ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಐದನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಸೇವೆಯಲ್ಲಿ ತೊಡಗಿಕೊಂಡಿದ್ದ ಖಾಶೆಂಪುರ್ ಪಿ ಗ್ರಾಮದ ಗ್ರಾಮಸ್ಥರು, ಅದ್ಧೂರಿಯಾಗಿ ರಥೋತ್ಸವ ಕಾರ್ಯಕ್ರಮ ನಡೆಸಿದರು. ಖಾಶೆಂಪುರ್ ಗ್ರಾಮದವರೇ ಆಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಡಗರದಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಖಾಶೆಂಪುರ್ ಗ್ರಾಮದ ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿವಿಧ ನಾಟಕಗಳು ನಡೆದವು.
ಅವಧೂತರಿಂದ ಪ್ರವಚನ ಕಾರ್ಯಕ್ರಮ:
ಡಿ.18ರಂದು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿಯ ಡಾ. ಬಸವಲಿಂಗ ಅವಧೂತರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪ್ರವಚನ ಕೇಳಿದರು. ಇದೇ ವೇಳೆ ಮಾತನಾಡಿದ ಶಾಸಕರು, ಪ್ರವಚನಗಳು ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಲು ನೇರವಾಗುತ್ತವೆ. ಪುರಾಣ ಪ್ರವಚನಗಳು ಆಗಾಗ ಕೇಳುತ್ತಿರಬೇಕು ಎಂದರು.
ಡೊಳ್ಳು ಬಾರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್:
ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಡೊಳ್ಳು ಬಾರಿಸಿದರು. ಶಾಸಕರಿಗೆ ಗ್ರಾಮಸ್ಥರು ಸಾಥ್ ನೀಡಿದರು.
ಪಲ್ಲಕ್ಕಿ ಉತ್ಸವ:
ಡಿ.19ರಂದು ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಪೂಜಾ ಕಾರ್ಯಕ್ರಮಗಳು ನಡೆದವು. ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ಕಾರ್ಯಕ್ರಮಗಳಲ್ಲಿ ಕೂಡ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು. ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು.
ಟ್ರಾಕ್ಟರ್ ಓಡಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್:
ಇತ್ತೀಚೆಗೆ ಹೊಸ ಟ್ರಾಕ್ಟರ್ ಖರೀದಿಸಿದ್ದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಅಭಿಮಾನಿಯೊಬ್ಬರು, ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ದೇವಸ್ಥಾನದ ಮುಂದೆ ಟ್ರಾಕ್ಟರ್ ಗೆ ಪೂಜೆ ಮಾಡಿಸಿದರು. ಇದೇ ವೇಳೆ ಟ್ರಾಕ್ಟರ್ ಓಡಿಸಬೇಕೆಂದು ಶಾಸಕರನ್ನು ಒತ್ತಾಯಿಸಿದರು. ಅಭಿಮಾನಿಯ ಒತ್ತಾಯದ ಮೇರೆಗೆ ಶಾಸಕರು ಸಚ್ಚಿದಾನಂದ ಸ್ವಾಮೀಜಿಯವರ ದೇವಸ್ಥಾನದ ಆವರಣದಲ್ಲಿ ಟ್ರಾಕ್ಟರ್ ಓಡಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ನಮ್ಮ ಭತ್ತದ ಗದ್ದೆಗಳಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದೆ, ಅದಾದ ಬಳಿಕ ಈಗ ಟ್ರಾಕ್ಟರ್ ಓಡಿಸಿದ್ದೇನೆಂದರು.
ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ:
ಡಿ.19ರಂದು ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಆಶೀರ್ವಾದ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು. ಇದೇ ವೇಳೆ ಅವರು ರಕ್ತದೊತ್ತಡ (ಬಿ.ಪಿ) ಪರೀಕ್ಷೆ ಮಾಡಿಸಿಕೊಂಡರು.
ಖಾಶೆಂಪುರ್ ಗ್ರಾಮದಲ್ಲಿ ಅನ್ನ ದಾಸೋಹ:
ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಐದನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸಚ್ಚಿದಾನಂದ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅನ್ನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪ್ರಸಾದ ಸ್ವೀಕರಿಸಿದರು.
ಅದ್ಧೂರಿಯಾಗಿ ನಡೆದ ರಥೋತ್ಸವ ಕಾರ್ಯಕ್ರಮ:
ಸದ್ಗುರು ಸಚ್ಚಿದಾನಂದ ಸ್ವಾಮೀಜಿಯವರ ಐದನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮಕ್ಕೆ ಡಿ.19ರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.
ಗ್ರಾಮಸ್ಥರೆಲ್ಲರೂ ಸೇರಿ ಶಾಂತತೆಯಿಂದ ರಥ ಎಳೆದರು:
ಈ ಸಂದರ್ಭದಲ್ಲಿ ಶರಣಯ್ಯಸ್ವಾಮಿ ಇಟಗ, ವಿಶ್ವನಾಥ ಬಾಲೇಬಾಯಿ, ಮಾರುತಿ ಬಸಗೊಂಡ, ನರಸಪ್ಪ ಬಸಗೊಂಡ, ರವೀಂದ್ರ ಕುಮಾರ್ ಗುಮಾಸ್ತಿ, ಶರಣಪ್ಪ ಖಾಶೆಂಪುರ್, ಸಂಜುಕುಮಾರ್ ಗುಮಾಸ್ತಿ, ಬಜರಂಗ ತಮಗೊಂಡ, ಶಿವಕುಮಾರ್ ಬಾಲೇಬಾಯಿ, ಮಂಜುನಾಥ, ಸಂಜು ತಮಗೊಂಡ, ಮೋಹನ್ ಸಾಗರ್, ಬಕ್ಕಪ್ಪ ಸುತಾರ, ಸಿದ್ದು ಸ್ವಾಮಿ, ಮಧುಕರ್, ನವನಾಥ್ ಬಾಲೇಬಾಯಿ, ಚಿದಾನಂದ ಇಂಗ್ರಜಿ, ಶಿವಪ್ಪ ಪೊಲೀಸ್ ಪಾಟೀಲ್, ಚಂದ್ರಶೇಖರ ಪಾಟೀಲ್, ರಾಜಕುಮಾರ ಪಾಟೀಲ್ ಸೇರಿದಂತೆ ಮುಖಂಡರು, ಗ್ರಾಮಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post