ನವದೆಹಲಿ: 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕೈಗೊಂಡ ಕ್ರಮಗಳಿಂದಾಗಿ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಡುವವರ ಸಂಖ್ಯೆ ಶೇ.80ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ.
ಈ ಕುರಿತಂತೆ ರಾಜ್ಯಸಭೆಯಲ್ಲಿಂದು ಮಾತನಾಡಿರುವ ಅವರು, ಸ್ವಿಸ್ ಬ್ಯಾಂಕ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಇದರಂತೆ 2014-17ರ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಒಟ್ಟಾರೇ ಶೇ. 50 ರಷ್ಟು ಕಾನೂನು ಹೊಣೆಗಾರಿಕೆಗಳನ್ನು ಹೆಚ್ಚಿಸಿರುವುದು ಸ್ವೀಸ್ ಬ್ಯಾಂಕ್ ವಾರ್ಷಿಕ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದರಿಂದ ಸ್ವಿಸ್ ಬ್ಯಾಂಕ್ಗಳಲ್ಲಿ ಕಪ್ಪು ಹಣವು 2014 ಮತ್ತು 2017 ರ ನಡುವೆ ಶೇ.80 ಕಡಿಮೆಯಾಗಿದೆ ಎಂದಿದ್ದಾರೆ.
ಸ್ವಿಟ್ಜರ್ಲೆಂಡ್ ನಲ್ಲಿ ಭಾರತೀಯ ನಿವಾಸಿಗಳ ಠೇವಣಿಗಳ ಸರಿಯಾದ ದತ್ತಾಂಶವನ್ನು ಗುರುತಿಸಲು ಎಸ್ಎನ್ಬಿ ಸಹಯೋಗದೊಂದಿಗೆ ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಸೆಟಲ್ಮೆಂಟ್ (ಬಿಐಎಸ್) ಪ್ರಕಟಿಸಿದ ದಾಖಲೆಗಳ ಮೂಲಕ ಸ್ಥಳೀಯ ಬ್ಯಾಂಕಿಂಗ್ ಅಂಕಿಅಂಶಗಳನ್ನು (ಎಲ್ ಬಿ ಎಸ್) ಸಂಗ್ರಹಿಸುತ್ತದೆ ಎಂದು ಭಾರತ ಸರ್ಕಾರಕ್ಕೆ ಸ್ವಿಸ್ ರಾಯಭಾರಿ ಆಂಡ್ರಿಯಾಸ್ ಬಾಮ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಪಿಯುಶ್ ಗೋಯಲ್ ವಿವರಿಸಿದರು.
Discussion about this post