ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಕ್ಷಣದಿಂದ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ.
ನೀತಿ ಸಂಹಿತೆ ಜಾರಿಯ ನಂತರ ಸರ್ಕಾರಿ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಯಾಗಲಿದ್ದು, ಪ್ರಮುಖವಾಗಿ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಯಾವುದೇ ರೀತಿಯ ಆಡಳಿತಾತ್ಮಕ ಅಧಿಕಾರ ಚಲಾಯಿಸುವಂತಿಲ್ಲ.
ಏನೆಲ್ಲಾ ಬದಲಾವಣೆಯಾಗಲಿದೆ?
- ಸಚಿವರು ಸರ್ಕಾರಿ ವಾಹನ ಬಳಸುವಂತಿಲ್ಲ
- ಸರ್ಕಾರಿ ಆದೇಶ ಹೊರಡಿಸಲು ಸಚಿವರಿಗೆ ಅಧಿಕಾರವಿಲ್ಲ
- ಸಿಎಂ-ಸಚಿವರು ಯಾವುದೇ ಘೋಷಣೆ ಮಾಡುವಂತಿಲ್ಲ
- ತಮ್ಮ ಯಾವುದೇ ಕೆಲಸಗಳಿಗೆ ಸರ್ಕಾರಿ ಕಟ್ಟಡ ಬಳಸುವಂತಿಲ್ಲ
- ನಿರೀಕ್ಷಣಾ ಮಂದಿರಗಳನ್ನೂ ಸಹ ಇವರು ಬಳಸುವಂತಿಲ್ಲ
- ಸಚಿವಾಲಯ ಸಿಬ್ಬಂದಿಗಳನ್ನು ಇವರು ಬಳಸಿಕೊಳ್ಳುವಂತಿಲ್ಲ
- ವಿಧಾನಸೌಧ, ವಿಕಾಸಸೌಧದಲ್ಲಿ ಸಭೆ-ಸಮಾರಂಭ ನಡೆಸುವಂತಿಲ್ಲ
- ಭದ್ರತಾ ಸಿಬ್ಬಂತಿಗಳನ್ನು ಮಾತ್ರ ಬಳಸಲು ಅವಕಾಶವಿದೆ
- ಮಾಧ್ಯಮಗಳಲ್ಲಿ ಸರ್ಕಾರದ ಖರ್ಚಿನಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ
- ರಾಜಕೀಯ ಸಭೆ, ಸಮಾರಂಭ ನಡೆಸಲು ಆಡಳಿತದ ಅನುಮತಿ ಕಡ್ಡಾಯ
- ಅಭ್ಯರ್ಥಿಯು ಮೆರವಣಿಗೆ ನಡೆಸಲು ಅನುಮತಿ ಕಡ್ಡಾಯ
- ಜಾತಿ, ಧರ್ಮದ ನಿಂದನಾತ್ಮಕ ಭಾಷಣ ಮಾಡುವಂತಿಲ್ಲ
- ಅನುದಾನ ಬಿಡುಗಡೆ, ಯೋಜನೆಗಳ ಘೋಷಣೆ, ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ
Also read: ಕರ್ನಾಟಕ ರಣಕಣಕ್ಕೆ ಮುಹೂರ್ತ: ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ, 13ರಂದು ಫಲಿತಾಂಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post