ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್’ಗೆ 2019ನೆಯ ಸಾಲಿನ ‘ಸೆಕ್ಸಿಯಸ್ಟ್ ಏಷ್ಯನ್ ಮ್ಯಾನ್ ಇನ್ ದಿ ವರ್ಲ್ಡ್’ ಎಂಬ ಗೌರವ ದೊರೆತಿದೆ.
ವಿಶ್ವದ ಅತ್ಯಂತ ಪ್ರಖ್ಯಾತ ಪತ್ರಿಕೆಗಳಲ್ಲಿ ಒಂದಾದ ಯುಕೆ ಮೂಲದ ಈಸ್ಟರ್ನ್ ಐ ನ್ಯೂಸ್ ಪೇಪರ್’ನ 16ನೆಯ ಎಡಿಷನ್ ಈ ವಿಚಾರವನ್ನು ಪ್ರಕಟಿಸಿದ್ದು, ಇದರಂತೆ ಹೃತಿಕ್ ಈ ಸಾಲಿನಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಗ್ರೀಕ್ ಗಾಡ್ ಲುಕ್ಸ್’ಗೆ ಹೆಸರುವಾಸಿಯಾದ ಹೃತಿಕ್, ಕಹೋ ನಾ ಪ್ಯಾರ್ ಹೈ, ಸೂಪರ್ 30 ಮತ್ತು ವಾರ್’ನಂತಹ ಬ್ಲಾಕ್ ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿರುವ ಮೆಚ್ಚುಗೆ ಪಡೆದ ನಟ ಎಂದು ಈಸ್ಟರ್ನ್ ಐ ವರದಿ ಮಾಡಿದೆ.
ಮತ್ತೊಬ್ಬ ಬಾಲಿವುಡ್ ನಟ ಮತ್ತು 2017ರ ವಿಜೇತ ಶಾಹಿದ್ ಕಪೂರ್ ಎರಡನೇ ಸ್ಥಾನದಲ್ಲಿದ್ದರೆ, ಎರಡನೆಯ ರನ್ನರ್ ಅಪ್ ವಿವಿಯನ್ ದ್ಸೆನಾ ಮತ್ತೆ ಸೆಕ್ಸಿಯೆಸ್ಟ್ ಟಿವಿ ಸ್ಟಾರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post