ಕಲ್ಪ ಮೀಡಿಯಾ ಹೌಸ್ | ಶಿರಾಡಿ |
ಕರಾವಳಿ ಭಾಗದಲ್ಲಿ ವರುಣನ ರುದ್ರನರ್ತನ ಮುಂದುವರೆದಿದದು, ಶಿರಾಡಿ ಘಾಟ್’ನಲ್ಲಿ #Shiradi Ghat ಗುಡ್ಡ ಕುಸಿಯುವ ಭೀತಿ ಎದುರಾಗಿದೆ.
ಕರಾವಳಿ ಭಾಗದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಗುಡ್ಡ ಕುಸಿದು, ಬಹಳಷ್ಟು ಸಮಸ್ಯೆ ಉಂಟಾಗಿದೆ. ಇದರ ನಡುವೆಯೇ ಶಿರಾಡಿ ಘಾಟ್’ನಲ್ಲೂ ಸಹ ಗುಡ್ಡ ಕುಸಿಯುವ ಭೀತಿಯಿದ್ದು, ಪರಿಣಾಮವಾಗಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರವನ್ನೂ ಸಹ ನಿಷೇಧಿಸಲಗಿದೆ.
ಇನ್ನು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿಗಳು ರೌದ್ರರೂಪ ತಾಳಿದ್ದು, ಗುಡ್ಡ ಕುಸಿತದಿಂದ ಹಲವರು ಮೃತಪಟ್ಟಿದ್ದಾರೆ.
ಒಂದೆಡೆ ಶಿರಾಡಿಘಾಟ್’ನಲ್ಲಿ ಈಗಾಗಲೇ ಕಾರಿನ ಮೇಲೆ ಗುಡ್ಡ ಕುಸಿದಿದ್ದು, ಇನ್ನೊಂದೆಡೆ ಮನೆಯಲ್ಲಿ ಮಲಗಿದ್ದವರ ಮೇಲೆ ಮನೆ ಕುಸಿದು ಬಿದ್ದಿದೆ. ಅಷ್ಟೇ ಅಲ್ಲದೇ ಕಣ್ಣೆದುರೇ ಹಸು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಮಲೆನಾಡು ಹಾಗೂ ಕರಾವಳಿಯನ್ನು ಅಕ್ಷರಶಃ ಬೆಚ್ಚಿ ಬೀಳಿಸಿರುವ ಪುನರ್ವಸು ಮಳೆಯ ಅಟ್ಟಹಾಸಕ್ಕೆ ಆಕಾಶದೆತ್ತರದ ಬೆಟ್ಟಗುಡ್ಡಗಳೇ ಧರಾಶಾಹಿಯಾಗುತ್ತಿದೆ.
ಹಲವು ಮನೆ, ದೇವಾಲಗಳಿಗೆ ವರುಣ ಜಲ ದಿಗ್ಬಂಧನ ಹಾಕಿದ್ದು, ಬಹಳಷ್ಟು ಸಮಸ್ಯೆ ಸೃಷ್ಠಿಯಾಗಿದೆ.
ಬೇಸಿಗೆಯಲ್ಲಿ ನೀರಿಲ್ಲದೇ ಒಣಗಿಹೋಗಿದ್ದ ನದಿ, ಕೆರೆ, ಹಳ್ಳ ಕೊಳ್ಳಗಳು ಈಗ ಉಕ್ಕಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ನದಿಗಳು ರೌದ್ರರೂಪ ತಾಳಿ, ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಮಲೆನಾಡು ಹಾಗೂ ಕರಾವಳಿಯ ಹಲವು ಭಾಗಗಳಲ್ಲಿ ರಸ್ತೆಗಳ ಮೇಲೆಯೇ ನದಿಯಂತೆ ನೀರು ಉಕ್ಕಿ ಹರಿಯುತ್ತಿದ್ದು, ಅಕ್ಷರಶಃ ಬೆಚ್ಚಿ ಬೀಳಿಸುವಂತೆ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post