ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಟ ವಿಜಯ ರಾಘವೇಂದ್ರ ಅವರ ಕಾರಿಗೆ ಪೆಟ್ರೋಲ್ ಬದಲಾಗಿ ಡೀಸೆಲ್ ತುಂಬಿಸಿರುವ ಘಟನೆ ನಗರದ ಬಂಕ್ ಒಂದರಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಎರಡು ದಿನಗಳಿಂದ ಭೇಟಿ ನೀಡಿದ್ದ ವಿಜಯ ರಾಘವೇಂದ್ರ ಹಾಗೂ ಕುಟುಂಬಸ್ಥರು ಇಂದು ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಸಾಗರ ರಸ್ತೆಯ ಬಂಕ್’ವೊಂದರಲ್ಲಿ ಪೆಟ್ರೋಲ್ ಹಾಕಿಸಲು ನಿಲ್ಲಿಸಿದ್ದಾರೆ. ಆದರೆ, ನಟನನ್ನು ನೋಡಿದ ಸಂತೋಷದಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವ ಬದಲಾಗಿ ಡೀಸೆಲ್ ತುಂಬಿಸಿದ್ದಾರೆ.
ಇದನ್ನು ಅರಿತು ತತಕ್ಷಣವೇ ಎಚ್ಚೆತ್ತ ಬಂದ್ ಮುಖ್ಯಸ್ಥರು ವಿಜಯ ರಾಘವೇಂದ್ರ ಅವರ ಕ್ಷಮೆ ಕೇಳಿದ್ದಾರೆ.
ಆನಂತರ ಕಾರನ್ನು ಸರ್ವೀಸ್ ಸೆಂಟರ್’ಗೆ ಕಾರು ಕಳುಹಿಸಿ, ಬದಲ ಕಾರಿನಲ್ಲಿ ವಿಜಯ ರಾಘವೇಂದ್ರ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
Get In Touch With Us info@kalpa.news Whatsapp: 9481252093
Discussion about this post