Saturday, August 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು… ಛಾಯಾಗ್ರಹಣದ ದಿನದಂದು ಪತಿಗೊಂದು ಪದಗುಚ್ಛ

August 19, 2025
in Special Articles
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ವಿದ್ಯಾ ವಿನಯ ಸಂಪನ್ನಃ ಕರ್ತವ್ಯ ನಿಷ್ಠಃ ಸಮಃ ಸದಾ | ಲೋಕೇ ಹಿತಂ ಯಃ ಕುರುತೇ ಸ ವೈ ಸತ್ತ್ವಧರಃ ನರಃ||

ವಿದ್ಯೆಯುಳ್ಳವನು, ವಿನಯವಂತನು ತನ್ನ ಕರ್ತವ್ಯಕ್ಕೆ ನಿಷ್ಠೆ ಹೊಂದಿರುವವನು ಹಾಗೂ ಸದಾ ಸಮಚಿತ್ತನಾಗಿರುವವನು ಅಲ್ಲದೇ ಯಾವಾಗಲೂ ಇತರರ ಹಿತಕ್ಕಾಗಿ ದುಡಿಯುವವನೇ ನಿಜವಾದ ಸಜ್ಜನ ಹಾಗೂ ಶ್ರೇಷ್ಠ ವ್ಯಕ್ತಿ. ಇಂತಹ ಅರ್ಥದ ಈ ಸುಭಾಷಿತ ಓದಿದಾಗ ನನ್ನ ಸ್ಮರಣೆಗೆ ಬಂದದ್ದು ಸರಳ ಸಜ್ಜನಿಕೆಯ ವ್ಯಕ್ತಿ ಆದಿತ್ಯ ಪ್ರಸಾದ್.

ಅವರು ಜನಿಸಿದ್ದು ರಮ್ಯಮನೋಹರವಾದ ಕಡಲೂರಾದ ಕುಂದಾಪುರದ ಸಮೀಪದ ನಾಗೂರಿನಲ್ಲಿ. ತಂದೆ ಮಂಜುನಾಥ್ ಗಜಾನನ ಬಸ್’ನಲ್ಲಿ ನಿರ್ವಾಹಕ ಹಾಗೂ ನಂತರ ಶಾಲಾ ವಾಹನ ಒಂದರ ಚಾಲಕರಾಗಿ ಶಿಸ್ತಿನ ಜೀವನ ನಡೆಸಿ, ತನ್ನೂರಿನಲ್ಲಿ, ತಾನಿದ್ದೆಡೆಯಲ್ಲಿ ನಗು ಹಾಗೂ ತನ್ನ ಕರ್ತವ್ಯ ನಿಷ್ಠೆಯಿಂದಲೇ ಹೆಸರು ಮಾಡಿದ್ದಾರೆ. ತಾಯಿ ಶಶಿಕಲಾ ಆಚಾರ್ಯ ಅವರು ನೂರಾರು ಜನರಿಗೆ ಉಚಿತ ಹೆರಿಗೆ ಮಾಡಿಸಿ ಅಲ್ಲದೆ ಅನೇಕರ ಆರೋಗ್ಯದ ಸಮಸ್ಯೆಗಳಿಗೆ ತಮ್ಮ ಪರಂಪರೆಯಿಂದ ಬಂದ ನಾಟಿ ಔಷಧಿ ನೀಡುವ ಮೂಲಕ ಪರಿಹಾರ ಒದಗಿಸಿದ ಮಹಾತಾಯಿ.

ತನ್ನ ಒಡನಾಟದಲ್ಲಿ ಜೊತೆಯಾದವರು ಅವರಣ್ಣ ಗುರುಪ್ರಸಾದ್ ಅವರು ಸಹ ಸಜ್ಜನಿಕೆಯ ವ್ಯಕ್ತಿ. ಈ ರೀತಿಯ ಕುಟುಂಬದ ಹಿನ್ನೆಲೆಯ ಜೊತೆಗೆ ನಳಿನ, ಸುಧೀರ್ ಹಾಗೂ ಬ್ರಿಜೇಶ್ ಎಂಬ ಸಹೃದಯ ಸ್ನೇಹಿತರ ಬಳಗ ಆದಿತ್ಯರಿಗೆ ಒಳ್ಳೆಯ ಸಂಸ್ಕಾರ ತಂದು ಕೊಟ್ಟಿತ್ತು. ತನ್ನ ಹುಟ್ಟೂರಿನಲ್ಲಂತೂ ಪರೋಪಕಾರದ ಕೆಲಸಗಳಿಂದಲೇ ಹೆಸರುವಾಸಿಯಾಗಿದ್ದವರು. ಯಾರದೋ ಮನೆಯ ಹಿರಿಯರ ಆರೈಕೆ, ಗರ್ಭಿಣಿಯ ಪ್ರಸವಕ್ಕೆ ಆಸ್ಪತ್ರೆಗೆ ಕೊಂಡೊಯ್ಯಲು, ಮನೆ ಕಾವಲಿಗೆ ಹೀಗೆ ಹತ್ತು ಹಲವಾರು ಸಹಾಯದ ಕೆಲಸ ಮಾಡುತ್ತಲೇ ಊರ ತುಂಬಾ ಪ್ರಸಿದ್ಧಿಯಾದವರು.

90ರ ದಶಕದಲ್ಲಿ ಎಲ್ಲವೂ ದುಬಾರಿಯಾಗಿದ್ದ ಕಾಲವದು, ಅಂದರೆ ಕಂಪ್ಯೂಟರ್ ಕ್ಯಾಮೆರಾ ಇತ್ಯಾದಿಗಳು. ಅದು ದುಬಾರಿಯಾದರೂ ತಂದು ತಾನೇ ಕಲಿತು ಒಳ್ಳೆಯ ಛಾಯಾಗ್ರಾಹಕ ಹಾಗೂ ಡಿಸೈನರ್ ಆಗಿ ರೂಪಗೊಂಡರು. ಛಾಯಾಗ್ರಹಣದಲ್ಲಂತೂ ಏಕಲವ್ಯನ ಹಾಗೆ ಗುರುವಿಲ್ಲದೆ ಕಲಿತವರು. ಗುರು ದ್ರೋಣರ ಹಾಗೆ ಮಂಗಳೂರಿನ ಶ್ರೀ ಯಜ್ಞ ಆಚಾರ್ಯ ಅವರ ಚಿತ್ರಗಳನ್ನು ಮಾದರಿಯಾಗಿಟ್ಟು ಕೊಂಡವರು. ತಾನು ಓದಿದ್ದು ಡಿಪ್ಲೊಮಾ ಐಟಿಐ ಆದರೂ ಆಯ್ಕೆ ಮಾಡಿಕೊಂಡ ಕ್ಷೇತ್ರ ಛಾಯಾಗ್ರಹಣ. ಭಾವನೆಗಳನ್ನು ಸೆರೆ ಹಿಡಿಯುವ ಭಾವಾಭಿವ್ಯಂಜಕ ಚಿತ್ರ ತೆಗೆಯುವಲ್ಲಿ ಪಳಗಿದ ಅವರು ನಂತರದಲ್ಲಿ ವಿವಾಹವಾಗಿ ತನ್ನ ಹೆಂಡತಿಯ ಕೆರಿಯರ್’ಗಾಗಿ ಅಂದೇ ತನ್ನೂರನ್ನು ತ್ಯಜಿಸಿ ಬಂದು ಬದುಕು ಕಟ್ಟಿಕೊಂಡಿದ್ದು ಶಿವಮೊಗ್ಗದಲ್ಲಿ.ಆರಂಭದ ದಿನಗಳಲ್ಲಿ ಅನುಭವಿಸದ ತೊಂದರೆಗಳಿಲ್ಲ, ಪಡದ ಕಷ್ಟಗಳಿಲ್ಲ. ದಿನಗಳೆದಂತೆ ಊರು ಜನರು ಪರಿಚಿತರಾಗಿ ತನ್ನ ಶ್ರದ್ಧೆಯ ಕಾಯಕದಿಂದಲೇ ನಾವಿಕ ಪತ್ರಿಕೆಯ (ಆಗ ಚಂದ್ರಕಾಂತ ಅವರ ಸಾರಥ್ಯದಲ್ಲಿ ) ಜಾಹೀರಾತು ವಿಭಾಗದ ಡಿಸೈನರ್ ಕೆಲಸ ಗಿಟ್ಟಿಸಿಕೊಂಡರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ ಪದೋನ್ನತಿ ಹೊಂದಿ ಹೊಸದಿಗಂತ, ವಿಜಯವಾಣಿ ಅಜೇಯ ಪತ್ರಿಕೆಗಳಲ್ಲಿ ಲೇಔಟ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿ ನಂತರ ಬಂದು ಕುಳಿತದ್ದು ರಾಯಲ್ ಕಾಫಿ ಅಂಗಡಿಯಲ್ಲಿ. ಇವುಗಳನ್ನು ಹೇಳಲು ಕಾರಣವೇನೆಂದರೆ ಆ ಮನುಷ್ಯ ಯಾವ ವಯಸ್ಸಿನಲ್ಲಿ ಆಗಲೀ ಕಲಿಯುವುದರಲ್ಲಿ ಸದಾ ಮುಂದು. ಹೊಸತೇನಿದ್ದರೂ ಕಲಿಯುವ ಛಾತಿ ಇದ್ದಿದ್ದರಿಂದಲೇ ಸಂಸ್ಕೃತ ಡಿಟಿಪಿ ಕಲಿತು (ಪತ್ನಿಯ ಸಲುವಾಗಿ) ಒಳ್ಳೆಯ ಪುಸ್ತಕ ರಚನೆಕಾರರೂ ಆದರು.

ಅವರ ಕಾಯಕ ನಿಷ್ಠೆ ಹೇಗೆಂದರೆ ಯಾರಾದರೂ ಯಾವುದಾದರೂ ಕೆಲಸ ಹೇಳಿದರೆ ಶ್ರದ್ಧೆಯಿಂದ ಮಾಡುವವರು. ಮೆಲುದನಿ, ಮೃದು ಮಾತು, ಭಾವನೆಗಳನ್ನು ಸೆರೆ ಹಿಡಿಯುವ ಕ್ಯಾಂಡಿಡ್ ಫೋಟೋ ತೆಗೆಯುವುದರಲೇ ಮಾಸ್ಟರ್ ಅವರು. ಒಂದು ಕಾಲದಲ್ಲಿ ಇವರು ಫೋಟೋ ತೆಗೆದ ಕನ್ಯೆ ಅಥವಾ ವರನಿಗೆ ಬೇಗ ಮದುವೆ ಗೊತ್ತಾಗುತ್ತಿತ್ತಂತೆ!

ಇತ್ತೀಚಿನ ದಿನಗಳಲ್ಲಂತೂ ಅವರು ತೆಗೆದ ಫೋಟೋ ಅನೇಕರ ವಾಟ್ಸಾಪ್ ಡಿಪಿಗಳಲ್ಲಿ ರಾರಾಜಿಸುತ್ತಿದೆ. ಯಾರೇ ಆಗಲಿ ಎಷ್ಟು ಹೊತ್ತಿಗೆ ಆಗಿರಲಿ ಸಹಾಯ ಕೇಳಿದರೆ ಇಲ್ಲವೆನ್ನದ ವ್ಯಕ್ತಿ. ಪ್ರತಿಯೊಬ್ಬರಿಗಾಗಿಯೂ ಮರುಗುವ ಜೀವ. ಅನೇಕ ಅದ್ಭುತ ಸನ್ನಿವೇಶಗಳನ್ನು ಸೆರೆಹಿಡಿದ ಅವರು, ಬಹುಪಾಲು ಹಣ ತೆಗೆದುಕೊಳ್ಳದೇ ಫೋಟೋಗಳನ್ನು ಉಚಿತವಾಗಿ ನೀಡಿದ ಮಹಾನುಭಾವ.

ಬದುಕಿನ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದ ಮೂಲಕ ಸೆರೆಹಿಡಿದು ಅದನ್ನು ಶಾಶ್ವತವಾಗಿ ಉಳಿಸುವಂತೆ ಮಾಡುವಲ್ಲಿ ಆದಿತ್ಯ ಪ್ರಸಾದ್ ಅವರದು ಬಹುಪಾಲು ಕೊಡುಗೆ ಇರುತ್ತದೆ. ತಮ್ಮ ಬಳಿ ಕ್ಯಾಮರಾ ಇಲ್ಲದ ಸಮಯದಲ್ಲಿ ಎಲ್ಲರೂ ಡಿಜಿಟಲ್ ಕ್ಯಾಮೆರಾ ಬಳಸುತ್ತಿರುವಾಗ ಇವರು ಎಲ್ಲಿಂದಲೋ ಒಂದು ರೋಲ್ ಕ್ಯಾಮೆರಾ ತಂದು ಪತ್ನಿಯ ಎಂಎ ಪದವಿಯಲ್ಲಿ ರಾಂಕ್ ಪಡೆದ ಕ್ಷಣಗಳನ್ನು ಸೆರೆಹಿಡಿದದ್ದು ಎಂದೂ ಮರೆಯಲಾಗದ ಘಟನೆ. ಏಕೆಂದರೆ ಎಲ್ಲರೂ ಡಿಜಿಟಲ್ ಕ್ಯಾಮೆರಾ ಕೈಯಲ್ಲಿ ಹಿಡಿದಿದ್ದಾಗ ತಾವು ತೆಗೆಯುವ ಕ್ಷಣವೇ ಟಾಸ್ಕ್ ಆದಂತಿರುವ ಆ ಸಮಯದಲ್ಲಿ, ಅಂದರೆ ಚಿತ್ರ ಹೇಗೆ ಬಂದಿದೆ ಎಂದು ತಕ್ಷಣ ನೋಡಲು ಸಾಧ್ಯವಾಗದ್ದು ರೋಲ್ ಕ್ಯಾಮೆರಾ, ಅದು ವಾಶ್ ಆಗಿ ಬಂದಾಗಲೇ ಹೇಗಿದೆ ಎಂದು ತಿಳಿಯುವ ಹೊತ್ತಿನಲ್ಲೂ ಒಂದೇ ಕ್ಲಿಕ್’ನಲ್ಲಿ ಅದ್ಭುತ ಛಾಯಾಚಿತ್ರ ಸೆರೆ ಹಿಡಿದ ಹೆಗ್ಗಳಿಕೆ ಅವರದು. ಈ ಘಟನೆ ಅವರ ಛಾಯಾಗ್ರಹಣದಲ್ಲಿ ಪರ್ಫೆಕ್ಟ್’ನೆಸ್ ತೋರಿಸುತ್ತದೆ.ನನ್ನ ಗೆಳತಿ ಚೇತನಾ ಮಾಲತೇಶ್ ಹೇಳುವಂತೆ ಆದಿತ್ಯ ಅವರು ತೆಗೆದ ಫೋಟೋಗಳು ಆ ಕ್ಷಣಗಳನ್ನು ಹಸಿರಾಗಿಸುತ್ತವೆ, ಅದೊಂಥರಾ ಹೇಗೆಂದರೆ ತೆಗೆದ ಫೋಟೋ ಕೇವಲ ದೃಶ್ಯಗಳಾಗಿರದೆ ಹೃದಯದ ಕಥೆಗಳನ್ನು ಹೇಳುವಂತಿರುತ್ತದೆ. ಇಂತಹ ವ್ಯಕ್ತಿ ನಮ್ಮ ನಡುವೆ ಇರುವ ಸಜ್ಜನ.

ಚಾರಣಪ್ರಿಯ, ಕವಿ, ಸಹೃದಯಿ, ಲೇಖಕ, ಪ್ರವಾಸಗಳೆಂದರೆ ಸದಾ ಮುಂದಿರುವ ಆದಿತ್ಯ, ತನ್ನ ಬದುಕು ಕಟ್ಟಿಕೊಳ್ಳಬೇಕಾದರೆ ಎಲ್ಲ ಹೊತ್ತಿನಲ್ಲೂ ಎಲ್ಲದಕ್ಕೂ ತೆರೆದ ಮನಸ್ಸು ಮತ್ತು ಹೃದಯ. ಪತ್ನಿಗಾಗಿ ಸಂಸ್ಕೃತ ಕಲಿತರು, ಓದು… ಬರವಣಿಗೆಯನ್ನು ಕಲಿಸಿತು. ಹೀಗೆ ಯಾವುದೇ ಹೊಸತುಗಳಿಗೆ ಸದಾ ತನ್ನನ್ನು ತಾನು ಹರ್ಷದಿಂದಲೇ ತೆರೆದುಕೊಳ್ಳುವ ಸಜ್ಜನ. ಯಾರನ್ನು ದ್ವೇಷಿಸದ, ಯಾರಲ್ಲಿಯೂ ದ್ವೇಷ ಕಟ್ಟಿಕೊಳ್ಳದ ಅಜಾತಶತ್ರು.

ಎಲ್ಲರನ್ನೂ ಸೆಳೆಯುವ ಆಕರ್ಷಕ ವ್ಯಕ್ತಿತ್ವ. ತನ್ನ ಸಜ್ಜನಿಕೆಯಿಂದಲೇ ಎಲ್ಲರಿಗೂ ಪರಿಚಿತನಾದ ವ್ಯಕ್ತಿ. ಒಳ್ಳೆಯ ಡಿಸೈನರ್, ಉತ್ತಮ ಬರಹಗಾರ. ಉಡುಗೊರೆಯ ಸಲುವಾಗಿ ವಿಶಿಷ್ಟ ಮಾದರಿಯ ಕವನಗಳನ್ನು ಬರೆದು ಎಲ್ಲರ ಗಮನ ಸೆಳೆದವ.

ತಮ್ಮ ಚಾರಣದ ಅನುಭವಗಳನ್ನು ಬಹು ಸುಂದರವಾಗಿ ಕಥನಗಳಿಂದ ಚಿತ್ರಗಳಿಂದ ಕೂಡಿದ ಪುಸ್ತಕ ಮಾಡಿದವರು.(ಬಿಡುಗಡೆಗೆ ಇನ್ನೂ ಅವಕಾಶ ದೊರೆತಿಲ್ಲ) ನೋವಿಗೆ ಸ್ಪಂದಿಸುವ, ನಲಿವಿಗೆ ಜೊತೆ ಇರುವವ, ಕಷ್ಟದಲ್ಲಿ ಕೈ ಬಿಡದವ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಬೆರೆತು ಹೋದವ ಬೇರಾರು ಅಲ್ಲ ನನ್ನ ಪತಿದೇವ.

ನನ್ನ ಬದುಕಿನಲ್ಲಿ ಹೇಗೆ ತಂದೆಯ ಪಾತ್ರ ಬಹು ಹಿರಿದೋ ಹಾಗೆಯೇ ಮನೆಯವರದ್ದೂ ಸಹ. ನನ್ನ ಬದುಕಿನ ಯಶಸ್ಸಿನ ಹಿಂದೆ ಗಟ್ಟಿಯಾಗಿ ನೆಲೆ ನಿಂತವ, ನನ್ನೆಲ್ಲಾ ಲೇಖನಗಳ ಮೊದಲ ಓದುಗ. ಯಾರ ಬಳಿಯೂ ಯಾವ ಮಾತನ್ನು ಹೇಳಿಸಿಕೊಳ್ಳದ ವ್ಯಕ್ತಿ. ಅವರಿರುವ ರೀತಿಯೇ ಉಳಿದವರ ಬದುಕಿಗೊಂದು ಪ್ರೇರಣೆಯಾಗಬಹುದೇನೋ ಅನ್ನುವ ಕಾರಣದಿಂದಲೇ ಈ ಲೇಖನ ಬರೆದದ್ದು.

ಅವರ ಎಲ್ಲ ಕನಸುಗಳು ನನಸಾಗಲಿ ಇನ್ನಷ್ಟು ಜನರಿಗೆ ಸಂತಸವನ್ನು ಅವರ ಛಾಯಾಗ್ರಹಣದ ಮೂಲಕ ಹಂಚಿ ಎಂದು ಹೇಳುತ್ತಾ ಛಾಯಾಗ್ರಹಣದ ದಿನದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಾ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
                                               

Tags: Aditya PrasadCandid photoKannada NewsKannada News WebsiteKundapuraLatest News KannadaMythreyi PrasadPhotography DayShimogaShivamoggaಆದಿತ್ಯ ಪ್ರಸಾದ್ಕಂಪ್ಯೂಟರ್ಕುಂದಾಪುರಕ್ಯಾಂಡಿಡ್ ಫೋಟೋಕ್ಯಾಮೆರಾಛಾಯಾಗ್ರಾಹಕನಾಟಿ ಔಷಧಿಶಿವಮೊಗ್ಗಸುಭಾಷಿತ
Previous Post

ಶರಾವತಿ ನದಿ ಫುಲ್ | ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ | ಎಷ್ಟು ಹೊರ ಹರಿವು?

Next Post

ಧರ್ಮಸ್ಥಳ ರಕ್ಷಣೆಗಾಗಿ ಸಿಡಿದೆದ್ದ ತೀರ್ಥಹಳ್ಳಿ | ಪಟ್ಟಣದಲ್ಲಿ ಭಕ್ತರಿಂದ ಬೃಹತ್ ಪ್ರತಿಭಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಧರ್ಮಸ್ಥಳ ರಕ್ಷಣೆಗಾಗಿ ಸಿಡಿದೆದ್ದ ತೀರ್ಥಹಳ್ಳಿ | ಪಟ್ಟಣದಲ್ಲಿ ಭಕ್ತರಿಂದ ಬೃಹತ್ ಪ್ರತಿಭಟನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ಗಣೇಶ ವಿಸರ್ಜನೆಗೆ ಹೋಗಿದ್ದ ಯುವಕ ಆನೆ ಟ್ರಂಚ್’ನಲ್ಲಿ ಶವವಾಗಿ ಪತ್ತೆ!

August 30, 2025

ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಲಾಭ ಪಡೆಯಿರಿ: ಡಿಸಿ ಗುರುದತ್ತ ಹೆಗಡೆ ಕರೆ

August 30, 2025

ಸಿಕಂದರಾಬಾದ್-ಮೈಸೂರು-ಸಿಕಂದರಾಬಾದ್ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

August 30, 2025

ಮೌಲ್ಯಾಧಾರಿತ ಶಿಕ್ಷಣದಿಂದ ಮಕ್ಕಳು ದೇಶದ ಆಸ್ತಿಯಾಗಲು ಸಾಧ್ಯ: ಶಾಸಕ ಚನ್ನಬಸಪ್ಪ

August 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ಗಣೇಶ ವಿಸರ್ಜನೆಗೆ ಹೋಗಿದ್ದ ಯುವಕ ಆನೆ ಟ್ರಂಚ್’ನಲ್ಲಿ ಶವವಾಗಿ ಪತ್ತೆ!

August 30, 2025

ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಲಾಭ ಪಡೆಯಿರಿ: ಡಿಸಿ ಗುರುದತ್ತ ಹೆಗಡೆ ಕರೆ

August 30, 2025

ಸಿಕಂದರಾಬಾದ್-ಮೈಸೂರು-ಸಿಕಂದರಾಬಾದ್ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

August 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!