ಕಲ್ಪ ಮೀಡಿಯಾ ಹೌಸ್ | ಬೀರೂರು |
ಗ್ರಾಮೀಣ ಭಾಗದಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೀರೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದುಷ್ಕರ್ಮಿಯೊಬ್ಬ ಕಡೂರು ತಾಲೂಕಿನ ಹೊಗರೆಹಳ್ಳಿ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲನ್ನು ಮೀಟಿ ಮುರಿದು ಒಳಪ್ರವೇಶಿಸಿ ರೂ. 2.05 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ.
ಪ್ರಕರಣದಲ್ಲಿ ದಾಖಲಾದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡಿದ್ದ ಬೀರೂರು ಸಿಪಿಐ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ರೂ. 2.05 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
Also read: “Motorbike pilgrimage expedition to 12 Jyotirlingas completed by Praveen Singh of Microlabs”
ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ಸಿಪಿಐ ಬೀರೂರು ವೃತ್ತ ಎಸ್.ಎನ್. ಶ್ರೀಕಾಂತ್, ಬೀರೂರು ಪಿಎಸ್’ಐ ಜಿ.ಆರ್. ಸಜಿತ್ ಕುಮಾರ್, ಸಿಬ್ಬಂದಿಗಳಾದ ಡಿ.ವಿ. ಹೇಮಂತ್ ಕುಮಾರ್, ಬಿ.ಪಿ. ಕೃಷ್ಣಮೂರ್ತಿ, ಶಿವಕುಮಾರ್ ಮತ್ತು ರಾಜಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post