ಕಲ್ಪ ಮೀಡಿಯಾ ಹೌಸ್ | ಬೀದರ್ |
ಭಕ್ತ ಕನಕದಾಸರು, ಮಹಾತ್ಮ ಬೋಮಗೊಂಡೇಶ್ವರರಿಗೆ ತಮ್ಮದೇಯಾದ ಇತಿಹಾಸವಿದೆ. ಅವರು ಮಾಡಿದ ಮಹತ್ವದ ಕಾರ್ಯಗಳಿಂದ ಅವರು ಮಹಾತ್ಮರಾಗಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ತಾಲೂಕಿನ ಕಾಪಲಾಪೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಮಹಾತ್ಮ ಬೋಮಗೊಂಡೇಶ್ವರ ಹಾಗೂ ಶ್ರೀ ಭಕ್ತ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕ, ಬುದ್ಧ, ಬಸವ, ಅಂಬೇಡ್ಕರ್ ರಂತಹ ಮಹಾತ್ಮರು ಯಾವುದೋ ಒಂದು ಜಾತಿ, ಮತ, ಪಂಥಕ್ಕೆ ಸೀಮಿತವಾಗಿರಲಿಲ್ಲ. ಅವರು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಯುವ ಸಮುದಾಯ ಸಾಗಬೇಕು ಎಂದರು.
ಮಹಾತ್ಮ ಬೋಮಗೊಂಡೇಶ್ವರರು ಅಂದಿನ ಕಾಲದಲ್ಲಿ ಮಹಾನ್ ಪವಾಡಗಳನ್ನು ಮಾಡಿದ್ದಾರೆ. ಅವರು ಅಪಾರ ಶಕ್ತಿಶಾಲಿಯಾಗಿದ್ದಾರೆ. ಅವರ ಇತಿಹಾಸವು ದೊಡ್ಡದಿದೆ. ಅವರ ಜೊತೆಗೆ ಕುರಿ ಮತ್ತು ನಾಯಿ ಹಾಗೂ ಒಂದು ಕೋಲು ಇರುತ್ತದೆ. ಅವೆಲ್ಲದಕ್ಕೂ ಇತಿಹಾಸವಿದೆ. ಕೈಯಲ್ಲಿರುವ ಕೋಲಿನ ಸಹಾಯದಿಂದ ನೀರು ಹರಿಸಿದ ಪವಾಡ ಪುರು?ರು ಅವರಾಗಿದ್ದಾರೆ.
ಕುರಿ ಕಾಯುವುದು ಕುರುಬ ಸಮುದಾಯದ ಕುಲ ಕಸಬು ಆಗಿದೆ. ಕುರಿ ಸಾಕಾಣಿಕೆಯಲ್ಲಿ ಒಳ್ಳೆಯ ಆದಾಯಗಳಿಸಬಹುದಾಗಿದೆ. ಆ ನಿಟ್ಟಿನಲ್ಲಿ ಯುವಕರು ಸಾಗಬೇಕು. ವಿದೇಶಗಳಲ್ಲಿ ಕುರಿ ಸಾಕಾಣಿಕೆ ದೊಡ್ಡ ಮಟ್ಟದ ಬ್ಯುಸಿನೆಸ್ ಆಗಿದೆ. ನಮ್ಮಲ್ಲಿ ಕುರಿ ಕಾಯುವುದು ಕೀಳು ಮಟ್ಟದ ಕೆಲಸವೆಂಬಂತೆ ಬಿಂಬಿಸಲಾಗುತ್ತಿದೆ. ಅದು ನಿಲ್ಲಬೇಕೆಂದರೆ ಕುರಿ ಸಾಕಾಣಿಕೆಯಲ್ಲಿಯೇ ಒಳ್ಳೆಯ ಆದಾಯ ಗಳಿಸುವ ಕೆಲಸವನ್ನು ಯುವ ಸಮುದಾಯ ಮಾಡಬೇಕು.
ಕುರಿ ಕಾಯುವವರಿಗೆ ಹೆಣ್ಣು ಕೊಡಲ್ಲ ಎಂಬ ಮಾತು ಕೇಳಿ ಬರುತ್ತವೆ. ಕುರಿ ಸಾಕಾಣಿಕೆಯಲ್ಲಿ ಆಧುನಿಕತೆ ತಂದುಕೊಂಡು ಉತ್ತಮ ಆದಾಯ ಕಂಡುಕೊಳ್ಳುವ ಮೂಲಕ ಆ ಮಾತು ಸುಳ್ಳಾಗಿಸುವ ಕೆಲಸ ಮಾಡಬೇಕೆಂದು ಯುವ ಸಮುದಾಯಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಕಲಬುರಗಿ ವಿಭಾಗ ತಿಂತಣಿ ಬ್ರೀಡ್ಜ್ ನ ಸ್ವಾಮೀಜಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸಿದ್ಧರಾಮಾನಂದ ಪೂರಿ ಮಹಾಸ್ವಾಮಿಗಳು, ಶಾಸಕರಾದ ರಹಿಂಖಾನ್, ಮುಖಂಡರಾದ ಅಮೃತರಾವ್ ಚಿಮಕೋಡೆ, ಬಾಬುರಾವ್ ಮಲ್ಕಾಪೂರೆ, ವಿಜಯಕುಮಾರ್ ಅಣ್ಣೆಪ್ಪಾ ಪಾಟೀಲ್, ಹಣಮಂತ ಮಲ್ಕಾಪೂರೆ, ಸಂತೋ? ಜೋಳದಾಪಕೆ, ಲೋಕೋಶ ಮರ್ಜಾಪೂರ, ಮಲ್ಲಿಕಾರ್ಜುನ ಬಿರಾದಾರ, ತುಕ್ಕಾರಾಮ ಕರಾಟೆ, ರಾಜರೆಡ್ಡಿ ನಾರಾಯಣರೆಡ್ಡಿ ಪಾಟೀಲ್ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post