ನವದೆಹಲಿ: ಮುಸ್ಲಿಂ ಮಹಿಳೆಯರ ಪಾಲಿಗೆ ಕಂಟಕಪ್ರಾಯವಾಗಿರುವ ತ್ರಿವಳಿ ತಲಾಖನ್ನು ನಿಷೇಧಿಸುವ ಮಸೂದಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಈ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆಗೆ ಮೋದಿ ಸರ್ಕಾರ ದೃಢವಾಗಿ ನಿಂತಿದೆ.
ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ, 2019 ಅನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮುಂದಿರಿಸಿದ್ದು, ಇದನ್ನು ಸಚಿವ ರವಿಶಂಕರ್ ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.
ಈ ಮಸೂದೆಯನ್ನು ಮತಕ್ಕೆ ಹಾಕಲಾಗಿದ್ದು, ಪರವಾಗಿ 303 ಮತಗಳು, ವಿರುದ್ಧವಾಗಿ 82 ಮತಗಳು ಬಿದ್ದವು. 303 ಮತಗಳನ್ನು ಪಡೆಯುವ ಮೂಲಕ ಮೋದಿ ಸರ್ಕಾರದ ಐತಿಹಾಸಿಕ ಮಸೂದೆಗೆ ಭಾರೀ ಜಯ ದೊರೆತಿದೆ.
ಮುಸ್ಲಿಂ ಗಂಡಸರು ತಮ್ಮ ಪತ್ನಿಗೆ ಮೂರು ಸಲ ತಲಾಖ್, ತಲಾಖ್, ತಲಾಖ್ ಎಂದು ಹೆಳುವ ಮೂಲಕ ವೈವಾಹಿಕ ಬಂಧವನ್ನು ಕಳಚಿಕೊಳ್ಳುವ ಪರಿಪಾಠಕ್ಕೆ ಈ ಮಸೂದೆ ಅಂತ್ಯ ಹಾಡಲಿದೆ. ಈ ರೀತಿಯಾಗಿ ತಲಾಖ್ ನೀಡುವಿಕೆಯನ್ನು ಈ ಮಸೂದೆ ಅಪರಾಧವೆಂದು ಪರಿಗಣಿಸಲಿದ್ದು, ಇಂತಹ ಅಪರಾಧಗಳು ಸಾಬೀತುಗೊಂಡಲ್ಲಿ ಆ ವ್ಯಕ್ತಿಗೆ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಲೂ ಈ ಕಾನೂನಿನಲ್ಲಿ ಅವಕಾಶವಿದೆ.
RPF team Seized 40.495 Kgs Ganja at Ballari Railway station
Kalpa Media House | Ballari | On 06.04.2026, RPF team conducted checking in Train No. 18047 (Ex: SHM–VSKP Express) at...
Read moreDetails















