ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ನ.19ರಂದು ದುಬೈನ ಶೇಖ್ ರಾಡ್ ಸಭಾಂಗಣದಲ್ಲಿ ವಿಶ್ವ ಕನ್ನಡ ಹಬ್ಬ ಏರ್ಪಡಿಸಲಾಗಿದೆ.
ಸಾಗರದಾಚೆಯ ದುಬೈನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಮೈಸೂರಿನ ರಾಜವಂಶಸ್ಥ ಮಹಾರಾಜರಾದ ಯದುವೀರ್, ಖ್ಯಾತ ಚಿತ್ರ ನಟರಾದ ಡಾ. ಶಿವರಾಜ್ ಕುಮಾರ್‌ರವರು ಭಾಗವಹಿಸಲಿದ್ದು, ಆನಂದ್ ಗುರೂಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.
ಡಾ. ಸಿ. ಸೋಮಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರಾದ ಭವ್ಯ, ಪ್ರೇಮಾ, ಸುಧಾರಾಣಿ, ಮೇಘಶ್ರೀ, ವಸಿಷ್ಠ ಸಿಂಹ ಮುಂತಾದವರು ಭಾಗಿಯಾಗುವುದರ ಜೊತೆಗೆ ಸಾಂಸ್ಕೃತಿಕ ತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಟ ವಿಜಯ ರಾಘವೇಂದ್ರ ರವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಲಿದ್ದಾರೆ. ಕನ್ನಡ ನಾಡಿನ ಸಾಂಸ್ಕೃತಿಕ ರಂಗದ ವಿಶೇಷ ಕಲಾ ಪ್ರಕಾರಗಳ ಅನಾವರಣ ನಡೆಯಲಿದೆ. ವಿಶೇಷವಾಗಿ ಬುಡಕಟ್ಟು ಜನಾಂಗದ ಕಲಾ ನೈಪುಣ್ಯಕ್ಕೆ ವೇದಿಕೆ ಒದಗಿಸಿ ಕೊಡಲಾಗುತ್ತಿದೆ. ಒಟ್ಟಾರೆ 1500 ರಿಂದ 2000 ಜನ ಸೇರುವ ಬೃಹತ್ ಕಾರ್ಯಕ್ರಮ ಇದಾಗಲಿದ್ದು, ಇದೇ ವೇದಿಕೆಯಲ್ಲಿ ಮುದ್ರ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ನಾಡು ನುಡಿಗಾಗಿ ನಿರಂತರ ಸೇವೆ ಸಲ್ಲಿಸಿದ ಗಣ್ಯಮಾನ್ಯರನ್ನು ಒಳಗೊಂಡು 40 ಜನರಿಗೆ “ವಿಶ್ವಮಾನ್ಯ ಪ್ರಶಸ್ತಿ” ಹಾಗೂ ಹಲವು ಸಾಧಕರಿಗೆ ಪುನೀತ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಗುತ್ತಿದೆ.
ಕನ್ನಡ ನಾಡು ನುಡಿಯ ಭವ್ಯ ಪರಂಪರೆಯನ್ನು ಈ ನೆಲದಲ್ಲಿ ಝೇಂಕರಿಸುವಂತೆ ಮಾಡಿ, ನಮ್ಮ ನಾಡಿಗೆ ಕೀರ್ತಿ ತರುವ ವಿಶಿಷ್ಟ ಪ್ರಯತ್ನ ಇದಾಗಿದೆ.ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹೊಸ ಪ್ರತಿಭೆಗಳಿಗೆ ಅವಕಾಶವಿದ್ದು, ಆಸಕ್ತರು 9148212345, 9448260417 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















