ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 239 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ ಒಟ್ಟಾರೆಯಾಗಿ 24,099 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಈವರೆಗೂ ಒಟ್ಟು 501820 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 467785 ನೆಗೆಟಿವ್ ಹಾಗೂ 24099 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
22689 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆಯಾಗಿ 356 ಮಂದಿ ಸಾವಿಗೀಡಾಗಿದ್ದಾರೆ.
ಇಂದು 278 ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಈವರೆಗಿನ ಒಟ್ಟು ಸಂಖ್ಯೆ 6163 ಆಗಿದೆ. ಇನ್ನು, ಕೋವಿಡ್ ಕೇರ್ ಸೆಂಟರ್’ನಲ್ಲಿ 4391 ಮಂದಿ,
ಖಾಸಗಿ ಆಸ್ಪತ್ರೆಯಲ್ಲಿ ಇಂದು 61 ಮಂದಿ-ಒಟ್ಟಾರೆಯಾಗಿ 2445 ಮಂದಿ ಚಿಕಿತ್ಸೆ ಪಡೆದಿದ್ದಾರೆ.
ಇಂದು 639 ಮಂದಿ ಹೋಮ್ ಐಸೋಲೇಶನ್’ನಲ್ಲಿ ಇದ್ದರೆ ಈವರೆಗೂ ಒಟ್ಟಾರೆ ಸಂಖ್ಯೆ 10668 ಆಗಿದೆ. ಇನ್ನು, ಇಂದು 213 ವಿದ್ಯಾರ್ಥಿಗಳ ಹಾಗೂ 10 ಸಿಬ್ಬಂದಿಗಳ ಸ್ಯಾಂಪಲ್ ಸಂಗ್ರಹಿಸಿದ್ದು, 21 ವಿದ್ಯಾರ್ಥಿಗಳಲ್ಲಿ ಹಾಗೂ ಇಬ್ಬರು ಸಿಬ್ಬಂದಿಗಳಲ್ಲಿ ಪಾಸಿಟಿವ್ ಬಂದಿದೆ.
ತಾಲೂಕುವಾರು ವಿವರ: ಇಂದು ಒಟ್ಟು
ಶಿವಮೊಗ್ಗ: 87 10843
ಭದ್ರಾವತಿ: 07 03989
ಶಿಕಾರಿಪುರ: 29 03458
ತೀರ್ಥಹಳ್ಳಿ: 28 01326
ಸೊರಬ: 17 01236
ಸಾಗರ: 46 01427
ಹೊಸನಗರ: 18 00881
ಇತರೆ ಜಿಲ್ಲೆ: 07 00939
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post