ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನವನ್ನು ತಾಲೂಕಿನ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾಸಂಸ್ಥೆಯ ವತಿಯಿಂದ ತಾಯಿ ಮತ್ತು ಮಕ್ಕಳಿಗೆ ಹಣ್ಣು, ಬ್ರೆಡ್ ಹಾಗೂ ವಿಶೇಷವಾಗಿ ನವಜಾತ ಶಿಶುಗಳು ಸೇರಿದಂತೆ ಪುಟ್ಟ ಮಕ್ಕಳ ಹಾಸಿಗೆಯನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರುಗಳಾದ ಡಾ. ಶಿವಕುಮಾರ್, ಕೆ. ಕುಬೇರಪ್ಪ , ಡಾ. ವೀರೇಂದ್ರ, ರವೀಂದ್ರ, ಸಿದ್ದೇಶ್ವರ, ವಿಶ್ವನಾಥ್, ವಿದ್ಯಾಶಂಕರ್, ಹಾಗೂ ಮಕ್ಕಳ ತಜ್ಞ ಡಾ. ವಿನಯ್ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post