No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
  • Advertise With Us
  • Grievances
  • About Us
  • Contact Us
Saturday, August 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-11: ನೆಮ್ಮದಿ ಭಗ್ನಗೊಳಿಸಿದ ನಗ್ನಚಿತ್ರ-1

kalpa News by kalpa News
February 6, 2018
in ದಕ್ಷ
0
Share on FacebookShare on TwitterShare on WhatsApp

1990
ನಾನಾಗ ಕಬ್ಬನ್ ಪಾರ್ಕ್ ಠಾಣೆಯ ಎಸ್‍ಐ ತುರ್ತು ವೈರ್‍ಲೆಸ್ ಕರೆಗೆ ಓಗೊಟ್ಟು ಕಮಿಷನರ್ ಕಚೇರಿಗೆ ದೌಡಾಯಿಸಿದೆ. ಅಂದಿನ ಪೊಲೀಸ್ ಕಮಿಷನರ್ ಆರ್. ರಾಮಲಿಂಗಂ ಅವರ ಎದುರು ಎಸಿಪಿ, ಇನ್ಸ್‍ಪೆಕ್ಟರ್ ಮತ್ತು ಎಸ್‍ಐವೊಬ್ಬರು ಕೈಕಟ್ಟಿಕೊಂಡು ತಲೆಬಗ್ಗಿಸಿ ನಿಂತಿದ್ದರು. ಅವರನ್ನು ಕಮಿಷನರ್ ಏಕ್ಕಾಮಕ್ಕ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರು. ನಾನು ಚೇಂಬರ್‍ನೊಳಗೆ ಕಾಲಿಡುತ್ತಲೇ ಫೈಲ್‍ವೊಂದನ್ನು ನನ್ನ ಕೈಗೆ ಕೊಟ್ಟು `ಮಿ. ಅಶೋಕ್ ಕುಮಾರ್, ಐದು ದಿನದೊಳಗೆ ನೀವು ಈ ಪ್ರಕರಣ ಭೇದಿಸಬೇಕು.’ ಎಂದು ಆರ್ಡರ್ ಮಾಡಿದರು.

ಕುತೂಹಲದಿಂದ ಆ ಫೈಲ್ ಓಪನ್ ಮಾಡಿದೆ. ಮೊದಲ ಪುಟದಲ್ಲೇ ಸ್ಫುರದ್ರೂಪಿ ತರುಣನೊಬ್ಬನ ನಗ್ನಚಿತ್ರಗಳು ರಾರಾಜಿಸುತ್ತಿದ್ದವು. ಒಂದು ಫೋಟೋದಲ್ಲಂತೂ ತನ್ನ ಗುಪ್ತಾಂಗವನ್ನು ಹಿಡಿದುಕೊಂಡು ಆ ಯುವಕ ಉನ್ಮಾದ ಸ್ಥಿತಿಯಲ್ಲಿದ್ದ. ಇದೆಂಥಾ ಕೇಸಪ್ಪ ಎಂದು ಬೆರಗಿನಿಂದ ಆ ಫೋಟೋಗಳನ್ನೇ ದಿಟ್ಟಿಸುತ್ತ ನಿಂತಿದ್ದೆ. ಆಗ ಕಮಿಷನರ್ ` ಫೋಟೋ ನೋಡಿದ್ದು ಸಾಕು. ಈಗ ತನಿಖೆ ಶುರು ಮಾಡಿ.’ ಎಂದು ವ್ಯಂಗ್ಯದ ದನಿಯಲ್ಲಿ ಹೇಳುತ್ತ ಅಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ `ನೀವೆಲ್ಲ ಯೂಸ್‍ಲೆಸ್. ಈಗ ನೋಡಿ ಅಶೋಕ್‍ಕುಮಾರ್ ಈ ಕೇಸನ್ನು ಹೇಗೆ ಹ್ಯಾಂಡಲ್ ಮಾಡ್ತಾರೆ ಅಂತ,’ ಎಂದರು.

ನಾನು ಆ ಫೈಲ್ ಹಿಡಿದು ಹೊರಬಂದೆ. ನನ್ನ ಹಿಂದೆ ಹೊರಬಂದ ಇನ್ಸ್‍ಪೆಕ್ಟರ್ ನನ್ನ ಬಳಿ ಬಂದು `ಏನು ಅಶೋಕ್ ಐದೇ ದಿನದಲ್ಲಿ ಈ ಕೇಸ್ ಟ್ರೇಸ್ ಮಾಡಿ ಬಿಡ್ತೀರಾ?’ ಎಂದು ಗೇಲಿ ಮಾಡಿದರು. ನಾನು ತಾಳ್ಮೆಯಿಂದ `ನೋಡೋಣ ಸರ್. ಮೊದಲು ಫೈಲ್ ಸ್ಟಡಿ ಮಾಡ್ತೀನಿ’ ಎಂದೆ. ನನ್ನ 35 ವರ್ಷಗಳ ಸರ್ವೀಸ್‍ನಲ್ಲಿ ಸಾಕಷ್ಟು ಬಾರಿ ಸಹೋದ್ಯೋಗಿಗಳ ಅಸೂಯೆ ಎದುರಿಸಿದ್ದೇನೆ. ಟೀಕೆಗಳಿಗೆ ಸಚಿನ್ ತೆಂಡೂಲ್ಕರ್ ಹೇಗೆ ಬ್ಯಾಟ್‍ನಿಂದ ಉತ್ತರ ಕೊಡುತ್ತಿದ್ದರೋ ನಾನು ಹಾಗೆಯೇ ಕೇಸ್ ಪತ್ತೆ ಮಾಡುವ ಮೂಲಕ ಉತ್ತರಿಸುತ್ತ ಬಂದಿದ್ದೆ.

ಬಸವೇಶ್ವರ ವೃತ್ತದ ಬಹುಮಹಡಿ ಕಟ್ಟಡದಲ್ಲಿ ಪ್ರಸಿದ್ಧ ಚೈನೀಸ್ ರೆಸ್ಟೋರೆಂಟ್ ಇತ್ತು. ಅಲ್ಲಿ 24 ವರ್ಷದ ಅಜಯ್ ಸಿಂಗ್ ಎಂಬ ಷೆಪ್ (ಬಾಣಸಿಗ) ಇದ್ದ. ಆತನ ತಂದೆ ದಿಲ್ಲಿಯ ಖ್ಯಾತ ಪಂಚತಾರಾ ಹೋಟೆಲೊಂದರಲ್ಲಿ ಮುಖ್ಯ ಷೆಫ್ ಆಗಿದ್ದ. ಆತ ಎಷ್ಟು ಬೇಡಿಕೆಯ ವ್ಯಕ್ತಿಯೆಂದರೆ ಇಂದಿರಾ ಗಾಂಧಿ ಕುಟುಂಬ. ರಾಷ್ಟ್ರಪತಿ ಕುಟುಂಬಗಳಿಗೂ ಬೇಕಾದವನಾಗಿದ್ದ. ತನ್ನ ಮಗ ಅಜಯ್‍ಗೆ ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಓದಿಸಿ ತರಬೇತಿಗಾಗಿ ಬೆಂಗಳೂರಿನ ರೆಸ್ಟೋರೆಂಟ್‍ಗೆ ಸೇರಿಸಿದ್ದ.

ಈ ನಡುವೆ, ಅಜಯ್ ವಾಸಿಸುತ್ತಿದ್ದ ಮನೆಯ ಎದುರು ಸುಮಾರು 45 ವರ್ಷದ ಮಹಿಳೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಹಿರಿಯವಳು ಬಿಕಾಂ ಫೈನಲ್, ಕಿರಿಯವಳು ಪಿಯುಸಿ ಓದುತ್ತಿದ್ದಳು. ಇಬ್ಬರೂ ಸುರಸುಂದರಿಯರಾಗಿದ್ದರು. ಆಕೆ ಬ್ಯಾಂಕೊಂದರ ಮ್ಯಾನೇಜರ್ ಆಗಿದ್ದಳು. ಗಂಡ ಸೌದಿಯಲ್ಲಿದ್ದ. ಹೀಗಿರುತ್ತ, ಹಿರಿಯ ಮಗಳಿಗೂ ಅಜಯ್‍ಗೂ ಲವ್ ಉಂಟಾಯಿತು. ಇದು ಎರಡೂ ಕುಟುಂಬಗಳಿಗೆ ಗೊತ್ತಾಗಿ ಎಂಗೇಜ್‍ಮೆಂಟ್ ದಿನ ನಿಗದಿ ಮಾಡಿದರು. ಇನ್ನೇನು ನಿಶ್ಚಿತಾರ್ಥಕ್ಕೆ ಕ್ಷಣಗಣನೆ ನಡೆಯುತ್ತಿದ್ದಾಗ ಆಘಾತಕಾರಿ ಘಟನೆಯೊಂದು ನಡೆದು ಹೋಯಿತು.

ಆ ದಿನ ಅಜಯ್ ಯಥಾಪ್ರಕಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ಗೆ ಹೋಗಿದ್ದ. ಕೌಂಟರ್ ಬಳಿ ಇದ್ದ ನೋಟಿಸ್ ಬೋರ್ಡ್ ನೋಡಲು ಯುವಕ, ಯುವತಿಯರು ಮುಗಿಬಿದ್ದಿದ್ದರು. ಇದೇನಿದು ಎಂದು ಅಜಯ್ ಅವರ ನಡುವೆ ದಾರಿ ಮಾಡಿಕೊಂಡು ಬೋರ್ಡ್ ನೋಡಿದಾಗ ಮೂರ್ಛೆ ಹೋಗುವುದೊಂದು ಬಾಕಿ. ಆತನ ನಾನಾ ಭಂಗಿಯ ನಗ್ನಾವತಾರದ ಚಿತ್ರಗಳನ್ನು ಅಂಟಿಸಲಾಗಿತ್ತು! ನಾಚಿಕೆಯಿಂದ ಮನೆಗೆ ವಾಪಸ್ ಬಂದವನು ಕೆಲವು ದಿನ ಕೆಲಸಕ್ಕೆ ಹೋಗದೆ ತಲೆಮರೆಸಿಕೊಂಡ.

ಇದರ ಬೆನ್ನಿಗೇ, ಆತ ಪ್ರೀತಿಸುತ್ತಿದ್ದ ಹುಡುಗಿ ಓದುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲರಿಗೆ ಒಂದು ಲಕೋಟೆ ತಲುಪಿತು. ಅವರು ನನ್ ಆಗಿದ್ದರು. ಲಕೋಟೆ ಬಿಚ್ಚಿ ನೋಡಿದಾಗ ಅಜಯ್‍ನ ಬೆತ್ತಲೆ ಚಿತ್ರಗಳು ಅವರನ್ನು ಬೆಚ್ಚಿ ಬೀಳಿಸಿತು. ಸಾಲದೆಂಬಂತೆ ಒಂದು ಪತ್ರವನ್ನೂ ಟೈಪ್ ಮಾಡಿ ಇಡಲಾಗಿತ್ತು. `ನಿನಗಷ್ಟೇ ಅಲ್ಲ. ನಿನ್ನ ಅಮ್ಮನಿಗೂ ಪ್ರೀತಿ ಕೊಡಲು ನಾನು ಸಮರ್ಥ ಎನ್ನುವುದಕ್ಕೆ ಈ ಚಿತ್ರಗಳೇ ಸಾಕ್ಷಿ’ ಎಂದು ತಾನು ಮದುವೆಯಾಗಲಿರುವ ಹುಡುಗಿಗೆ ಹೇಳುವ ಧಾಟಿಯಲ್ಲಿ ಆ ಪತ್ರ ಇತ್ತು. ಇನ್ನೊಂದು ಲಕೋಟೆ ಆ ಹುಡುಗಿಯ ತಾಯಿ ಕೆಲಸ ಮಾಡುವ ಬ್ಯಾಂಕ್‍ನ ಅಸಿಸ್ಟೆಂಟ್ ಮ್ಯಾನೇಜರ್ ಹೆಸರಿಗೆ ಕಳಿಸಲಾಗಿತ್ತು. ಅದರಲ್ಲಿ ನಗ್ನ ಚಿತ್ರಗಳ ಜತೆಗೆ, ಆ ಹುಡುಗಿಯ ತಾಯಿ ಜತೆ ಸರಸವಾಡುವ ಬಯಕೆ ಉಂಟಾಗಿದೆ ಎಂಬ ಒಕ್ಕಣೆಯ ಪತ್ರ ಬರೆಯಲಾಗಿತ್ತು. ಆ ಕುಟುಂಬದ ಮಾನಹಾನಿ ಮಾಡಲೆಂದೇ ದುಷ್ಕರ್ಮಿ ಇತರರ ವಿಳಾಸಕ್ಕೆ ಲಕೋಟೆ ಕಳಿಸಿದ್ದ. ಇಷ್ಟೇ ಅಲ್ಲ, ಆ ಮಹಿಳೆಯ ಮನೆಯ ದೂರವಾಣಿ ಸಂಖ್ಯೆಯನ್ನು ನಗರದ ಎಲ್ಲ ಪ್ರಮುಖ ಪಬ್‍ಗಳ ಶೌಚಾಲಯಗಳ ಗೋಡೆಯ ಮೇಲೆ ಗೀಚಿ, ಸುಂದರ ಯುವತಿಯರಿಗಾಗಿ ಸಂಪರ್ಕಿಸಿ ಎಂದು ಬರೆಯಲಾಗಿತ್ತು.

ನಿಮ್ಮ ಮನೆಯಲ್ಲಿ ವೇಶ್ಯೆಯರು ಸಿಕ್ತಾರಂತೆ ಹೌದಾ? ಗಂಟೆಗೆ ಎಷ್ಟು ಚಾರ್ಜ್ ಮಾಡ್ತಾರೆ? ಮನೆಯ ವಿಳಾಸ ಕೊಡ್ತೀರಾ? ಎಂದೆಲ್ಲ ಆ ಮನೆಗೆ ಫೋನ್ಗಳ ಸುರಿಮಳೆ ಬರಲಾರಂಭಿಸಿದವು. ಇದರಿಂದ ಬೇಸತ್ತ ಅವರು ಫೋನ್ ರಿಸೀವರ್ ಎತ್ತಿಡಬೇಕಾಯಿತು. ಗಂಡ ಸೌದಿಯಿಂದ ಫೋನ್ ಮಾಡಬಹುದು ಎಂದು ಹತ್ತು ನಿಮಿಷ ರಿಸೀವರ್ ಸುಸ್ಥಿತಿಯಲ್ಲಿಟ್ಟರೆ ಸಾಕು, ಪಡ್ಡೆಗಳ ಪೋಲಿ ಕರೆಗಳು ಕಂಗೆಡಿಸುತ್ತಿದ್ದವು. ಕೊನೆಗೆ ಅವರು ಶಾಶ್ವತವಾಗಿ ಫೋನ್ ಕಟ್ ಮಾಡಿಬಿಟ್ಟರು. ಮನೆಗೆ ಫೋನ್ ಮಾಡಿ ಸುಸ್ತಾದ ಗಂಡ ಗಾಬರಿಯಿಂದ ವಿದೇಶದಿಂದ ಧಾವಿಸಿ ಬರಬೇಕಾಯಿತು!

(ಮುಂದುವರೆಯುವುದು)

Tags: Bangalore PoliceBullet SavariTiger BB Ashok Kumar
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತರ ಕೊರಿಯಾ ಎಂಬ ನರಕ-23: ಮಿಲಿಟರಿ-2

Next Post

ಬುಲೆಟ್ ಸವಾರಿ-11: ನೆಮ್ಮದಿ ಭಗ್ನಗೊಳಿಸಿದ ನಗ್ನಚಿತ್ರ-2

kalpa News

kalpa News

Next Post

ಬುಲೆಟ್ ಸವಾರಿ-11: ನೆಮ್ಮದಿ ಭಗ್ನಗೊಳಿಸಿದ ನಗ್ನಚಿತ್ರ-2

Leave a Reply Cancel reply

Your email address will not be published. Required fields are marked *

No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL