ಪಣಜಿ: ಗೋವಾದಲ್ಲಿ ರಾತ್ರೋರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಎಂಜಿಪಿಗೆ ಸೇರಿದ ಇಬ್ಬರ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಮನೋಹರ್ ಪರಿಕ್ಕರ್ ಅಸ್ತಂಗತರಾದ ನಂತರ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಇದೊಂದು ಪ್ರಮುಖ ಭಾಗವಾಗಿದೆ.
Michael Lobo, Goa Dy Speaker&BJP MLA on merger of Maharashtrawadi Gomantak Legislative Party with BJP: MGP's legislative wing has split. 2/3rd of MGP legislators formed a separate group&they're merging it with BJP. All formalities as per Constitution of India have been completed. pic.twitter.com/DMszKPanbJ
— ANI (@ANI) March 26, 2019
ಎಂಜಿಪಿ ಶಾಸಕರಾದ ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್ ಅವರು ಗೋವಾ ವಿಧಾನಸಭೆ ಸ್ಪೀಕರ್ ಮೈಕಲ್ ಲೋಬೊ ಅವರಿಗೆ ತಡರಾತ್ರಿ 1:45 ರ ಸುಮಾರಿಗೆ ಪತ್ರವೊಂದನ್ನು ನೀಡಿ, ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು.
Goa CM Pramod Sawant on merger of Maharashtrawadi Gomantak Legislative Party with BJP: Two MGP MLAs Manohar Ajgaonkar & Deepak Pauskar have joined BJP for the stability of the government. Automatically, our strength has grown to 14. pic.twitter.com/ByF838ftOk
— ANI (@ANI) March 26, 2019
ಸ್ಪೀಕರ್ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದು, ಇದೀಗ ಅದಕ್ಕೆ ಬಿಜೆಪಿ ಬಲ 14ಕ್ಕೇರಿದೆ. ಎಂಜಿಪಿಯ ಮೂವರು ಶಾಸಕರಲ್ಲಿ ಇಬ್ಬರು ಪತ್ರಕ್ಕೆ ಸಹಿ ಮಾಡಿದ್ದರೆ, ಹಾಲಿ ಉಪಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರು ಮಾತ್ರ ಪತ್ರಕ್ಕೆ ಸಹಿಮಾಡಲು ಸಿದ್ಧರಿಲ್ಲ ಎಂದಿದ್ದಾರೆ ಎಂದು ವರದಿಯಾಗಿದೆ.
ಪರಿಕ್ಕರ್ ನಿಧನರಾದ ನಂತರ ಅಚ್ಚರಿಯಾಗಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಮೋದ್ ಸಾವಂತ್ ಚಾಣಾಕ್ಷ ನಡೆ ಇದಕ್ಕೆ ಕಾರಣ ಎನ್ನಲಾಗಿದ್ದು, ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
Discussion about this post