ಕಲ್ಪ ಮೀಡಿಯಾ ಹೌಸ್ | ಬಿಆರ್’ಪಿ(ಚಿಕ್ಕಮಗಳೂರು) |
ಇಲ್ಲಿನ ಭದ್ರಾ ಅಣೆಕಟ್ಟೆಯಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಒಟ್ಟು ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡದಿದೆ.
ಲಕ್ಕವಳ್ಳಿಯ ನಿವಾಸಿ ರವಿ ಎನ್ನುವವರ ನಿವಾಸಕ್ಕೆ ರಜೆಗೆಂದು ನಂಜನಗೂಡಿನಿಂದ ಸಂಬಂಧಿಗಳು ಆಗಮಿಸಿದ್ದರು. ಇವರೆಲ್ಲಾ ಅಣೆಕಟ್ಟೆ ನೋಡಲು ತೆರಳಿದ್ದರು. ಈ ವೇಳೆ ಆಟವಾಡುವಾಗ ಆಯತಪ್ಪಿ ಬಿದ್ದ ಅನನ್ಯಾ ಎಂಬ ಬಾಲಕಿಯನ್ನು ರಕ್ಷಿಸಲು ಶಾಮವೇಣಿ ಎನ್ನುವವರು ಮುಂದಾಗಿದ್ದು, ಇವರೂ ಸಹ ನೀರಿಗೆ ಸಿಲುಕಿದ್ದಾರೆ. ಇವರನ್ನು ರಕ್ಷಿಸುವ ಸಲುವಾಗಿ ರವಿ ಎನ್ನುವವರೂ ಸಹ ಮುಂದಾಗಿದ್ದು ಇವರೂ ಸಹ ನೀರಿಗೆ ಸಿಲುಕಿದ್ದಾರೆ. ಘಟನೆಯಲ್ಲಿ ಮೂವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post