ಕಲ್ಪ ಮೀಡಿಯಾ ಹೌಸ್ | ಮುಂಬೈ/ಚೆನ್ನೈ |
2024ರ ಐಪಿಎಲ್ ಸೀಸನ್ 2ರ #IPL2024 ವೇಳಾಪಟ್ಟಿಯನ್ನು ಬಿಸಿಸಿಐ #BCCI ಬಿಡುಗಡೆ ಮಾಡಿದ್ದು, ಭಾರತದಲ್ಲಿ ನಡೆಯಲಿರುವ ಈ ಸರಣಿಯ ಫೈನಲ್ಸ್ ಆತಿಥ್ಯವನ್ನು ಚೆನ್ನೈ ವಹಿಸಲಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್ ಭಾರತದಿಂದ ಬೇರೆ ಕಡೆಗೆ ಸ್ಥಳಾಂತರ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇಂದು ಅದಕ್ಕೆ ತೆರೆ ಬಿದ್ದಿದ್ದು, ಈ ಸೀಸನ್ ಫೈನಲ್ಸ್ ಆತಿಥ್ಯವನ್ನು ಚೆನ್ನೈ #Chennai ವಹಿಸಲಿದೆ.

ಕ್ವಾಲಿಫೈಯರ್ 2 ಮತ್ತು ಫೈನಲ್ ಚೆನ್ನೈನಲ್ಲಿ ಐಕಾನಿಕ್ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2 ಮೇ 24 ರಂದು ನಡೆಯಲಿದ್ದು, ಫೈನಲ್ ಮೇ 26 ರಂದು ಚೆನ್ನೈನಲ್ಲಿ ನಡೆಯಲಿದೆ.
ಈ ವರ್ಷದ ಐಪಿಎಲ್ ಸಮಯದಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿರುವುದರಿಂದ, ಪೂರ್ಣ ವೇಳಾಪಟ್ಟಿ ಹೊರಬರಲು ಸ್ವಲ್ಪ ವಿಳಂಬವಾಗಿದೆ. ಬಿಸಿಸಿಐ ಮೊದಲ 17 ದಿನಗಳ ಪಂದ್ಯಗಳನ್ನು ಮಾತ್ರ ಬಿಡುಗಡೆ ಮಾಡಿದೆ.

ಐಪಿಎಲ್ 2024 ಹಂತ 2 ವೇಳಾಪಟ್ಟಿಯ ಪ್ರಮುಖ ಅಂಶಗಳು
ಹಂತ 2 ರ ಮೊದಲ ಡಬಲ್ ಹೆಡರ್ ಎಪ್ರಿಲ್ 14, ಭಾನುವಾರ ಮಧ್ಯಾಹ್ನ 3:30ಕ್ಕೆ ಪಂದ್ಯ ಈಡನ್ ಗಾರ್ಡನ್’ನಲ್ಲಿ ನಡೆಯಲಿದೆ. ಇದರ ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂಐ ಮತ್ತು ಸಿಎಸ್’ಕೆ ನಡುವೆ ದೊಡ್ಡ ಘರ್ಷಣೆ ನಡೆಯಲಿದೆ.
ಎರಡನೇ ಹಂತದಲ್ಲಿ ಒಟ್ಟು 11 ಡಬಲ್ ಹೆಡರ್ ದಿನಗಳು ಇರುತ್ತವೆ. ಹಂತ 1 ರಲ್ಲಿ ವೈಜಾಗ್ ಅನ್ನು ತಮ್ಮ ತವರು ಮೈದಾನವಾಗಿ ಬಳಸಿಕೊಳ್ಳುವ ಡೆಲ್ಲಿ ಕ್ಯಾಪಿಟಲ್ಸ್, ಎಪ್ರಿಲ್ 20 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಹೋರಾಟಕ್ಕಾಗಿ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಮರಳಲಿದೆ.

ಆರ್’ಆರ್’ ಮೇ 15 ರಂದು ಪಿಬಿಕೆಎಸ್ ಮತ್ತು ಮೇ 19 ರಂದು ಕೆಕೆಆರ್ ವಿರುದ್ಧದ ಪಂದ್ಯಗಳಿಗೆ ಗುವಾಹಟಿಯನ್ನು ತಮ್ಮ ಹೋಮ್ ಗ್ರೌಂಡ್’ನಲ್ಲಿ ಆಡಲಿದೆ. ಇದು ಪ್ರಾಸಂಗಿಕವಾಗಿ ಐಪಿಎಲ್ 2024 ರ ಸೀಸನ್ ಅಂತಿಮ ಲೀಗ್ ಆಟವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post