ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ನಡೆದ ಕಾರ್ ರೇಸ್’ನಲ್ಲಿ ಶಿವಮೊಗ್ಗದ ಜಿ.ಪಿ. ಮೋಹನ್’ರಾಜ್ ಅವರು ಹಲವು ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹಾಸನ ಜಿಲ್ಲೆಯ ಹೊಸೂರು ಗೇಟ್ ಬಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಬೈಕ್ ಹಾಗೂ ಕಾರ್ ರೇಸ್’ನಲ್ಲಿ ರಾಜ್ಯ ಹಲವು ತಂಡಗಳು ಪಾಲ್ಗೊಂಡಿದ್ದವು.
ಇದರಲ್ಲಿ, 1600 ಸಿಸಿ ಕಾರುಗಳ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಮೋಹನ್, 1400 ಸಿಸಿ ಕಾರುಗಳ ವಿಭಾಗ, ಇಂಡಿಯನ್ ಓಪನ್, ನೋವೀಸ್ ವಿಭಾಗ ಹಾಗೂ ಒಟ್ಟಾರೆ ಅತಿ ವೇಗದ ಕಾರ್ ರೇಸ್ ವಿಭಾಗದಲ್ಲೂ(Overall fastest driver of the driver) ಸಹ ಪ್ರಥಮ ಸ್ಥಾನಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೋಹನ್ ಅವರು ಸ್ಪರ್ಧೆ ಮಾಡಿದ್ದ ಐಡಿಯಲ್ ರೇಸಿಂಗ್ ತಂಡವನ್ನು ಮೆಕ್ಯಾನಿಕ್-ಟ್ಯೂನರ್ ಆದ ಮೋಯಿನ್ ಪಾಷಾ ಅವರು ಮಾಲೀಕರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post