ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮೇ 4ರವರೆಗೂ ರಾಜ್ಯದಾದ್ಯಂತ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಮುಖ್ಯಕಾರ್ಯದರ್ಶಿ ರವಿಕುಮಾರ್, ನಾಳೆಯಿಂದ ಮೇ 4ರವರೆಗೂ ಪ್ರತಿದಿನ ರಾತ್ರಿ 9ರಿಂದ ಮುಂಜಾನೆ 6ರವರೆಗೂ ನೈಟ್ ಕರ್ಫ್ಯೂ ಹಾಗೂ ಶನಿವಾರ ಹಾಗೂ ಭಾನುವಾರ ಸಂಫೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದರು.
ನೂತನ ನಿಯಮಾವಳಿಗಳ ಮುಖ್ಯಾಂಶಗಳು:
- ಪ್ರತಿದಿನ ರಾತ್ರಿ 9 ರಿಂದ ಮುಂಜಾನೆ 6 ಗಂಟೆಯವರೆಗೂ ಕರ್ಫ್ಯೂ
- ಶನಿವಾರ ಹಾಗೂ ಭಾನುವಾರ ಸಂಪೂರ್ಣ ಕರ್ಫ್ಯೂ
- ಶನಿವಾರ ಹಾಗೂ ಭಾನುವಾರ ಮುಂಜಾನೆ 6ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ
- ಕರ್ಫ್ಯೂ ಸಮಯದಲ್ಲಿ ತುರ್ತು ಸೇವೆ ಹೊರತುಪಡಿಸಿ ಬೇರೆ ಯಾರೂ ಮನೆಗಳಿಂದ ಹೊರಕ್ಕೆ ಬರುವಂತಿಲ್ಲ
- ರಾಜ್ಯದಾದ್ಯಂತ ಶಾಲಾ ಕಾಲೇಜುಗಳು, ಟ್ಯೂಷನ್, ಶೈಕ್ಷಣಿಕ ಕೇಂದ್ರಗಳು ಬಂದ್
- ಮಾಲ್, ಜಿಮ್, ಕ್ರೀಡಾಂಗಣ, ಪಾಕ್ ಸಂಪೂರ್ಣ ಬಂದ್
- ದೇವಾಲಯ, ಚರ್ಚ್, ಮಸೀದಿ ಬಂದ್. ಆದರೆ, ಪುರೋಹಿತರು ಮಾತ್ರ ಪೂಜಾ ವಿಧಿವಿಧಾನ ನಡೆಸಬಹುದು
- ರೆಸ್ಟೋರೆಂಟ್’ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ, ಸಪ್ಲೈ ಮಾಡುವಂತಿಲ್ಲ
- ಅಂತಾರಾಜ್ಯ ಸಂಚಾರದ ವಾಹನಗಳಿಗೆ ನಿರ್ಬಂಧವಿಲ್ಲ
- ಅಗತ್ಯ ವಸ್ತುಗಳು ಪೂರೈಕೆಗೆ ಅಡ್ಡಿಯಿಲ್ಲ
- ಮದುವೆಗಳಲ್ಲಿ ಕೇವಲ 50 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ
- ಅಂತ್ಯ ಸಂಸ್ಕಾರಗಳಲ್ಲಿ 20 ಜನರಿಗೆ ಮಾತ್ರ ಪಾಲ್ಗೊಳ್ಳಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post