಗದ ಉದ್ದಕ್ಕೂ ಎಲ್ಲ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ದೇವಸ್ಥಾನ, ದರ್ಗಾ, ಚರ್ಚ್’ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಕಮಠಾಣಾ ಮತಯಾಚನಾ ಯಾತ್ರೆ ನಡೆಸಿದರು. ಬಂಡೆಪ್ಪ ಅವರು ಸಾಗಿದ ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಇನ್ನು, ನಿರ್ಣಾ, ಬಗದಲ್, ಬೋರಾಳಗಳಲ್ಲಿ ಮತಯಾಚನೆ (ಚುನಾವಣಾ ಪ್ರಚಾರ) ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಹಾರ ತುರಾಯಿಗಳೊಂದಿಗೆ ಭರ್ಜರಿಯಾಗಿ ಸ್ವಾಗತಿಸಿದರು. ಈ ವೇಳೆ ಗ್ರಾಮ ಸಂಚಾರ ನಡೆಸಿದ ಶಾಸಕರು ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ನಾನು ಈ ಹಿಂದೆ ಎರಡು ಬಾರಿ ಸಚಿವನಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಜೆಡಿಎಸ್ ಪಕ್ಷ ಬಡವರ, ಶ್ರಮಿಕರ, ರೈತರ ಪರವಾಗಿರುವ ಪಕ್ಷವಾಗಿದೆ. ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಈ ಬಾರಿ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ಧೇವೆ. ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದ ತಕ್ಷಣವೇ ಇವೆಲ್ಲವುಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತೇವೆ. ಈ ಬಾರಿ ಜಾತ್ಯತೀತ ಜನತಾದಳ ಪಕ್ಷವನ್ನು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಸಚಿವರಾಗಿದ್ದಾಗ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಈ ಬಾರಿ ಉಪಮುಖ್ಯಮಂತ್ರಿಯಾಗಲಿದ್ದಾರೆ. ಕ್ಷೇತ್ರದ ಜನರು ಅವರನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾರವರು ನಿರ್ಣಾ ಗ್ರಾಮದಲ್ಲಿ ನಡೆದ ಮತಯಾಚನಾ ಯಾತ್ರೆಯ ವೇಳೆ ಮನವಿ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಅನೇಕರಿದ್ದರು.
ಹಾಗೆಯೇ, ಮನ್ನಳ್ಳಿ ಹಾಗೂ ಮನ್ನಾಎಖೇಳ್ಳಿಯಲ್ಲಿ ನಡೆದ ಮತಯಾಚನಾ ಯಾತ್ರೆ ವೇಳೆ ಗ್ರಾಮಸ್ಥರು ಬಂಡೆಪ್ಪ ಖಾಶೆಂಪುರ್ ಅವರನ್ನು ಹಾರ ತುರಾಯಿ, ಬಾಜಾ ಭಜಂತ್ರಿಯೊಂದಿಗೆ ಬರಮಾಡಿಕೊಂಡ ಮತದಾರರು
ಗೆಲುವಿನ ಮುನ್ಸೂಚನೆ ನೀಡಿದ ಮನ್ನಳ್ಳಿ ಗ್ರಾಮಸ್ಥರು, ಕುಂಭ, ಕಳಸಗಳೊಂದಿಗೆ ನಡೆದ ಜೆಡಿಎಸ್ ಮತಯಾಚನಾ ಯಾತ್ರೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post