ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾಹನ ಸಂಚಾರಿ ನಿಯಮ ಮಾದಕ ದ್ರವ್ಯಗಳ ಜಾಗೃತಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಹಾನಿ ಮತ್ತು ಅವರ ವಿದ್ಯಾರ್ಥಿ ಜೀವನಕ್ಕೆ ಆಗುವ ನಷ್ಟದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ (ತೆರೆದ ಮನೆ)ವನ್ನು (Shivamogga) ದೊಡ್ಡಪೇಟೆ ಠಾಣಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿಗಳು ಮದ್ಯಪಾನ, ಗಾಂಜಾ ಸೇವನೆ, ಗುಟ್ಕಾ ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ವಿವರಿಸಿದರು.

Shivamogga | ಗಾಂಜದಿಂದ ಜೀವನ ನಾಶ
ಒಂದು ಬಾರಿ ಗಾಂಜಾ ಸೇವನೆ ದೃಢಪಟ್ಟರೆ ಆತನ ವಿದ್ಯಾರ್ಥಿ ಜೀವನವೇ ನಾಶವಾಗುತ್ತದೆ. ಮುಂದಿನ ಜೀವನಕ್ಕೆ ಕಪ್ಪುಚುಕ್ಕೆಯಾಗುತ್ತದೆ. ಪೋಷಕರಿಗೆ ಮತ್ತು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದರು.
Also read: The Odyssey Premiere | ಚಿತ್ರತಂಡದೊಂದಿಗೆ ಭಾರತಕ್ಕೆ ಬಂದ ಕ್ರಿಸ್ಟೋಫರ್ ನೋಲನ್!
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.
ಅಪರಾಧಿಗಳ ಬಗ್ಗೆ ಮತ್ತು ಅಪರಾಧ ನಿಯಂತ್ರಣದ ಬಗ್ಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಬಳಸುವ ವಿವಿಧ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಶೀಲವಂತ ಹೊಸ್ಮನಿ, ದೊಡ್ಡಪೇಟೆ ಠಾಣಾ ಇನ್ಸ್‍ಪೆಕ್ಟರ್ ಸತ್ಯನಾರಾಯಣ್, ಇನ್ನಿತರ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









