ಶಿವಮೊಗ್ಗ: ಇಲ್ಲಿನ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಇಂದು ಸಂಜೆ ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಮೃತರೆಲ್ಲಾ ಶಿವಮೊಗ್ಗ ಮೂಲದ ಮೆಸ್ಕಾಂ ನಿವೃತ್ತ ಎಈಈ ಚಂದ್ರಪ್ಪ ಎಂಬುವವರ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಎಈಈ ಆಗಿದ್ದ ಚಂದ್ರಪ್ಪ, ಪತ್ನಿ ಮಂಗಳಾ, ಇವರ ಪುತ್ರ ಮಂಜುನಾಥ, ಅಳಿಯ ನೀಲಕಂಠ , ಪುತ್ರಿ ಉಷಾ ಹಾಗೂ ಮಗು ನಂದೀಶ್ ಮೃತರು…ಓರ್ವ ಮಗುವನ್ನು ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಕುಂಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
















