ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಜಿಲ್ಲೆಯ ಇತಿಹಾಸದಲ್ಲೇ ಕೋಲ್ಡ್ ಬ್ಲಡಡ್ ಎನ್ನಬಹುದಾದ ಒಂದು ವರ್ಷದ ಹಳೆಯ ಪ್ರಕರಣವನ್ನು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ ಮಗನ ಡಬಲ್ ಮಡರ್ರ ಪ್ರಕರಣ ಬೇಧಿಸಿ, ಕೊಲೆಗೆ ಕಾರಣನಾದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2023ರ ಮಾರ್ಚ್ 13ರಂದು ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದರು. ವಿಜಯಪುರದ ಸಾಗರ್ ನಾಯಕ್ ಎಂಬಾತನಿಂದ ಕೊಲೆ ನಡೆದಿತ್ತು.
Also read: ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಪ್ರೊ.ಬಿ.ಕೆ. ರವಿ ಮರು ಆಯ್ಕೆ
ಸಾಗರ್ ಎಂಬಾತ ಇಬ್ಬರನ್ನೂ ಕ್ರೂರವಾಗಿ ಕೊಂದು ಎರಡೂ ಶವಗಳನ್ನು ಆಕೆಯದ್ದೆ ಲಗೇಜ್ ಬ್ಯಾಗಿನಲ್ಲಿ ತುಂಬಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಬಿಸಾಡಿದ್ದ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post