ಕಲ್ಪ ಮೀಡಿಯಾ ಹೌಸ್ | ಅಥಣಿ |
ಈ ಬಾರಿಯ ಚುನಾವಣೆಯಲ್ಲಿ ಟಿಕೇಟ್ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ #BJP ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುವುದಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ #LakshmanaSavadi ಘೋಷಿಸಿದ್ದಾರೆ.
ನಗರದ ಶಿವಯೋಗಿಗಳ ಮಠದ ಆವರಣದಲ್ಲಿ ಬೆಂಬಲಿಗರ ಬೃಹತ್ ಸಮಾವೇಶ ನಡೆಸಿದ ನಂತರ ಮಾತನಾಡಿರುವ ಅವರು, ನಾಳೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸಮಾವೇಶದಲ್ಲಿ ಭಾವುಕರಾದ ಲಕ್ಷ್ಮಣ ಸವದಿ ತಮ್ಮ ಕೈ ಬಿಡದಂತೆ ಜನರಲ್ಲಿ ಮನವಿ ಮಾಡಿದರು. ಜನರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡುತ್ತಿದ್ದೇನೆ ಎಂದು ತಿಳಿಸಿದರು.
ತಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿರಲಿಲ್ಲ. ಆಗಲೇ ಒಬ್ಬ ಮಹಾನುಭಾವ ಅಥಣಿಗೆ ಬಂದು ನನ್ನ ವಿರುದ್ಧ ಹೇಳಿಕೆ ನೀಡುತ್ತಾನೆ. ಕಳೆದ 4 ವರ್ಷದಲ್ಲಿ ನಾನು ಉಂಡ ಕಹಿ, ನನಗೆ ಆಗಿರುವ ಅವಮಾನವನ್ನು ಮದುವೆಯಾದ ಹೆಣ್ಣು ಮಗಳು ಗಂಡನ ಮನೆಯ ಕಿರುಕುಳ ಸಹಿಸಿಕೊಳ್ಳುವ ಹೆಣ್ಣಿನಂತೆ ಸಹಿಸಿಕೊಂಡಿದ್ದೇನೆ ಎಂದರು.
ಇನ್ನು, ನಾಳೆ ರಾಜೀನಾಮೆ ನೀಡಲಿರುವ ಸವದಿ ನಾಳೆಯೇ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post