ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಹವನ ಮಾಡಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗಕ್ಕೆ ಸಿಹಿ ಸುದ್ದಿ ದೊರೆತಿದ್ದು, ಕಾಂತಾರಾ ಹಾಗೂ ಕೆಜಿಎಫ್-2 ಚಿತ್ರ ಸೇರಿ ಕನ್ನಡನಾಡಿಗೆ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿ ದೊರತಿದೆ.
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಜೇತರನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕನ್ನಡದ ಕಾಂತಾರ ಸಿನಿಮಾದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ನಟ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
2022ನೇ ಸಾಲಿನಲ್ಲಿ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗೈದ ಚಿತ್ರಗಳ ಪಟ್ಟಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಘೋಷಿಸಿದೆ.
ಅತ್ಯುತ್ತಮ ಜನಪ್ರಿಯ ಹಾಗೂ ಮನರಂಜನಾ ಚಿತ್ರವಾಗಿ ಎರಡು ವಿಭಾಗದಲ್ಲಿ `ಕಾಂತಾರ’ ಪ್ರಶಸ್ತಿ ಬಾಚಿಕೊಂಡಿದೆ.
ಅತ್ಯುತ್ತಮ ನಟರ ರೇಸ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಮಲೆಯಾಳಂ ನಟ ಮಮ್ಮುಟ್ಟಿ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ರಿಷಬ್ ಶೆಟ್ಟಿಗೆ ಪ್ರಶಸ್ತಿ ಒಲಿದುಬಂದಿದೆ.
ತುಳುನಾಡಿನ ದೈವರಾಧನೆಯನ್ನು ಬಿಂಬಿಸುವ ಹಾಗೂ ಕಾಡನ್ನು ರಕ್ಷಿಸಿ ಎನ್ನುವ ಸಂದೇಶ ಸಾರುವ ಕಾಂತಾರ ಚಿತ್ರದ ಅದ್ಭುತ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು, ಪ್ಯಾನ್ ಇಂಡಿಯಾದಲ್ಲಿ ಹೆಸರು ಮಾಡಿದ ಯಶ್ ನಟನೆಯ ಕೆಜಿಎಫ್-2 ಹಾಗೂ ಕಾಂತಾರ ಚಿತ್ರಗಳು ಎರಡೆರಡರು ಪ್ರಶಸ್ತಿಗಳು ಬಾಚಿ ಕೊಂಡಿರುವುದು ಮತ್ತೊಂದು ವಿಶೇಷ. ಕನ್ನಡಕ್ಕಲ್ಲದೇ ಮತ್ತೆ ಯಾವ ಯಾವ ಚಿತ್ರಗಳಿಗೆ ಪ್ರಶಸ್ತಿಗಳು ಬಂದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post