ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಆಲ್ಕೊಳ ವೃತ್ತದ ಸಮೀಪ ರಿಂಗ್ ರಸ್ತೆಯಲ್ಲಿ ಬೈಕ್’ವೊಂದು ಭೀಕರ ಅಪಘಾತಕ್ಕೀಡಾಗಿದ್ದು, ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
Also Read: ಉಕ್ಕಿನ ನಗರಿಯಲ್ಲಿ ವರುಣನ ಅಬ್ಬರ: ಭದ್ರಾವತಿಯಲ್ಲಿ ಭಾರೀ ಗಾಳಿ-ಮಳೆ
ಪೊಲೀಸ್ ಚೌಕಿ ಕಡೆಯಿಂದ ಆಲ್ಕೊಳ ವೃತ್ತದ ಕಡೆಗೆ ನೂತನ ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ವೇಗವಾಗಿ ತೆರಳುತ್ತಿದ್ದು, ಅರಣ್ಯ ಇಲಾಖೆ ಸನಿಹ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್’ನಿಂದ ಇಬ್ಬರು ಯುವಕರು ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ಯುವಕರಿಗೂ ತಲೆಯ ಹಿಂಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
Also Read: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಸವ ಭೂಷಣ ಪ್ರಶಸ್ತಿ…
ಮೃತರನ್ನು ವಿವೇಕಾನಂದ ಬಡಾವಣೆಯ ಅಭಯ್, ಕೋಟೆ ಗಂಗೂರಿನ ವರುಣ್ ಎಂದು ಗುರುತಿಸಲಾಗಿದೆ.
ಮೃತ ಯುವಕರು ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಪ್ರಾಣಹಾನಿಯಾಗುತ್ತಿರಲಿಲ್ಲ ಎಂಬುದು ಸ್ಥಳೀಯರು ಅಭಿಪ್ರಾಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post