ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಿವಮೊಗ್ಗ ಜನರ ದಶಕಗಳ ಕನಸು ಇಂದು ಸಾಕಾರಗೊಂಡಿದ್ದು, ಮೊಟ್ಟ ಮೊದಲ ಇಂಡಿಗೋ Indigo ವಿಮಾನ ಇಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಇಂದು ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ Bangalore International Airport ಹೊರಟ ಇಂಡಿಗೋ ವಿಮಾನಕ್ಕೆ ಸಚಿವ ಎಂ.ಬಿ. ಪಾಟೀಲ್ Minister MBPatil ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ BSYadiyurappa ಚಾಲನೆ ನೀಡಿದರು.
ಸುಮಾರು 11.25ರ ವೇಳೆಗೆ ಸೋಗಾನೆ ವಿಮಾನ ನಿಲ್ದಾಣಕ್ಕೆ Shivamogga Airport ಆಗಮಿಸಿದ ಇಂಡಿಗೋ ವಿಮಾನಕ್ಕೆ ವಾಟರ್ ಜೆಟ್ ಮೂಲಕ ಸ್ವಾಗತ ಕೋರಿ, ಸಂತಸ ವ್ಯಕ್ತಪಡಿಸಲಾಯಿತು.
Also read: ಬೆಂಗಳೂರಿನಿಂದ ಟೇಕಾಫ್ ಆಯ್ತು ಶಿವಮೊಗ್ಗದ ವಿಮಾನ: ಯಾರೆಲ್ಲಾ ಬರುತ್ತಿದ್ದಾರೆ?
ಯಾರೆಲ್ಲಾ ಬಂದಿದ್ದಾರೆ:
ಮೊದಲ ಇಂಡಿಗೋ ವಿಮಾನದಲ್ಲಿ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, KSEshwarappa ಸಂಸದ ಬಿ.ವೈ. ರಾಘವೇಂದ್ರ, BYRaghavendra ಶಾಸಕರಾದ ಚನ್ನಬಸಪ್ಪ, MLAChannabasappa ಡಿ.ಎಸ್. ಅರುಣ್, DSArun ಮಾಜಿ ಶಾಸಕರಾದ ಹರತಾಳು ಹಾಲಪ್ಪ, Harathalu Halappa ಬಿ.ವೈ. ವಿಜಯೇಂದ್ರ, BYVijayendra ಮಾಜಿ ಸಚಿವ ಆರಗ ಜ್ಞಾನೇಂದ್ರ, AragaGnanendra ಪ್ರಮುಖರಾದ ಅ.ನಾ. ವಿಜಯೇಂದ್ರ ಸೇರಿದಂತೆ ಹಲವರು ಮೊದಲ ವಿಮಾನದಲ್ಲಿ ಆಗಮಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post