ಕೇವಲ ಮೋದಿಯವರನ್ನು ಸೋಲಿಸಲೆಂದು, ಪ್ರಜೆಗಳನ್ನು ಮರುಳು ಮಾಡಿ ಇಲ್ಲ ಸಲ್ಲದ ಆರೋಪ ಅಪವಾದ ಸೃಷ್ಟಿಸಲು ರಚನೆಯಾದದ್ದೇ ಮಹಾ ಘಟಬಂಧನ್.
ಇದು ಬಿಜೆಪಿಗೆ ಮತ್ತಷ್ಟು ಲಾಭವೇ ಆಗುತ್ತದೆ. ಇದೂ ಸಾಲದೆಂದು NDA ಮೈತ್ರಿ ಕೂಟದಿಂದ ಒಂದೊಂದನ್ನೇ ಕೀಳುವ ಪ್ರಕ್ರಿಯೆಯೂ ನಡೆದಿದೆ ಮತ್ತು ಕೆಲವೊಂದು ಕಿತ್ತು ಹೊರಬಂದೂ ಆಗಿದೆ.
ಆದರೆ ಮೇಲ್ನೋಟಕ್ಕೆ NDA ಬಲ ಕಳೆದುಕೊಂಡಿದೆ ಎಂದು ಕಂಡರೂ, ಈ ಹೊರಬಂದ ಪಕ್ಷಗಳ ಬಲ ಎಷ್ಟಿರಬಹುದು. ಕಾಂಕ್ರಿಟ್ ಛಾವಣಿಯು(Concrete Slabs) ಎದ್ದು ನಿಲ್ಲುವ ಹೊತ್ತಿಗೆ ಗುಜ್ಜಿ ಕಂಬಗಳನ್ನು ಇಡುತ್ತಾರೆ. ಕಾಂಕ್ರಿಟ್ ಚಾವಣಿಯ ಬೆಳವಣಿಗೆ ಆದ ಮೇಲೆ ಇಂತಹ ಗುಜ್ಜಿ ಕಂಬಗಳು ಹೋದರೇನೇ ಉತ್ತಮ. ಅದರ ಅಗತ್ಯ ಮತ್ತೆ ಆ ಛಾವಣಿಗೆ ಅಗತ್ಯವಿಲ್ಲ. ಅದಿರಲಿ ಬಲ ಕೊಟ್ಟಂತಹ ಪಕ್ಷಗಳು ಎಷ್ಟೆಷ್ಟು ಸ್ಥಾನಗಳದ್ದು ಅಂತೀರಾ? ಒಂದೋ ಎರಡೋ ಸ್ಥಾನಗಳ ಪ್ರಾದೇಶಿಕ ಪಕ್ಷಗಳಷ್ಟೆ. ಬಲಿಷ್ಟವಾದ ಆನೆಗೆ ಕುರಿಗಳ ಸಹಾಯ ಅಗತ್ಯವಿಲ್ಲ. ಅಂದೇ ಅಟಲ್ ಜೀ ಇದರ ಬಗ್ಗೆ ಒಲವು ತೋರಿರಲಿಲ್ಲ. ಆಡ್ವಾಣಿಯವರ ಅವಸರಕ್ಕೆ ಬೇಕಾಗಿ ಕಣ್ಣು ಮುಚ್ವಿಕೊಂಡಿದ್ದರಷ್ಟೆ.
ಇಂತಹ ಕಿತ್ತು ಹೊರಬಂದಂತಹ ಪಕ್ಷಗಳು, ಕೆಲ ಗತಿ ಇಲ್ಲದೆ ಒದ್ದಾಡುವ ನಿರ್ಗತಿಕ ಪಕ್ಷಗಳೆಲ್ಲ ಒಂದೆಡೆ ಕುಳಿತು ಹೊಂಚು ಹಾಕುತ್ತಿದ್ದಾಗ, ಕಾಂಗ್ರೆಸ್ ತನ್ನ ಬಲವನ್ನು ಕಳೆದುಕೊಂಡ ಸಂದರ್ಭದಲ್ಲಿ ಈಗ ಇವರುಗಳಿಗೆ ಮಹಾಘಟ್ಬಂದನ್ ಅಗತ್ಯ ಬಿತ್ತು.
ಮೋದಿ ಜತೆ ಸೇರುವ ಹಾಗಿಲ್ಲ. ಬದುಕಲು ಯಾವುದಾದರೂ ಆಶ್ರಯ ಬೇಕಲ್ವೇ? ಒಟ್ಟಿನಲ್ಲಿ ಅತೃಪ್ತಾತ್ಮಗಳ ಒಂದು ಸಂಘಟನೆ ಏಳುತ್ತಿದೆ. ಅದಿರಲಿ ಆ ಸಂಘಟನೆಯ ಒಳಗೆ ಇರುವ ಪಕ್ಷಗಳು ಒಂದಕ್ಕೊಂದು ಹೊಂದಿಕೊಂಡು ಹೋಗುವಂತದ್ದೇ? ಇಲ್ಲವೇ ಇಲ್ಲ. ಇದು ಎಣ್ಣೆ ಶೀಗೆಗಳ ಬಂಧನವಷ್ಟೆ. ಇಂತಹ ಉತ್ತಮ ಬೆಳವಣಿಗೆಯು ನಿಜಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಡಿ 285 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವುದಂತೂ ನಿಶ್ಚಿತ. ವೃಶ್ವಿಕ, ಧನು ರಾಶಿ ಸಂಚಾರದ ಗುರು, ಧನು ರಾಶಿಯ ಬಲಿಷ್ಟ ಶನಿಯ ಅನುಗ್ರಹವು ಧರ್ಮ ರಕ್ಷಣೆ ಮಾಡುವ ಪಕ್ಷಕ್ಕೆ ಲಭಿಸಲಿದೆ.
ಮಹಾಘಟ್ಬಂದನ್ ಚುನಾವಣಾ ಕಣದಲ್ಲಿ ಸ್ಥಾನ ಹಂಚಿಕೆಯ ಕಾಲದಲ್ಲಿ ಒಮ್ಮೆ ಭಿನ್ನಮತ ತೋರಿಸಲಿದೆ, ನಂತರ ಪ್ರಚಾರದಲ್ಲಿ ಉಲ್ಟಾ ಹೊಡೆದು ಕೊನೆಗೆ ಠೇವಣಿ ಕಳೆದುಕೊಳ್ಳುವ ಪಕ್ಷಗಳೆಷ್ಟೋ ದೇವನೇ ಬಲ್ಲ. ಅಂತೂ ಒಂದೊಂದು ಸೋತರೂ ಪರವಾಗಿಲ್ಲ. ಇದು ಒಂದನ್ನೊಂದು ಹಿಡಿದುಕೊಂಡು ಮೋದೀ ಪ್ರವಾಹದಲ್ಲಿ ಕೊಚ್ಚಿಹೋಗಲಿದೆ.
(ಲೇಖನ: ಪ್ರಕಾಶ್ ಅಮ್ಮಣ್ಣಾಯ)
Discussion about this post