ಕಲ್ಪ ಮೀಡಿಯಾ ಹೌಸ್ | ಬಿಹಾರ |
ವಿಧಾನಸಭಾ ಚುನಾವಣೆಯ ಫಲಿತಾಂಶ #Bihara Assembly Election Result ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ಹೊರಬೀಳಲಿದ್ದು, 2 ಗಂಟೆ ವೇಳೆಗೆ ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿಕೂಟ 201 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆರಂಭದಿಂದಲೂ ಭಾರೀ ಮುನ್ನಡೆಯನ್ನೇ ಕಾಯ್ದುಕೊಂಡು ಬಂದಿರುವ ಎನ್’ಡಿಎ ಮಧ್ಯಾಹ್ನದ ವೇಳೆಗೆ 201 ಸ್ಥಾನಗಳಿಗೆ ತಲುಪಿದೆ.
ಇನ್ನು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ #Mahaghatabandhan ಮೈತ್ರಿಕೂಟ 36 ಕ್ಷೇತ್ರಗಳಿಗೆ ಕುಸಿದಿದ್ದು, ಇತರರು ಆರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮುನ್ನಡೆಯಲ್ಲಿ ಬಿಜೆಪಿ 90, ಜೆಡಿಯು 80, ಆರ್’ಜೆಡಿ 27, ಕಾಂಗ್ರೆಸ್ ಕೇವಲ 4 ಹಾಗೂ ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಪ್ರಮುಖವಾಗಿ, ಮಹಾಘಟಬಂಧನ್ ಮೈತ್ರಿಕೂಟದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರೇ ಭಾರೀ ಹಿನ್ನಡೆಯಲ್ಲಿದ್ದಾರೆ.
ಮಧ್ಯಾಹ್ನದ ವೇಳೆಗೆ ಸುಮಾರು 3500ಕ್ಕೂ ಅಧಿಕ ಮತಗಳಿಂದ ತೇಜಸ್ವಿ ಯಾದವ್ ಹಿನ್ನಡೆಯಲ್ಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















