No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಬೈಂದೂರು: ನಿರ್ಮಾಣವಾದರೂ ಸಂಚಾರ ಯೋಗ್ಯವಾಗಿಲ್ಲ ಕಿರಿಮಂಜೇಶ್ವರ ಫ್ಲೈಓವರ್

ಅಭಿವೃದ್ಧಿ ಎಂಬ ಅವ್ಯವಸ್ಥೆಯ ಕೈಗನ್ನಡಿ

kalpa News by kalpa News
June 12, 2019
in ಉಡುಪಿ
0
ಬೈಂದೂರು: ನಿರ್ಮಾಣವಾದರೂ ಸಂಚಾರ ಯೋಗ್ಯವಾಗಿಲ್ಲ ಕಿರಿಮಂಜೇಶ್ವರ ಫ್ಲೈಓವರ್
Share on FacebookShare on TwitterShare on WhatsApp

ಅಭಿವೃದ್ಧಿ ಎಂಬ ಭೂತ ಎಲ್ಲರ ಮಾನಸಿಕತೆಯಲ್ಲೂ ಸೇರಿಕೊಂಡಿದೆ. ನಾಗರಿಕರನ್ನಾಳುವ ನಾಯಕರು ಕೂಡ ಓಟಿಗಾಗಿಯೋ ಅಥವಾ ನಾನಿದನ್ನು ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕಾಗಿಯೋ ಒಂದೆರಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿ ಗರ್ವದಿಂದ ಸಾಯುವವರೆಗೂ ಜಂಬಕೊಚ್ಚಿಕೊಳ್ಳುವದು ರೂಢಿಯಿಂದ ಬಂದಿರುವಂತಹದ್ದು. ಆದರೆ ದುರ್ದೈವ ಅದರಿಂದ ಜನರಿಗೆ ಎಷ್ಟು ಲಾಭದಾಯಕ ಎಂಬ ಅರಿವು ಸೋಕಾಲ್ಡ್‌ ನಾಯಕರಿಗಿಲ್ಲ. ಇಂತಹ ತೋರ್ಪಡಿಕೆಯ ಅಥವಾ ಬೇಕಾಬಿಟ್ಟಿ ಮಾಡುವ ’ಅಭಿವೃದ್ಧಿ’ಯಿಂದಾಗಿ ಜನರಿಗೆ ಉಪಯೋಗ ಆಗುವುದಕ್ಕಿಂತ ತೊಂದರೆ ನೀಡುತ್ತಿರುವುದೇ ಹೆಚ್ಚು.

ಇದಕ್ಕೆ ಉದಾಹರಣೆಗಳೂ ಹಲವಾರಿದೆ. ರಸ್ತೆಗಳ ನಿರ್ಮಾಣಕ್ಕಾಗಿ ರಸ್ತೆಗಳನ್ನು ನಿರ್ಮಿಸುತ್ತಾರೆ. ಅದರ ನಿರ್ಮಾಣಕ್ಕಾಗಿ ಮೊದಲಿದ್ದ ರಸ್ತೆ ಬದಿಯ ಮರಗಳ ನಿರ್ನಾಮ ಮಾಡುತ್ತಾರೆ, ರಸ್ತೆಗಳಿಗೆ ಡಾಂಬರೀಕರಣ ಮಾಡುತ್ತಾರೆ, ಮಳೆಗಾಲಕ್ಕಾಗುವಾಗ, ಗುಂಡಿ ಮುಚ್ಚಿದ್ದ ಡಾಂಬರ್’ಗಳು, ಹಪ್ಪಳದಂತೆ ತೇಲುತ್ತಿರುತ್ತವೆ, ನೋಡುವುದಕ್ಕೆ ನೈಸಾದ ರಸ್ತೆಗಳನ್ನು ನಿರ್ಮಿಸುತ್ತಾರೆ, ಮತ್ತೆ ವ್ಯವಸ್ಥೆಯ ಲೋಪದಿಂದಾಗಿ ಹತ್ತಾರು ಬಾರಿ ಅದೇ ರಸ್ತೆಯಲ್ಲಿ ಗುಂಡಿ ತೆಗೆಯುತ್ತಾರೆ…. ಇದು ನಮ್ಮ ಸೋಕಾಲ್ಡ್‌ ಅಭಿವೃದ್ಧಿ.


ಇಂತಹ ಅಭಿವೃದ್ಧಿಗಳಿಗೆ ಸಾಕ್ಷಿ, ಬೈಂದೂರು ಸಮೀಪದ ಕಿರಿಮಂಜೇಶ್ವರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಫ್ಲೈಓವರ್. ಈ ಫ್ಲೈ ಓವರ್ ಅಭಿವೃದ್ಧಿಯ ಸಂಕೇತಕ್ಕಿಂತ, ಅವ್ಯವಸ್ಥೆಯ ಉತ್ತಮ ಉದಾಹರಣೆಯಾಗಿ ಮೂಡಿಬಂದಿದೆ. ಈ ಫ್ಲೈ ಓವರ್ ನಿರ್ಮಾಣಗೊಂಡು ಹಲವು ತಿಂಗಳುಗಳಾದರೂ, ಇದರ ಅಂಡರ್ ಪಾಸ್ ಮಾತ್ರ ಇನ್ನೂ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಇದರ ಅಡ್ಡಪರಿಣಾಮಗಳು ಏನೇನೆಲ್ಲ ಎಂದು ಪಟ್ಟಿ ಮಾಡಿದರೆ…

1. ನಿರ್ಮಾಣಕ್ಕೆ ಬಳಸಿದ ವಸ್ತುಗಳನ್ನೂ ಸೇರಿದಂತೆ ಇನ್ನೂ ಅನೇಕ ವಸ್ತುಗಳಿಂದ ಕೂಡಿರುವ ಈ ಅಂಡರ್ ಪಾಸ್ ಶುಚಿತ್ವವನ್ನು ಕಾಪಾಡಿಕೊಂಡಿಲ್ಲ. ಅಲ್ಲಿ ಸಂಚರಿಸಲು ಯೋಗ್ಯವೂ ಅಲ್ಲದಂತಾಗಿದೆ.
2. ಇದರ ನಿರ್ಮಾಣ ಹೇಗಿದೆ ಎಂದರೆ ಮಳೆಗಾಲದಲ್ಲಿ ಅಂಡರ್ ಪಾಸ್’ನಲ್ಲಿ ನೀರು ಪಾಸಾಗುವುದೇ ಕಷ್ಟಕರ ಸಂಗತಿ.
3. ಅಂಡರ್ ಪಾಸ್ ಪರಿಣಾಮ: ಅಲ್ಲೇ ಇರುವ ಗ್ರಾಮದ ಪ್ರಾಥಮಿಕ ಶಾಲೆಗೆ ಸುಲಭವಾಗಿ ಸಂಪರ್ಕಿಸುವ ಮಾರ್ಗ ಇದೊಂದೆ ಆದ್ದರಿಂದ ಶಾಲೆಗೆ ಹೋಗುವ ಹಲವು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮಹಿಳೆಯರು, ವೃದ್ಧರು,ಇನ್ನುಳಿದ ಸಾರ್ವಜನಿಕರನ್ನೂ ಓಳಗೊಂಡು ಅವರ ಸಂಚಾರಕ್ಕೆ ಅನರ್ಹವಾದ ಅಂಡರ್ ಪಾಸ್ ಇದು.
4. ಇದೇ ಅಂಡರ್ ಪಾಸ್ ಮೇಲ್ಭಾಗದಲ್ಲಿ ಕಾಮಗಾರಿ ಅಪೂರ್ಣವಾಗಿರುವುದರಿಂದ ಅಪಘಾತದ ಪರಿಣಾಮವನ್ನು ಉಲ್ಭಣಗೊಳಿಸುವುದು ನಿಶ್ಚಿತ.
5. ಈ ಫ್ಲೈಓವರ್ ಕೆಳಬದಿಯಲ್ಲಿ ಸರಿಯಾದ ಫಿನಿಶಿಂಗ್ ಕೊಡದ ಕಾರಣ ಈ ಸ್ಥಳ ಕಸದ ತೊಟ್ಟಿಗಳಾಗಿ ಮಾರ್ಪಾಡಾಗಿದೆ.

ಒಟ್ಟಿನಲ್ಲಿ ಈ ಫ್ಲೈಓವರ್ ಸುಶಿಕ್ಷಿತ ಎಂದು ಕರೆಯಲ್ಪಡುವ ಇಂಜಿನಿಯರ್’ಗಳ ಯೋಜನಾಬದ್ಧ ವೈಫಲ್ಯವನ್ನು ಸೂಚಿಸುತ್ತದೆ. ಗ್ರಾಮಸ್ಥರ ಮಾತಿನಲ್ಲೇ ಹೇಳುವುದಾದರೆ ಈ ಅಂಡರ್ ಪಾಸ್ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಮೂತ್ರಮಾಡಲು ಇನ್ನಷ್ಟು ಪ್ರೈವೆಸಿಗೆ ನಿರ್ಮಿಸಿದಂತಾಗಿದೆ.

ಇನ್ನು ಬರುವುದು ಮಳೆಗಾಲವಾದ್ದರಿಂದ ಈ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂಬುದು ಪ್ರಜೆಗಳ ಆದೇಶ(ಪ್ರಜಾಪ್ರಭುತ್ವ ಅಲ್ಲವೇ!).

ವಿಶೇಷ ವರದಿ: ಅರುಣ್ ಕಿರಿಮಂಜೇಶ್ವರ

Tags: byndoorcoastal newsFlyoverKannada NewsKirimangeshwaraUdupiಅಂಡರ್ ಪಾಸ್’ಕಿರಿಮಂಜೇಶ್ವರಫ್ಲೈಓವರ್ಬೈಂದೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

‘ಸಾರಂಗಿ’ ಎಂಬ ಸರಳತೆಯ ಸಾಮ್ರಾಟ ದೇಶದ ಹೆಮ್ಮೆ

Next Post

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

kalpa News

kalpa News

Next Post
ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL