ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ದಕ್ಷಿಣ ಕನ್ನಡ |
ಈಗಾಗಲೇ ಮಳೆಯಿಂದ ತತ್ತರಿಸಿ ಹೋಗಿರುವ ಮಲೆನಾಡು #Malnad ಹಾಗೂ ಕರಾವಳಿಯ #Coastal ಆರು ಜಿಲ್ಲೆಗಳಲ್ಲಿ ಜುಲೈ 21ರವರೆಗೂ ರೆಡ್ ಅಲರ್ಟ್ #RedAlert ಘೋಷಣೆ ಮಾಡಲಾಗಿದ್ದು, ಅತಿ ತೀವ್ರವಾದ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ಕುರಿತಂತೆ ಹವಾಮಾನ ಇಲಾಖೆ #IMDKarnataka ಮತ್ತೆ ವರದಿ ಪ್ರಕಟಿಸಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 21ರವರೆಗೂ ರೆಡ್ ಅಲರ್ಟ್ ನೀಡಲಾಗಿದೆ.
ಇನ್ನು ಜುಲೈ 22ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಹಾಗೂ 23-24ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Also read: ಶಿಕಾರಿಪುರ | ಮೈದುಂಬಿಕೊಂಡ ಅಂಜನಾಪುರ ಜಲಾಶಯಕ್ಕೆ ಬಾಗಿನ ಸಮರ್ಪಣೆ
ಇದೇ ವೇಳೆ ಚಿಕ್ಕಮಗಳೂರು #Chikkamagalur ಹಾಗೂ ಶಿವಮೊಗ್ಗದಲ್ಲಿ 22-23ರಂದು, ಕೊಡಗಿನಲ್ಲಿ 22ರಂದು, ಬೆಳಗಾವಿಯಲ್ಲಿ 24ರವರೆಗೂ, ಬೀದರ್’ನಲ್ಲಿ 21ರವರೆಗೂ, ಕಲಬುರಗಿ ಹಾಗೂ ಯಾದಗಿರಿಯಲ್ಲಿ 21ರವರೆಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post