ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಿಸರ್ವೇಷನ್ #Reservation ಮಾಡಿಸಿಕೊಂಡು ವೇಟಿಂಗ್ ಲಿಸ್ಟ್ ಹಾಗೂ ಆರ್’ಎಸಿ ಟಿಕೇಟ್ ಹೊಂದುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಂಡಳಿಯು ಬಿಗ್ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಭಾರತೀಯ ರೈಲ್ವೆಯು #IndianRailway ರಿಸರ್ವೇಷನ್ ಚಾರ್ಟ್ ಸಿದ್ದಪಡಿಸುವ ಸಮಯವನ್ನು ಬದಲಾವಣೆ ಮಾಡಿದ್ದು, ಹಾಲಿ ಇರುವ ನಾಲ್ಕು ಗಂಟೆಯಿಂದ 10 ಗಂಟೆಗಳ ಅವಧಿಗೆ ನಿಗದಿ ಪಡಿಸಿದೆ.
ಹಾಲಿ, ಯಾವುದೇ ರೈಲಿನ ರಿಸರ್ವೇಷನ್ ಚಾರ್ಟ್ #ReservationChart ಅನ್ನು ರೈಲು ಹೊರಡುವ ನಾಲ್ಕು ಗಂಟೆಗಳ ಮುನ್ನ ಸಿದ್ದಪಡಿಸಿ, ಪ್ರಕಟಿಸಲಾಗುತ್ತಿತ್ತು. ಆದರೆ, ಇನ್ಮುಂದೆ ರೈಲು ಹೊರಡುವ ಸಮಯಕ್ಕಿಂತಲೂ 10 ಗಂಟೆಯ ಮೊದಲು ಚಾರ್ಟ್ ಸಿದ್ದಪಡಿಸಲಾಗುತ್ತದೆ. ಇದರಿಂದಾಗಿ ರೈಲು ಹೊರಡುವ 10 ಗಂಟೆಗಳ ಮುನ್ನವೇ ಪ್ರಯಾಣಿಕರು ತಮ್ಮ ರಿಸರ್ವ್ ಆದ ಟಿಕೆಟಿನ ಸ್ಟೇಟಸ್ ತಿಳಿಯಬಹುದಾಗಿದೆ.
ಹಾಲಿ ನಿಯಮದ ಪ್ರಕಾರ ರಿಸರ್ವೇಷನ್ ಚಾರ್ಟನ್ನು ನಾಲ್ಕು ಗಂಟೆಗಳ ಮುನ್ನ ಸಿದ್ದಪಡಿಸಲಾಗುತ್ತಿತ್ತು. ಇದರಿಂದಾಗಿ, ವೇಟಿಂಗ್ ಲಿಸ್ಟ್ ಹಾಗೂ ಆರ್’ಎಸಿ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಕೊನೆಯ ಸಮಯದವರೆಗೂ ಗೊಂದಲ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ನಿಯಮ ಬದಲಾವಣೆಗೆ ಮುಂದಾಗಿರುವ ಇಲಾಖೆ, ರೈಲು ಹೊರಡುವ ಸಮಯದ 10 ಗಂಟೆ ಮುನ್ನ ಚಾರ್ಟ್ ಸಿದ್ದಪಡಿಸುವುದಾಗಿ ಹೇಳಿದೆ.
ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಹೊರಡುವ ರೈಲುಗಳ ಮೊದಲ ರಿಸರ್ವೇಷನ್ ಚಾರ್ಟ್ ಅನ್ನು ಹಿಂದಿನ ರಾತ್ರಿ 8 ಗಂಟೆ ಹೊತ್ತಿಗೆ ಸಿದ್ಧಪಡಿಸಲಾಗುತ್ತದೆ. ಮಧ್ಯಾಹ್ನ 2.01ರಿಂದ ರಾತ್ರಿ 11.59ರವರೆಗೆ ಮತ್ತು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಹೊರಡುವ ರೈಲುಗಳ ಚಾರ್ಟ’ನ್ನು 10 ಗಂಟೆಗಳ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ. ಈ ಹೊಸ ಚಾರ್ಟ್ ಸಿದ್ಧಪಡಿಸುವ ವೇಳಾಪಟ್ಟಿಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರೈಲ್ವೆ ಮಂಡಳಿಯು ವಲಯ ವಿಭಾಗಗಳಿಗೆ ಸೂಚಿಸಿದೆ.
ಇನ್ನು, ಇಂತಹ ಸಂದರ್ಭದಲ್ಲಿ ಹಣ ಹಿಂಪಡೆಯಬೇಕಾದರೆ ಐಆರ್’ಸಿಟಿಸಿ ಇ-ವ್ಯಾಲೆಟ್ ಮೂಲಕ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಹಣ ಹಿಂಪಡೆಯುವುದು ಸಾಧ್ಯವಿರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















