ನವದೆಹಲಿ: ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಇಡಿಯ ವಿಶ್ವವನ್ನೇ ಬೆರಗುಗೊಳಿಡಿದ್ದ ಮೋದಿ ನೇತೃತ್ವದ ಭಾರತ ಸರ್ಕಾರ, ಈಗ ಬಾಹ್ಯಾಕಾಶದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನಿಂದಾಗಿ ಇಡಿಯ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಏನಿದು ಮಿಷನ್ ಶಕ್ತಿ ಯೋಜನೆ?
ಭಾರತದ ರಕ್ಷಣೆಗಾಗಿ ರಕ್ಷಣಾ ಇಲಾಖೆಯ ಅಡಿಯಲ್ಲಿ ಭೂಸೇನೆ, ವಾಯು ಸೇನೆ ಹಾಗೂ ನೌಕಾಸೇನೆ ಕರ್ತವ್ಯ ನಿರ್ವಹಿಸುತ್ತಿದ್ದು, ಇದರ ಮುಂದಿನ ಒಂದು ಸೇನೆಯಾಗಿ ನಿಲ್ಲಬಲ್ಲಂತಹ ಸಾಧನೆಯ ಹಾದಿಯ ಒಂದು ಹೆಜ್ಜೆಯೇ ಮಿಷನ್ ಶಕ್ತಿ.
ಮುಂದುವರೆದ ಸ್ಯಾಟಲೈಟ್ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡ ಶತ್ರು ರಾಷ್ಟ್ರ ಭಾರತದ ವಾಯುಗಡಿಯ ವ್ಯಾಪ್ತಿಯಲ್ಲಿ ಭೂಮಿಯಿಂದ ಸುಮಾರು 300 ಕಿಮೀ ಎತ್ತರದಲ್ಲಿ ನೇರ ಪ್ರಸಾರ ನೀಡುವ ಸ್ಯಾಟಲೈಟ್ ಒಂದನ್ನು ನಿಯೋಜಿಸುತ್ತು. ಇದರ ಮೂಲಕ ಭಾರತದ ಆಂತರಿಕ ವಿದ್ಯಮಾನಗಳನ್ನು ಕದಿಯುವ ಮೂಲಕ ಕಚಡಾ ಬುದ್ದಿಯನ್ನು ಪ್ರದರ್ಶಿಸಿತ್ತು.
ಆದರೆ, ಇಂತಹ ಕೃತ್ಯವನ್ನು ಹೊಡೆದುರುಳಿಸಲು ಕೇಂದ್ರ ಸರ್ಕಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಯೋಜನೆಯ ಹೆಸರೇ ಮಿಷನ್ ಶಕ್ತಿ.
ನಡೆದಿದ್ದೇನು?
ಶತ್ರುರಾಷ್ಟ್ರದ ಸಕ್ರಿಯ ಉಪಗ್ರಹವೊಂದನ್ನು ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ಮೂಲಕ ಹೊಡೆದುರುಳಿಸಲು ಯೋಜನೆ ರೂಪಿಸಿದ ಭಾರತದ ಹೆಮ್ಮೆಯ ಡಿಆರ್’ಡಿಒ ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದೆ. ಉಪಗ್ರಹ ನಿಗ್ರಹ ಕ್ಷಿಪಣಿ ಎ-ಸ್ಯಾಟ್ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ (ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಿದೆ.
ಭೂಮಿಯಿಂದ 300 ಕಿಮೀ ಎತ್ತರದಲ್ಲಿರುವ ಲೋ ಅರ್ಥ್ ಆರ್ಬಿಟ್ ಬಾಹ್ಯಾಕಾಶದಲ್ಲಿ ಶತ್ರು ರಾಷ್ಟ್ರದ ಸ್ಯಾಟಲೈಟನ್ನು ಹೊಡೆದುರುಳಿಸುವ ಈ ಯೋಜನೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಡಿಆರ್’ಡಿಒ ಮಾಡುವ ಮೂಲಕ ಭಾರತದ ಶಕ್ತಿ ಎಂತಹುದ್ದು ಎಂಬುದನ್ನು ಜಗತ್ತಿಗೆ ಅನಾವರಣಗೊಳಿಸಿದ್ದಾರೆ.
ಬಾಹ್ಯಾಕಾಶದಲ್ಲೇ ಸ್ಯಾಟಲೈಟನ್ನು ಹೊಡೆದು ಧ್ವಂಸ ಮಾಡುವ ಇಂತಹ ತಂತ್ರಜ್ಞಾನವನ್ನು ಈವರೆಗೂ ವಿಶ್ವದಲ್ಲಿ ಮೂರು ರಾಷ್ಟ್ರಗಳು ಮಾತ್ರ ಹೊಂದಿದ್ದವು. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ್ದು, ಈಗ ಈ ಸಾಲಿಗೆ ನಾಲ್ಕನೆಯ ಸೂಪರ್ ಪವರ್ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು, ಶತ್ರು ರಾಷ್ಟ್ರಕ್ಕೆ ಮಹತ್ವದ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬಾಹ್ಯಾಕಾಶದಲ್ಲಿ ದಾಳಿ ಹೇಗೆ ನಡೆಯುತ್ತದೆ?
ಆಂತರಿಕ್ಷಾದಲ್ಲಿ ಉಪಗ್ರಹ ಉಡಾವಣೆ ಮಾಡಿದಾಗ ಅದು ಹಾಳಾಗಾದ ಅದು ನಿಷ್ಕ್ರಿಯಗೊಂಡಾಗ ಅದನ್ನು ಭೂಮಿಯಿಂದಲೇ ಕಿರಣಗಳನ್ನು ಬಿಡುವ ಮೂಲಕ ಹೊಡೆದು ಉರುಳಿಸುವ ಕೆಲಸ ಮಾಡುತ್ತದೆ.
ಭೂಮಿಯ ಮೂಲಕವೇ ಕ್ಷಿಪಣಿಗಳನ್ನು ಉಡಾವಣೆ ಮಾಡಿ ಬಾಹ್ಯಾಕಾಶದಲ್ಲೇ ಸ್ಯಾಟಲೈಟನ್ನು ಹೊಡೆದುರುಳಿಸಬಹುದಾಗಿದೆ. ಸಾವಿರ ಕಿಮೀ ದೂರ ಇದ್ದರೂ ಸಹ ನಿರ್ಧಿಷ್ಟ ಗುರಿಯನ್ನು ಹೊಡೆದು ಹಾಕುವಲ್ಲಿ ಡಿಆರ್’ಡಿಒ ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನ ಹೊಂದಿದೆ.
ಬಾಹ್ಯಾಕಾಶ ಆಯುಧಗಳು ಕೋಲ್ಡ್ ವಾರ್ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು. ಬಾಹ್ಯಾಕಾಶ ವ್ಯವಸ್ಥೆಯನ್ನು ಕಕ್ಷೆಯಲ್ಲಿ (ಅಂದರೆ ಉಪಗ್ರಹ ವಿರೋಧಿ ಶಸ್ತ್ರಾಸ್ತ್ರಗಳು), ಬಾಹ್ಯಾಕಾಶದಿಂದ ಭೂಮಿಯ ಮೇಲೆ ಆಕ್ರಮಣ ಗುರಿಗಳನ್ನು ಆಕ್ರಮಿಸಬಹುದು ಅಥವಾ ಬಾಹ್ಯಾಕಾಶದ ಮೂಲಕ ಪ್ರಯಾಣಿಸುವ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಹುದು.
ಜಾಗವನ್ನು ಮಿಲಿಟರೈಸೇಶನ್ ಮಾಡುವ ಸಂದರ್ಭದಲ್ಲಿ, ಶೀತಲ ಸಮರದ ಸಮಯದಲ್ಲಿ ಅಂತಹ ಶಸ್ತ್ರಾಸ್ತ್ರಗಳನ್ನು ಮುಖ್ಯವಾಗಿ ಸ್ಪರ್ಧಿಸುವ ಮಹಾಶಕ್ತಿಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ.
ಬಾಹ್ಯಾಕಾಶದಲ್ಲೇ ಸ್ಯಾಟಲೈಟನ್ನು ಉಡಾಯಿಸುವ ತಂತ್ರಜ್ಞಾನದಲ್ಲಿ ಭೂಮಿಯಿಂದ ಆಗಸಕ್ಕೆ ಹಾಗೂ ಆಗಸದಿಂದ ಆಗಸಕ್ಕೆ ಹಾರಿಸಿ ಉಡಾಯಿಸುವ ಮಹಾನ್ ಶಕ್ತಿಶಾಲಿ ಕ್ಷಿಪಣಿಗಳು ಜಗತ್ತಿನಲ್ಲಿವೆ.
ಎ-ಸ್ಯಾಟ್ ಕ್ಷಿಪಣಿಯ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ ಈ ಕ್ಷಿಪಣಿಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ತಯಾರಾಗಿದೆ. ಹೀಗಾಗಿ ಇಂತಹ ಕ್ಷಿಪಣಿಗಳಿಗಾಗಿ ಭಾರತ ಇನ್ನು ಮುಂದೆ ವಿದೇಶ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಅಲ್ಲದೆ ಇದೇ ಮಾದರಿಯ ವಿದೇಶಿ ಕ್ಷಿಪಣಿಗಳ ವೆಚ್ಚಕ್ಕೆ ಹೋಲಿಕೆ ಮಾಡಿದರೆ ಎ-ಸ್ಯಾಟ್ ಕ್ಷಿಪಣಿಯ ವೆಚ್ಚ ಕಡಿಮೆ ಎಂದು ಹೇಳಲಾಗಿದೆ.
Discussion about this post