ರಿಪ್ಪನ್’ಪೇಟೆ: ಇಲ್ಲಿನ ಸೂಡೂರ್ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್’ನ ಗೇಟ್’ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಸುಮಾರು 11.30ರ ವೇಳೆಗೆ ಘಟನೆ ನಡೆದಿದ್ದು, ಮೃತನನ್ನು ಮೂಗುಡ್ತಿ ನಿವಾಸಿ ಅಡುಗೆ ಕಂಟ್ರಾಕ್ಟರ್ ವಾಸಪ್ಪ(ವಾಸಣ್ಣ, 48 ವರ್ಷ) ಎಂದು ಗುರುತಿಸಲಾಗಿದೆ.
ವಾಸಪ್ಪ ಅವರು ಮದುವೆ ಅಡುಗೆ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ.
ರೈಲ್ವೆ ಗೇಟ್ ಬಳಿ ರಸ್ತೆ ಉಬ್ಬಿನ ಮೇಲೆ ಬೈಕ್ ಹಾರಿಸಿದಾಗ ನಿಯಂತ್ರಣ ತಪ್ಪಿ ರೈಲ್ವೆ ಗೇಟ್’ಗೆ ಅಳವಡಿಸಿದ ಕಂಬಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗೇಟಿನ ಚೂಪಾದ ಕಂಬಿ ಹೊಟ್ಟೆಯ ಭಾಗಕ್ಕೆ ತಗುಲಿ ಕರುಳು ಹೊರಬಂದಿದೆ. ನಂತರ ಸ್ಥಳೀಯರ ನೆರವಿನಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಿಪ್ಪನ್’ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಮಾಹಿತಿ: ಮಹೇಶ್, ಹಿಂಡ್ಲೆಮನೆ, ಹೊಸನಗರ)








Discussion about this post