No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Monday, July 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಇನ್ನು ಹದಿನೈದು ದಿನಗಳು ಮನೆಗೆ ಹೋಗಲಾಗದು

kalpa News by kalpa News
July 17, 2020
in Small Bytes, Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಉಡುಪಿ ಜಿಲ್ಲೆಯ ಗಡಿ ಭಾಗಗಳನ್ನೆಲ್ಲ ಬಂದ್ ಮಾಡಲಾಗುತ್ತೆ ಅನ್ನೋ ಸುದ್ದಿ ಬಂದಾಗಿನಿಂದ ಬಿಡದೆ ಕಾಡುತ್ತಿದೆ ಮಳೆಗಾಲದ ಸ್ವರ್ಗ ನನ್ನೂರು, ಮನೆಯವರು ಸ್ನೇಹಿತರು, ಹಸಿರ ಹೊದ್ದು ಮಲಗಿರುವ ನನ್ನ ಮನೆ, ತೋಟ, ಕಾಡು, ತೋಡು, ಕೆರೆ, ಹೊಳೆ, ಊರಿಗೆ ಹೋದಾಗೆಲ್ಲ ನಾ ಓಡೋಡಿ ಹೋಗೋದೇ ನೀರಿನ ಒರತೆ ಇರುವೆಡೆಗೆ, ಮನೆಯ ಎದುರಿನ ಅಡಿಕೆ ತೋಟದ ಒಳಗೆ ಹೋದರೆ ಸಾಕು, ಗುಡ್ಡ ಬೆಟ್ಟಗಳಿಂದ ಹರಿದು ಬರುವ ತೋಡಿನ ನೀರು ಅದರಲ್ಲಿ ಒಮ್ಮೆ ಕಾಲು ಇಳಿಸಿ ಕೂತರೆ ಸಾಕು, ಹೇಳಲಾಗದ ಅಪರಿಮಿತ ಆನಂದ, ಅಲ್ಲಿಂದ ಮುಂದೆ ಸಾಗಿದರೆ ತೋಟಕ್ಕೆ ತಾಗಿ ಕೊಂಡಿರುವ ಕಾಡು ಅದ್ರಲ್ಲಿರುವ ಪುಟ್ಟ ಕೆರೆ ತನ್ನೊಡಲ ಒಳಗೆ ಸಾವಿರ ಬಾಲ್ಯದ ನೆನಪುಗಳ ಅಡಗಿಸಿಟ್ಟುಕೊಂಡಿದೆ, ಅದೇ ಕೆರೆ ದಂಡೇ ಮೇಲೆ ಕುಳಿತು ಓದಿದ ಅದೆಷ್ಟೋ ಪುಸ್ತಕಗಳು, ಮನದೊಳಗೆ ರಚನೆಯಾದ ಅದೆಷ್ಟೋ ಬರಹ ರೂಪಕ್ಕಿಳಿಯದ, ಕೇವಲ ನನ್ನ ಅಜ್ಜಿಗೆ ಮಾತ್ರ ಹೇಳಿಕೊಂಡ ಅದೆಷ್ಟೋ ಕಥೆ ಕಾದಂಬರಿಗಳು ಇದೆಲ್ಲ ಆ ದಂಡೆಯಿಲ್ಲದ ಕೆರೆಗಷ್ಟೇ ಗೊತ್ತು.

ಕೇವಲ ಮಳೆಗಾಲದಲ್ಲಷ್ಟೇ ನೀರು ತುಂಬಿಕೊಳ್ಳುವ ಆ ಪುಟಾಣಿ ಕೆರೆ ನಮ್ಮ ಮನೆಯಲ್ಲಿ ವ್ಯವಸಾಯ ಮಾಡ್ತಾ ಇದ್ದ ದಿನಗಳಲ್ಲಿ ಕೋಣಗಳಿಗೆ ಸ್ನಾನ ಮಾಡೋ ಸ್ವಿಮ್ಮಿಂಗ್ ಪೂಲ್ ಅದಕ್ಕೆಂದೇ ಕಟ್ಟಿಸಿದ್ದು ಇರಬಹುದೇನೋ ಗೊತ್ತಿಲ್ಲ. ಆ ಕೆರೆಯ ಅಕ್ಕ ಪಕ್ಕವೇ ನನ್ನ ಪುನರ್ಪುಳಿ ಸ್ನೇಹಿತರು ಇರೋದು. ನೀರಲ್ಲೇ ಮುಳುಗರುವ ಅದೆಷ್ಟೋ ಗಿಡ ಮರಗಳು ಆ ಕೆರೆಯ ಆಭರಣಗಳಂತೆ ನನಗೆ ಅನಿಸೋದು. ಇನ್ನು ಅಲ್ಲಿಗೆ ಹರಿದು ಬರುವ ಇನ್ನೊಂದು ತೋಡು ಕಾಡಿನ ನಡುವೆ ಸೀಳಿಕೊಂಡು ಬಳುಕುತ್ತ ಬರ್ತಾ ಇದ್ರೆ ಪ್ರಕೃತಿ ಮಾತೆಯ ಮಡಿಲಲ್ಲಿ ಪ್ರತೀ ಪರಿಸರ ಪ್ರೇಮಿಯೂ ಕಳೆದು ಹೋಗೋದು ಗ್ಯಾರಂಟೀ.

ನನ್ನ ಪಾಲಿಗೆ ಆ ಕಾಡು ಕಾಡಿನ ತೋಡು ನನ್ನೊಳಗೆ ಬೆಸೆದುಕೊಂಡಿರೋ ಅನೂಹ್ಯ ಬಾಂಧವ್ಯ. ಅದೇ ತೋಡಿನಲ್ಲಿ ಗಿಡ ಮರಗಳನ್ನೆಲ್ಲ ಮುಟ್ಟಿ ಮಾತಾಡಿಸ್ತಾ ಕಾಲು ತೋಯಿಸಿಕೊಳ್ಳುತ್ತ ಮುಂದೆ ಸಾಗಿದರೆ ಸಿಗೋದೇ ದೊಡ್ಡ ಕೆರೆ, ಅನಾದಿ ಕಾಲದಿಂದ ಬಯಲು ಗದ್ದೆಗಳಲ್ಲಿ ಭತ್ತ ಬೆಳೆಯೋಕೆ ಅಂತಾನೆ ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ಕೆರೆ ಮೊದಲೆಲ್ಲ ಅದರ ತುಂಬಾ ನೀರಿನ ಜೊತೆ ಮರಗಳೇ ತುಂಬಿ ಕೊಂಡಿದ್ದವು. ಹೂಳೆತ್ತಿದ ಮೇಲೆ ಬರೀ ಕೆರೆ ಮಾತ್ರ ಉಳಿದದ್ದು, ಮಳೆಗಾಲದಲ್ಲಿ ಅದರ ತುಂಬಾ ತುಂಬಿರೋ ನೀರು, ಸುತ್ತ ಕಾಡು, ಗುಡ್ಡ ಬೆಟ್ಟಗಳಿಂದ ಹರಿದು ಬರೋ ನೀರು ಅಲ್ಲೊಂದು ಜೀವ ಕಳೆ ತುಂಬುತ್ತಿತ್ತು. ಮಳೆಗಾಲದಲ್ಲಿ ನಮ್ಮ ಮನೆಯಿಂದ ಶುರುವಾಗುವ ಈ ಯಾನವನ್ನು ನಾನು ಯಾವಾಗ್ಲೂ ಮಿಸ್ ಮಾಡಿಕೊಳ್ಳೋದೇ ಇಲ್ಲ. ಈ ವರ್ಷ ಮೊದಲ ಬಾರಿ ಮಿಸ್ ಆಗ್ತಾ ಇದೆ ಕೊರೋನಾ ಹಾವಳಿಯಿಂದಾಗಿ.

ಇನ್ನು ಮೊದಲೆಲ್ಲ ಬೆಳಿಗ್ಗೆ ಎದ್ದ ತಕ್ಷಣ ಓಡ್ತಾ ಇದ್ದದ್ದೇ ತೋಟಕ್ಕೆ ತಾಗಿಕೊಂಡಿರುವ ಹೊಳೆಯಲ್ಲಿ ಕೆಂಪು ನೀರು ಬಂದಿದ್ಯ, ತೋಡಲ್ಲಿ ನೀರು ಜಾಸ್ತಿ ಆಗಿದ್ಯಾ ಅಂತ, ಒಮ್ಮೆ ತುಂಬು ಮಳೆಗಾಲದಲ್ಲಿ ತೆಂಗಿನಕಾಯಿ ಬಿದ್ದಿದ್ಯಾ ಅಂತ ಹೊಳೆ ಬದಿಯ ತೋಟಕ್ಕೆ ತೋಡು ದಾಟಿ ಹೋಗಿ ವಾಪಸ್ ಅಜ್ಜಿ ಜೊತೆ ಬರುವಾಗ ಕಾಲು ಜಾರಿ ತೋಡಿನ ಒಳಗೆ ಬಿದ್ದು ಬಿಟ್ಟಿದ್ದೆ. ಒಮ್ಮೆ ಪೂರ್ಣ ಮುಳುಗಿ ಮೇಲೆ ಬಂದವಳನ್ನ ಕಾಪಾಡಿದ್ದೇ ಒಂದು ಚಿಕ್ಕ ಗಿಡ. ಪುಣ್ಯಕ್ಕೆ ಅಲ್ಲಿ ಗುಂಡಿಯಾದ್ದರಿಂದ ಸೆಳೆತ ಅಷ್ಟಿರಲಿಲ್ಲ, ಸ್ವಲ್ಪ ಆಚೆ ನೀರಿನ ಸೆಳೆತದ ಕಡೆಗೆ ಜಾರಿದ್ದರೂ ಹೊಳೆಯ ಪಾಲಾಗಿ ಬಿಡ್ತಾ ಇದ್ದೆ, ಆ ದಿನ ಅಲ್ಲಿ ಇದ್ದ ನನ್ನ ಅಕ್ಕ (ಕಸಿನ್) ಓಡಿ ಬಂದು ಕೈ ಕೊಟ್ಟಿಲ್ಲ ಅಂದ್ರೆ ಕಥೆನೇ ಬೇರೆ ಆಗಿಬಿಡ್ತಾ ಇತ್ತು. ಇನ್ನು ವರ್ಷಕ್ಕೆ ಕಡಿಮೆ ಅಂದರು ಒಂದು 3 ಸಲ ನೆರೆ ಬರ್ತಾ ಇತ್ತು, ಹೊಳೆ ತುಂಬಿ ತೋಟಕ್ಕೆ ನುಗ್ಗಿ ಮೇಲೆ ಬಂತು ಅಂದ್ರೆ ಅದನ್ನ ನೋಡೋಕೆ ಹೋಗಿ ನಿಂತು ಕೊಳ್ಳೋದು ಮಳೆಗಾಲದ ಒಂದು ಸುಂದರ ಕುತೂಹಲ. ನೀರು ಮೇಲೆ ಬಂದಷ್ಟೇ ವೇಗದಲ್ಲಿ ಕೆಳಗಿಳಿದು ಹೋಗ್ತಾ ಇತ್ತು. ಅದಾದ ಮೇಲೆ ತೋಟಕ್ಕೆ ಹೋದರೆ ಕೆಸರು ನೀರಲ್ಲಿ ಪಲ್ಟಿ ಹೊಡೆಯೋದು ಗ್ಯಾರಂಟೀ.

ಈ ಮಳೆ ಜೋರಾಗಿ ಬರುವಾಗ ಹಂಚಿನ ಮನೆಯ ಒಳಗೆ ಕೂತು ಆ ಸದ್ದುಗಳನ್ನ ಆಲಿಸ್ತಾ, ಅಜ್ಜಿ ಮಾಡಿದ ಹಲಸಿನ ಹಣ್ಣಿನ ಹಪ್ಪಳ ಜೊತೆಗೆ ತೆಂಗಿನ ಕಾಯಿ ತುಂಡು, ಗೋದಿ ಹಪ್ಪಳ ತಿಂತಾ ಒಂದು ಕಾದಂಬರಿ ಹಿಡಿದು ಓದೋದಕ್ಕೆ ಕೂತ್ರೆ ಏಳೋದೇ ಇಲ್ಲ. ಈಗಲೂ ಕೂಡ ಮಿಸ್ ಮಾಡ್ಕೊಳ್ಳೋದು ಮಳೆಯ ಆ ಸದ್ದನ್ನ ನಿಮಗ್ಗೊತ್ತಾ ಮಳೆಯ ಸದ್ದು ಡಿಪ್ರೆಶನ್’ಗೆ ಕೂಡ ಒಳ್ಳೆ ಮೆಡಿಸಿನ್ ಅಂತೆ. ಅದನ್ನೇ ಏಕಾಗ್ರತೆಯಿಂದ ಆಲಿಸ್ತಾ ಇದ್ರೆ ಯಾವುದೋ ಒಂದು ಅನುಭೂತಿ ನಮ್ಮನ್ನು ಆವರಿಸಿದ ಹಾಗೆ ಆ ರೀತಿಯ ದಿವ್ಯಾನುಭೂತಿ ಪಡೆಯದೇ ಈಗ ಅದೆಷ್ಟೋ ಕಾಲವಾಯಿತು ಅನಿಸುತ್ತಿದೆ. ನಗರ ಸೇರಿ ಹನ್ನೊಂದು ವರುಷವಾದರೂ ಇವತ್ತಿಗೂ ಮಿಸ್ ಮಾಡಿಕೊಳ್ಳದ ಮಳೆಗಾಲದ ಕನವರಿಕೆಗಳು, ಕಚಗುಳಿಗಳು ಎಡೆಬಿಡದೆ ಕಾಡುತ್ತಿವೆ. ಇನ್ನು ಹದಿನೈದು ದಿನಕ್ಕೆ ಮಳೆ ಮುಗಿದು ಹೋದರಂತೂ ಮುಂದಿನ ಮಳೆಗಾಲಕ್ಕೆ ಕಾಯಬೇಕಷ್ಟೇ. ಜೊತೆಗೆ ಕೇವಲ ಮಳೆಗಾಲಕ್ಕೆ ಮಾತ್ರವೇ ಹಣ್ಣು ಕೊಡುವ ನನ್ನ ಪ್ರೀತಿಯ ಹಲಸಿನ ಮರ ಈ ಸಲ ನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೆ ಹಾಗೆ ನಾನು ಕೂಡ.

ಇರಲಿ… ಕಾಯೋದ್ರಲ್ಲೂ ಒಂದು ಸುಖವಿದೆಯಂತೆ. ಹಾಗೆ ನೋಡಿದರೆ ನಮ್ಮ ಸರಕಾರ, ಜಿಲ್ಲಾಡಳಿತ ವೈದ್ಯಕೀಯ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಮಾಡ್ತಾ ಇರೋ ತ್ಯಾಗದ ಮುಂದೆ ನಮ್ಮ ನಿಮ್ಮ ಸಣ್ಣ ಆಸೆ ಕನಸು ಏನು ಅಲ್ಲ.ಅವರ ಶ್ರಮ ವ್ಯರ್ಥವಾಗದ ಹಾಗೆ ನೋಡಿಕೊಳ್ಳೋಣ ಈ ಸಲವಾದ್ರೂ ಬದಲಾಗೋಣ. ನಾಳೆಯಿಂದ ಮತ್ತೆ ಲಾಕ್ ಡೌನ್. ಇದನ್ನ ಮಾಡೋದ್ರ ಉದ್ದೇಶ ಸ್ವಲ್ಪವಾದರೂ ಕೊರೋನಾ ಹರಡೋ ಪ್ರಮಾಣ ಕಮ್ಮಿ ಆಗ್ಲಿ ಅಂತ ಅದನ್ನ ಬಿಟ್ಟು,ಹೊರಗೆ ಹೋಗೋಕೆ ಅವಕಾಶ ಇದೆ ಅಂತ ಅಗತ್ಯವಿಲ್ಲದೆ ಇದ್ದರೂ ಹೋಗಿ ಬರೋದು, ಅಂತರ ಕಾಯ್ದುಕೊಳ್ಳದೆ ಇರೋದು ಮಾಸ್ಕ್‌ ಹಾಕದೆ ಇರೋದು ಇದೆಲ್ಲ ಮಾಡ್ತಾ ಇದ್ರೆ ನಮ್ಮನ್ನೆಲ್ಲ ಕೊರೋನಾದಿಂದ ಕಾಪಾಡೋದಕ್ಕೆ ಯಾರಿಗೂ ಆಗಲ್ಲ. ಇವತ್ತು ಎಷ್ಟೋ ಜನರಿಗೆ ಇನ್ನೂ ಪರಿಸ್ಥಿತಿಯ ಗಂಭೀರತೆ ಅರ್ಥ ಆಗ್ತಾ ಇಲ್ಲ. ತಮ್ಮ ಕಾಲ ಬುಡಕ್ಕೆ ಬರೋ ತನಕ ಉಡಾಫೆಯಿಂದ ವರ್ತಿಸೋದು ಖಂಡಿತಾ ತಪ್ಪು. ಎಲ್ಲರೂ ಜೋಪಾನವಾಗಿ ಮನೇಲೆ ಇದ್ದು ಸಿಕ್ಕ ಅವಕಾಶವನ್ನು ಬಳಸ್ಕೊಂಡು ಹೊಸತೇನಾದ್ರೂ ಯೋಚಿಸಿ ಮಾಡಿ, ಹಾಗೆ ಪ್ರೀತಿ ಪಾತ್ರರ ಜೊತೆ ಸಮಯ ಕಳೀರಿ, ಒಳ್ಳೆ ಪುಸ್ತಕ ಓದೋದು, ಗಾರ್ಡನಿಂಗ್, ಯೋಗ ಎಲ್ಲದಕ್ಕಿಂತ ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾಗೋದು ಯಾಕೆ ಗೊತ್ತಾ ಇನ್ನು ಎಲ್ಲರಿಗೂ ಬೇಕಾದದ್ದು ಅದೊಂದೇ. ಆ ವಿಷಯದಲ್ಲಿ ಗಟ್ಟಿ ಇದ್ರೆ ಜೀವನವನ್ನು ಎದುರಿಸೋ ತಾಕತ್ತು ಇರುತ್ತೆ. ಇಲ್ಲಾಂದ್ರೆ ಈ ಲೈಫ್ ಇಷ್ಟೇನೆ ಅನ್ನಿಸಿಬಿಡುತ್ತೆ. ಹಾಗಾಗಿ ತಯಾರಾಗೋಕೆ ಒಂದಿಷ್ಟು ಅವಕಾಶ ಮತ್ತೆ ಸಿಕ್ಕಿದೆ ಅದನ್ನ ಸರಿಯಾಗಿ ಬಳಸಿಕೊಳ್ಳೋಣ ಏನಂತೀರಾ?
ನಾಳೆ ಬೆಳಿಗ್ಗೆ ಏಳು ಘಂಟೆಗೆ ರೆಡ್ ಎಫ್’ಎಂ ಅಲ್ಲಿ ಮತ್ತೆ ಸಿಗೋಣ.


Get In Touch With Us info@kalpa.news Whatsapp: 9481252093

Tags: Coastal AreaKannada News WebsiteLatest News KannadanatureR J Nayana ShettyrainSouth KendraUdupiಆರ್ ಜೆ ನಯನಾ ಶೆಟ್ಟಿಉಡುಪಿ
Share227Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಲಾಕ್ ಡೌನ್ ಮುಂದುವರೆಸುವ ಯೋಚನೆ ಇಲ್ಲ: ಸಿಎಂ ಯಡಿಯೂರಪ್ಪ

Next Post

ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬದು ನಿರ್ಮಿಸಿಕೊಳ್ಳಲು ಸಲಹೆ

kalpa News

kalpa News

Next Post

ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬದು ನಿರ್ಮಿಸಿಕೊಳ್ಳಲು ಸಲಹೆ

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL