ಚಳ್ಳಕೆರೆ: ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆ ಕಳೆದ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆದ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಶೇ. 97.35 ರಷ್ಟು ಫಲಿತಾಂಶ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಟ್ಟು 29ರಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 09, ಪ್ರಥಮ ದರ್ಜೆಯ್ಲಿ ಮೂವರು, ದ್ವಿತೀಯ ದರ್ಜೆಯಲ್ಲಿ 15 ಹಾಗೂ ತೃತೀಯ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿ ಪಾಸಾಗಿದ್ದಾರೆ.
ವಿದ್ಯಾರ್ಥಿಗಳಾದ ಕೆಂಚಲಿಂಗಪ್ಪ,(574) 91.84%, ಎಂ. ಮೇಘನ (573) 91.64% ಲಕ್ಷ್ಮೀ ಆರ್, (553), 84.48% ಅಭಿಜಿತ್, (553), ಜೀವನ. ಎಸ್, (542), ಸುಷ್ಮಿತ,(542), ಚೈತ್ರ(541) ಮಂಜುಳ (534) ಚಂದನಗೌಡ, (534) ರಾಗಿಣಿ, (534)ಸತೀಶ, (534) ಸುಪ್ರೀತ (515)ಅಂಕಗಳನ್ನು ಪಡೆದಿದ್ದಾರೆ.
ಹೆಚ್ಚಿನ ಅಂಕ ಪಡೆದ ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳಿಗೆ ಎಸ್’ಡಿಎಂಎಂ ಸಮಿತಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ)
Discussion about this post