ಶಿವಮೊಗ್ಗ: ಭಾರೀ ಕುತೂಹಲ ಕೆರಳಿಸಿ, ಪ್ರತಿಷ್ಠೆಯ ವಿಚಾರವಾಗಿದ್ದ ಶಿವಮೊಗ್ಗ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ, ಪಾಲಿಕೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಒಟ್ಟು 35 ವಾರ್ಡ್ ಗಳ ಪೈಕಿ ಬಿಜೆಪಿಯಿಂದ 20 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 8 ಸ್ಥಾನ ಗಳಿಸಿತ್ತು. ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದಿತ್ತು. ಅದೇ ರೀತಿ ಜೆಡಿಎಸ್ ಕೇವಲ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಕಳೆದ ಬಾರಿ ಜೆಡಿಎಸ್ 7 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು.
ಈ ಬಾರಿಯ ಫಲಿತಾಂಶ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಸತತ 5 ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್ ನ ಎಸ್.ಕೆ.ಮರಿಯಪ್ಪ 30ನೇ ವಾರ್ಡ್ ನಲ್ಲಿ ಸೋತಿದ್ದಾರೆ. ಬಿಜೆಪಿ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮನೆಯಿರುವ ಮಲ್ಲೇಶ್ವರ ನಗರದ 4ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಯೋಗೀಶ್ ಸತತ 3ನೆಯ ಬಾರಿಗೆ ಗೆಲುವು ಸಾಧಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ 8ನೇ ವಾರ್ಡ್ ನಲ್ಲಿ ಬಿಜೆಪಿ ಮುಖಂಡ ಎಸ್. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇರುವುದರಿಂದಾಗಿ ನಿರೀಕ್ಷಿತ ಸ್ಥಾನಗಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿತ್ತು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಮೈತ್ರಿ ಸರ್ಕಾರ ಇರುವುದರಿಂದಾಗಿ ನಾವು ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದೆ ಎಂದು ಬಿಎಸ್ವೈ ಹೇಳಿದರು.
ಇಲ್ಲಿದೆ ಫಲಿತಾಂಶ ಸಂಪೂರ್ಣ ವಿವರ:
ಒಟ್ಟು 35 ವಾರ್ಡ್ ಗಳು
ಬಿಜೆಪಿ – 20
ಕಾಂಗ್ರೆಸ್ – 07
ಜೆಡಿಎಸ್ – 02
ಎಸ್.ಡಿ.ಪಿ.ಐ. -01
ಪಕ್ಷೇತರ – 5
ವಾ. ಸಂ. 1- ಆಶಾ – ಬಿಜೆಪಿ -1,438
ವಾ. ಸಂ. 2- ವಿಶ್ವಾಸ್ – ಬಿಜೆಪಿ – 1,870
ವಾ. ಸಂ 3- ಧೀರರಾಜ್ – ಪಕ್ಷೇತರ – 1,920
ವಾ. ಸಂ. 4- ಯೋಗಿಶ್ – ಕಾಂಗ್ರೆಸ್ – 2,413
ವಾ. ಸಂ. 5- ಶಿವಕುಮಾರ್ – ಬಿಜೆಪಿ – 2,805
ವಾ. ಸಂ 6- ಲತಾ ಗಣೇಶ್ – ಬಿಜೆಪಿ – 1,866
ವಾ. ಸಂ. 7- ಅನಿತಾ ರವಿಶಂಕರ್ – ಬಿಜೆಪಿ – 2,123
ವಾ. ಸಂ. 8- ಚೆನ್ನಬಸಪ್ಪ – ಬಿಜೆಪಿ – 1,914
ವಾ. ಸಂ. 9- ನಾಗರಾಜ್ ಕಂಕಾರಿ – ಜೆಡಿಎಸ್ – 1,743
ವಾ. ಸಂ. 10- ಆರತಿ – ಬಿಜೆಪಿ – 2,232
ವಾ. ಸಂ- 11- ರಮೇಶ್ ಹೆಗ್ಡೆ – ಕಾಂಗ್ರೆಸ್ – 3,242
ವಾ. ಸಂ. 12- ಸುರೇಖಾ ಮುರುಳಿಧರ್ – ಬಿಜೆಪಿ -1,304
ವಾ. ಸಂ. 13- ಪ್ರಭಾಕರ್ – ಬಿಜೆಪಿ – 2,264
ವಾ. ಸಂ 14- ಯಮುನಾ – ಕಾಂಗ್ರೆಸ್ – 2,304
ವಾ. ಸಂ. 15- ಸತ್ಯನಾರಾಯಣ್ – ಜೆಡಿಎಸ್ – 1,708
ವಾ. ಸಂ. 16- ಆರ್.ಸಿ. ನಾಯಕ್ – ಕಾಂಗ್ರೆಸ್ – 1,891
ವಾ. ಸಂ 17- ಜ್ಙಾನೇಶ್ವರ್ – ಬಿಜೆಪಿ – 1,469
ವಾ. ಸಂ. 18- ರಾಹುಲ್ – ಪಕ್ಷೇತರ – 1,672
ವಾ. ಸಂ. 19- ಸುವರ್ಣ ಶಂಕರ್ – ಬಿಜೆಪಿ – 2,104
ವಾ. ಸಂ. 20- ರೇಖಾ ರಂಗನಾಥ್ – ಪಕ್ಷೇತರ
ವಾ. ಸಂ. 21- ಮೀನಾ – ಬಿಜೆಪಿ – 2,357
ವಾ. ಸಂ- 22- ಭಾನುಮತಿ – ಬಿಜೆಪಿ – 1,945
ವಾ. ಸಂ. 23- ಕಲ್ಪನಾ ರಾಮು -ಬಿಜೆಪಿ – 1907
ವಾ. ಸಂ. 24- ಜಯಕುಮಾರ್ – ಜೆಡಿಎಸ್ – 937
ವಾ. ಸಂ 25- ಮೆಹೆಕ್ ಷರೀಫ್ – ಕಾಂಗ್ರೆಸ್ – 1,274
ವಾ. ಸಂ. 26- ಮಂಜುಳಾ – ಬಿಜೆಪಿ – 1,162
ವಾ. ಸಂ. 27- ವಿಶ್ವನಾಥ್ – ಬಿಜೆಪಿ – 2,641
ವಾ. ಸಂ 28- ರಾಜು – ಬಿಜೆಪಿ – 1,515
ವಾ. ಸಂ. 29- ಸುನಿತಾ ಅಣ್ಣಪ್ಪಾ – ಬಿಜೆಪಿ – 1,388
ವಾ. ಸಂ. 30- ಗನ್ನಿ ಶಂಕರ್ – ಬಿಜೆಪಿ – 2,766
ವಾ. ಸಂ. 31- ಲಕ್ಷ್ಮೀ – ಬಿಜೆಪಿ -1,550
ವಾ. ಸಂ. 32- ಶಾಮೀರ್ ಖಾನ್ – ಕಾಂಗ್ರೆಸ್ – 1,551
ವಾ. ಸಂ- 33- ಶಬಾನಾ – ಎಸ್.ಡಿ.ಪಿ.ಐ. – 2046
ವಾ. ಸಂ. 34- ನಾಗರಾಜ್ – ಪಕ್ಷೇತರ – 2055
*ವಾ. ಸಂ- 35- ಸಂಗೀತಾ – ಬಿಜೆಪಿ
Discussion about this post