ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದು, ಮೊದಲ ಬಾರಿ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆಯ ಹೊಣೆ ವಹಿಸಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಸಿಎಂ ಬೊಮ್ಮಾಯಿ, 7 ಸಚಿವರ ಖಾತೆ ಬದಲಾವಣೆ ಮಾಡಿದ್ದು, ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ನಿರ್ವಹಸಿದ್ದ ಖಾತೆಯನ್ನೇ 15 ಸಚಿವರಿಗೆ ಕೊಡಲಾಗಿದೆ.
ಯಾರಿಗೆ ಯಾವ ಖಾತೆ?
- ಆರಗ ಜ್ಞಾನೇಂದ್ರ – ಗೃಹ ಇಲಾಖೆ
- ಕೆ.ಎಸ್. ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ
- ಆರ್. ಅಶೋಕ್ – ಕಂದಾಯ
- ಬಿ. ಶ್ರೀರಾಮುಲು – ಸಾರಿಗೆ
- ವಿ. ಸುನೀಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಉಮೇಶ್ ಕತ್ತಿ- ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ
- ಬಿ.ಸಿ. ಪಾಟೀಲ್ – ಕೃಷಿ
- ವಿ. ಸೋಮಣ್ಣ – ವಸತಿ ಮತ್ತುಮೂಲಭೂತ ಸೌಕರ್ಯ ಅಭಿವೃದ್ದಿ
- ಡಾ.ಕೆ. ಸುಧಾಕರ್ – ಆರೋಗ್ಯ, ವೈದ್ಯಕೀಯ ಶಿಕ್ಷಣ
- ಎಸ್.ಟಿ. ಸೋಮಶೇಖರ್ – ಸಹಕಾರ
- ಬಿ.ಸಿ. ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
- ಕೆ. ಗೋಪಾಲಯ್ಯ – ಅಬಕಾರಿ
- ಭೈರತಿ ಬಸವರಾಜ್ – ನಗರಾಭಿವೃದ್ಧಿ
- ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್
- ಎಂಟಿಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ
- ಜೆ.ಸಿ. ಮಾಧುಸ್ವಾಮಿ – ಸಣ್ಣ ನೀರಾವರಿ
- ಡಾ.ಸಿ.ಎನ್.ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ
- ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ
- ಪ್ರಭು ಚೌಹಾಣ್ – ಪಶುಸಂಗೋಪನೆ
- ಗೋವಿಂದ ಕಾರಜೋಳ – ಜಲಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
- ಕೆ.ಸಿ. ನಾರಾಯಣಗೌಡ – ಕ್ರೀಡೆ
- ಮುರುಗೇಶ್ ನಿರಾಣಿ – ಬೃಹತ್, ಮಧ್ಯಮ ಕೈಗಾರಿಕೆ
- ಶಿವರಾಮ್ ಹೆಬ್ಬಾರ್ – ಕಾರ್ಮಿಕ
- ಸಿ.ಸಿ. ಪಾಟೀಲ್ – ಲೋಕೋಪಯೋಗಿ
ಎಸ್. ಅಂಗಾರ – ಮೀನುಗಾರಿಕೆ, ಬಂದರು - ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ
- ಮುನಿರತ್ನ – ತೋಟಗಾರಿಕೆ
- ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ
- ಶಂಕರ್ ಪಾಟೀಲ್, ನೇಕಾರಿಕೆ ಮತ್ತು ಕೈಮಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post