ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ತಾಲೂಕು ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿದ್ದು, ಇಲ್ಲಿ ಮನೆ ಕಟ್ಟುವಲ್ಲಿ ಸರ್ಕಾರದ ಅನುದಾನ ಬಯಸುವ ಆರ್ಥಿಕ ಅಶಕ್ತ ಕುಟುಂಬಗಳು ಅನೇಕರಿದ್ದು, ಬೈಂದೂರು ಭಾಗಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪುರ ಮತ್ತು ಬೈಂದೂರು ಪ್ರತ್ಯೇಕ ಪಂಚಾಯತ್ ರಾಜ್ ಉಪವಿಭಾಗ ತೆರೆಯುವಂತೆಯೂ ಅಧಿವೇಶನದಲ್ಲಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರ ಬಳಿ ವಿನಂತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post